ಸುದ್ದಿಲೈವ್/ಶಿವಮೊಗ್ಗ
ಅದ್ದೂರಿ ದಸರಾದ ಅಂಗವಾಗಿ ಇಂದು ದೇಹದಾರ್ಢ್ಯ ಸ್ಪರ್ಧೆ ನಡೆದಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆವತಿಯಿಂದ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಜ್ಯಾದ್ಯಂತ ನೂರಾರು ಸ್ಪರ್ಧಿಗಳು ಇಂದು ಭಾಗವಹಿಸಿದ್ದರು.
ಒಬ್ಬರ ಸ್ನಾಯುಗಳನ್ನ ನಿರ್ಮಿಸಲು, ನಿಯಂತ್ರಿಸಲು ಮತ್ತು ಅಭಿವೃದ್ಧಿ ಪಡಿಸಲು ಪ್ರಗತಿಶೀಲ ಪ್ರತಿರೋಧ ವ್ಯಾಯಮದ ಅಭ್ಯಾಸವೇ ಬಾಡಿಬಿಲ್ಡಿಂಗ್ ಎಂದು ಗೂಗಲ್ ಸರ್ಚ್ ನಲ್ಲಿ ತಿಳಿದು ಬರುತ್ತದೆ. ಪ್ರಾಚೀನ ಕಾಲದಲ್ಲಿ ಕಲ್ಲು ಎತ್ತುವ ಸ್ಪರ್ಧೆಯಿಂದ ಈ ಸ್ಪರ್ಧೆ ಆರಂಭವಾಗುತ್ತದೆ. ವೇಟ್ ಲಿಫ್ಟಿಂಗ್ ಸಹ 1880 ರಿಂದ 1953 ರಲ್ಲಿ ಯೂರೋಪ್ ನಲ್ಲಿ ಇದು ಅಭಿವೃದ್ಧಿಗೊಳ್ಳುತ್ತಾ ಬಂದಿತು.
ಆಗಿನ ಕಾಲದಲ್ಲಿ ದೊಡ್ಡಹೊಟ್ಟೆ ಕೊಬ್ಬಿನ ಅಂಶ ಹೊಂದಿದ ಮನುಷ್ಯರು ಈ ಸ್ಪರ್ಧೆಯಲ್ಲಿ ಕಾಣುತ್ತಿದ್ದರು. ಈಗ ಈ ಸ್ಪರ್ಧೆಯಲ್ಲಿ ಹೊಟ್ಟೆ, ಕೊಬ್ಬಿನ ಅಂಶವನ್ನ ಕರಗಿಸಬೇಕಿದೆ. 19 ನೇ ಶತಮಾನದ ಅಂತ್ಯದಲ್ಲಿ ಯುಜೆನ ಸ್ಯಾಂಡೋ ಎಂಬುವರು ಆಧುನಿಕ ದೇಹದಾರ್ಡ್ಯ ಸ್ಪರ್ಧೆಯನ್ನ ಸರಳೀಕರಣಗೊಳಿಸಿದರು. ಇವರನ್ನ ಆಧುನಿಕ ದೇಹದಾರ್ಢ್ಯ ಪಿತಾಮಹ ಎಂದು ಕರೆಯಲ್ಪಡುತ್ತಾರೆ.
ಹೀಗೆ ದೇಹದಾರ್ಡ್ಯ ಸ್ಪರ್ಧೆ ಇತಿಹಾಸವನ್ನ ನೆನಪಿಸುತ್ತದೆ. ಇಂದು ಅಂಬೇಡ್ಕರ್ ಭವನ ದೇಹದಾರ್ಢ್ಯ ಸ್ಪರ್ಧೆ ನೋಡಲು ಸಹ ಜನ ಕಿಕ್ಕಿರಿದು ತುಂಬಿದ್ದರು. 8 ಕೆಟಗರಿ, 113 ಸ್ಪರ್ಧಾಳುಗಳಿಂದ ಈ ಸ್ಪರ್ಧೆಯಲ್ಲಿ ಬಹುಮಾನವನ್ನ ಇಡಲಾಗಿದೆ. ಬೈಸಿಪ್, ಚೆಸ್ಟ್, ಥೈಸ್ ಹೀಗೆ ಹುರಿಗಟ್ಟಿದ ದೇಹದ ಪ್ರದರ್ಶನವನ್ನ ಒಬ್ಬೊಬ್ಬ ಕ್ರೀಡಾಪಟುಗಳು ತೋರಿಸಿದ್ದಾರೆ. ಇಂತಹ ಹುರಿಗಟ್ಟಿನ ದೇಹಗಳನ್ನ ಕಾಪಾಡಿಕೊಳ್ಳುವುದು ಸ್ಪರ್ಧೆಯಲ್ಲಿ ಗೆಲ್ಲುವ ಅಂಶವಾಗಿದೆ.
55 ಕೆಜಿ, 60 ಕೆಜಿ, 65 ಕೆಜಿ, 70 ಕೆಜಿ ಒಳಗಿನ ತೂಕ ಸೇರಿದಂತೆ 8 ವರ್ಗಗಳ ಸ್ಪರ್ಧೆ ನಡೆದಿದೆ. ರೆಫರಿಯಾಗಿ ಕಿಶೋರ್ ಕುಮಾರ್ ಆಸೀಫ್ ಕುಸ್ಗಲ್, ಎನ್ ಡಿ ಕುಮಾರ್, ಶಂಕರ್ ಪಿಳೈ ರಾಘವೇಂದ್ರ ಬಸವರಾಜ್ ಅರಳಿಮಠ ಭಾಗಿಯಾಗಿದ್ದರು.
ದ.ಕ, ಉಡುಪಿ ಉ.ಕ ಮೈಸೂರು, ದಾವಣಗೆರೆ, ಧಾರವಾಡ, ಕೊಪ್ಪಳ ಚಿಕ್ಕಮಗಳೂರು, ಕಾರವಾರ ರಾಯಚೂರು, ತುಮಕೂರು ಬೆಳಗಾವಿ, ಹಾಸನ ಗದಗ ಶಿವಮೊಗ್ಗ ಬಳ್ಳಾರಿ ಹಾವೇರಿ, ಬಿಜಾಪುರ, ಬೀದರ್, ದೇಹಧಾರ್ಡ್ಯ ಪಟುಗಳು ಭಾಗಿಯಾಗಿದ್ದರು.