ವಾಟರ್ ಬೋರ್ಡ್ ಅಧಿಕಾರಿಗಳ ವಿರುದ್ಧ ಸಂಘಟನೆಗಳು ನಿಗಿ ನಿಗಿ..!


ಸುದ್ದಿಲೈವ್/ಶಿವಮೊಗ್ಗ

ವಾಟರ್ ಬೋರ್ಡ್ ನಿಂದ ಸರಬರಾಜು ಆಗುವ ಕುಡಿಯುವ ನೀರಿನ ವಿರುದ್ಧ ಸಂಘ ಸಂಸ್ಥೆಗಳು ನಿಗಿ ನಿಗಿ ಎನ್ನುತ್ತಿವೆ. ಕುಡಿಯುವ ನೀರಿನಿಂದ ಅನಾರೋಗ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೊಸದಾಗಿ ಆಗಮಿಸಿರುವ ವಾಟರ್ ಬೋರ್ಡ್ ನ ಎಇಇ ವಿರುದ್ಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮುಗಿಬಿದ್ದಿವೆ. 



ಇಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಸುದ್ದಿಗೋಷ್ಠಿ ನಡೆಸಿ ಅಧಿಕಾರಿಗಳ ಚಳಿ ಬಿಡಿಸಿದರೆ ಕರ್ನಾಟಕ ರಕ್ಷಣ ವೇದಿಕೆ  ಸ್ವಾಭಿಮಾನಿ ಬಳಗ ವಾಟರ್ ಬೋರ್ಡ್ ನ ನಿರ್ವಹಣೆ ಕುರಿತು ಆಕ್ಷೇಪವೆತ್ತಿದೆ. ಪಾಲಿಕೆ ಮಾಜಿ ಸದಸ್ಯ ಹೆಚ್ ಸಿ ಯೋಗೀಶ್ ಅವರ ತಂಡ ಪಂಪ್ ಹೌಸ್ ಗೆ ಭೇಟಿ ನೀಡಿ ಕುಡಿಯುವ ನೀರಿನ ಬಗ್ಗೆ ಆಕ್ಷೇಪಣೆ ಸಲ್ಲಿಸಿದೆ. 



ಅದರಂತೆ ನಿನ್ನೆ ನಾಗರೀಕ ಹಿತರಕ್ಷಣ ಸಮಿತಿ‌ಯ ಅಧ್ಯಕ್ಷ ವಸಂತ್ ಕುಮಾರ್ ಅವರ ನೇತೃತ್ವದಲ್ಲಿ ಪಂಪ್ ಹೌಸ್ ಗೆ  ಭೇಟಿ ನೀಡಿ ಪರಿಶೀಲಿಸಿದೆ.  ನೀರು ಸರಬರಾಜು ಇಲಾಖೆ ಹೇಳುವಂತೆ "ಮಳೆಯ ಕಾರಣದಿಂದ ಆಧಿಕ ಮಣ್ಣೆನ ಅಂಶ ನೀರಿನಲ್ಲಿ ಇದೆ" ಎಂಬುದು ಬಹುತೇಕ ಸುಳ್ಳು ಎಂದು ಸಾಬೀತು ಪಡಿಸಿದೆ.‌ ನಿಜವಾದ ಕಾರಣ ಕೊಳಚೆ ನೀರು ಸರಭರಾಜಿಗೆ ನಿರ್ವಹಣೆಯ ವೈಪಲ್ಯವೇ ಮುಖ್ಯ ಕಾರಣ ಎಂದು  ಹೆಳಿದೆ.  

ಕೆ.ಆರ್. ನೀರು ಶುದ್ದೀಕರಣ ಘಟಕದಲ್ಲಿರುವ 3 ಕ್ಲಾರಿ ಪ್ಲಕ್ಚುವೇಟರ್ ಕೆಲಸ ನಿಲ್ಲಿಸಿ 2 ತಿಂಗಳಾಗಿವೆ. ನೀರು ಶುದ್ದಿಕರಣದಲ್ಲಿ ಶೇಕಡಾ 85% ಶುದ್ದೀಕರಣ ಆಗುವುದೇ ಇಲ್ಲಿ. ಲ್ಯಾಬ್ ಟೆಸ್ಟಿಂಗ್ ಇಕ್ಯೂಪ್ಮೇಂಟ್ಸ ಕೆಲಸ ಮಾಡುತ್ತಿರಲಿಲ್ಲ.  ಲ್ಯಾಬ್ ಸರಿಯಾಗಿ  ಕಾರ್ಯ ನಿರ್ವಹಿಸುತ್ತಿಲ್ಲ. ನೀರು ಶುದ್ದೀಕರಣಕ್ಕೆ ಆಲಂ ಸರಿಯಾದ ಪ್ರಮಾಣದಲ್ಲಿ ಬಳಸುತ್ತಿಲ್ಲ. ನೀರಿಗೆ ಕ್ಲೊರಿನ್ ಮಿಕ್ಸ ಮಾಡಲು ಆಳತೆಯ  ಎರಡೂ ಗೇಜ್ ಗಳು ಹಾಳಾಗಿದ್ದು ಆವೈಜ್ಞಾನಿಕವಾಗಿ ಕ್ಲೊರಿನ್ ನೀರಿಗೆ ಸೇರಿಸಲಾಗುತ್ತಿದೆ. ಹೀಗೆ ನೀರು ಸರಬರಾಜು ಮಂಡಳಿ ನಿರ್ವಹಣೆಗೆ ವಿಫಲರಾಗಿರುವುದೇ  ಕೊಳಕು ನೀರು ಸರಬರಾಜಾಗಲು ಕಾರಣ ಎಂದು ವೇದಿಕೆಯ ತಂಡಕ್ಕೆ ಮನವರಿಕೆ ಮಾಡಿದೆ.‌  


