ಅಪ್ಪು ಪುಣ್ಯಸ್ಮರಣೆಯ ಅಂಗವಾಗಿ ಮೇಕೆ ದಾನ-ಮಹಿಳೆ ಬದುಕಿಗೆ ಆಧಾರವಾದ ಯುವಕರ ತಂಡ



ಸುದ್ದಿಲೈವ್/ಭದ್ರಾವತಿ

ವಿಭಿನ್ನವಾಗಿ ಅಪ್ಪು ಪುಣ್ಯಸ್ಮರಣೆಯನ್ನ ಭದ್ರಾವತಿಯ ಈ ಯುವಕರ ತಂಡ ಆಚರಿಸಿದೆ.  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಈ ಯುವಕರು, ಅಸಹಾಯಕ ಮಹಿಳೆಗೆ ಸ್ವಾವಲಂಭಿಯಾಗಲು ಎರಡು ಮೇಕೆ ಮರಿಗಳನ್ನು ನೀಡಿ ಇತರೆ ಯುವಕರಿಗೆ ಮಾದರಿಯಾಗಿದ್ದಾರೆ.  ಜೀವನದಲ್ಲಿ ಸ್ವಾಲಂಬಿಯಾಗಿ ಬದುಕು ನಿರ್ಮಾಣ ಮಾಡಿಕೊಳ್ಳಲು ಸಹಾಯಹಸ್ತ ಚಾಚಿದ್ದಾರೆ.

ಭದ್ರಾವತಿಯ ಪ್ರಶಾಂತ್ ಹಾಗೂ ಸ್ನೇಹಿತರು, ಇಂದು ಪುನೀತ್ ರಾಜಕುಮಾರ್ 3 ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ, ಅಪ್ಪು ದಾರಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸುವ ಸಲುವಾಗಿ, ನೆರವು ನೀಡಿದ್ದಾರೆ.

ಭದ್ರಾವತಿಯ ಜಂಕ್ಷನ್ ನಲ್ಲಿರುವ ರಂಗನಾಥಪುರ ಗ್ರಾಮದಲ್ಲಿ ಅಸಹಾಯಕ ಮಹಿಳೆಗೆ ಎರಡು ಮೇಕೆ ಮರಿಗಳನ್ನು ನೀಡುವ ಮೂಲಕ ಜೀವನದಲ್ಲಿ ಸ್ವಾವಲಂಬಿಯಾಗಲು ದಾರಿ ಮಾಡಿಕೊಟ್ಟಿದ್ದಲ್ಲದೇ, ಬದುಕು ನಿರ್ಮಾಣ ಮಾಡಿಕೊಳ್ಳಲು ಜೋಶ್ ತುಂಬಿದ್ದಾರೆ.  ಅಷ್ಟೇಅಲ್ಲ, ಡಾಕ್ಟರ್ ಪುನೀತ್ ರಾಜಕುಮಾರ್ ನಡೆದ ದಾರಿಯಲ್ಲಿ ನಮ್ಮ ಯುವಜನತೆ ಸಾಗಿ  ಎಂದು ಇತರೆ ಯುವಕರಿಗೆ ಈ ಮೂಲಕ ಕರೆ ನೀಡಿದ್ದಾರೆ.

ಮಹಿಳೆಯ ಮನೆಯ ಮುಂದೆ ಅಪ್ಪು ಪೊಟೊ ಇಟ್ಟು ಹೂವಿನ ಮಾಲೆ ಹಾಕಿ ಅಪ್ಪುವಿನ ಮುಂದೆ ಎರಡು ಮೇಕೆಯನ್ನ ದಾನ ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close