ಇಂದು ಕರ್ನಾಟಕ ಹಿತರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷ ಮಧುಸೂಧನ್ ಎಸ್.ಎಂ ರವರ ನೇತೃತ್ವದಲ್ಲಿ ಇಂದು ಭೇಟಿ ಮಾಡಿ ಎಇಇ ಮಿಥುನ್ ಗೆ ಮನವಿ ಸಲ್ಲಿಸಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ಸರಬರಾಜಾಗುತ್ತಿರುವ  ಕುಡಿಯುವ ನೀರು ಮಣ್ಣು ಮಿಶ್ರಿತ ನೀರಾಗಿದ್ದು, ಈ ಕುಡಿಯುವ ನೀರಿನಿಂದ ಸಾರ್ವಜನಿಕರು ಹಾಗೂ ಮಕ್ಕಳು ಆನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಇದಕ್ಕೆ ನೇರ ಹೊಣೆ ಜಲಮಂಡಳಿಯವರಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. 

ಶುದ್ಧಿಕರಣ ಘಟಕದಲ್ಲಿರುವ ಮೂರು ಕ್ಲಾರಿ ಪ್ಲಕ್ಟುವೇಟರ್ ಕೆಲಸ ನಿಲ್ಲಿಸಿ ಎರಡು ತಿಂಗಳಾಗಿದೆ. ನೀರು ಶುದ್ಧ ಕರಣದಲ್ಲಿ ಶೇಕಡ 85% ರಷ್ಟು ಶುದ್ಧಿಕರಣವಾಗುವುದೇ ಇಲ್ಲಿ. ಲ್ಯಾಬ್ ಟೆಸ್ಟಿಂಗ್ ಇಕ್ಯೂಪ್ಲೇಂಟ್ಸ್ ಕೆಲಸ ಮಾಡುತ್ತಿರಲ್ಲಿಲ್ಲ. ಲ್ಯಾಬ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ 'ಇದೇ ಕಾರಣದಿಂದಲೇ ನದಿ ನೀರು ಇಷ್ಟು ಮಣ್ಣು ಮಿಶ್ರಿತವಾಗಿ ಬರುತ್ತಿದೆ. ನೀರು ಶುದ್ಧಿಕರಣಕ್ಕೆ ಆಲಂ ಸರಿಯಾದ ಪ್ರಮಾಣದಲ್ಲಿ ಬಳಸುತ್ತಿಲ್ಲ ಎಂದು ದೂರಿದೆ. 

ನೀರಿಗೆ ಕ್ಲೋರಿಂಗ್ ಮಿಕ್ಸ್ ಮಾಡಲು ಅಳತೆಯ ಎರಡು ಗೇಜ್‌ಗಳು ಹಾಳಾಗಿದ್ದು ಅವೈಜ್ಞಾನಿಕವಾಗಿ ಕ್ಲೋರಿನ್ ನೀರಿಗೆ ಸೇರಿಸಲಾಗುತ್ತಿದೆ. ಹೀಗೆ ನೀರು ಸರಬರಾಜು ಮಂಡಳಿ ನಿರ್ವಹಣೆಗೆ ವಿಪಲವಾಗಿರುವುದೇ ಈ ರೀತಿ ಕೊಳಕು ನೀರು ಸರಬರಾಜು ಆಗಲು ಕಾರಣವಾಗಿದೆ. ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು 24x7 ಬಿಡುವ ನೀರಿನ ನಿಗದಿತ ಸಮಯವು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. 

ವಾಟರ್ ಬೋರ್ಡ್ ಅಧಿಕಾರಿಗಳು  ಸಾರ್ವಜನಿಕರಿಗೆ ಅನುಕೂಲವಾಗುವಂತೆ ತುರ್ತು ಕ್ರಮವಾಗಿ ಕಾರ್ಯ ನಿರ್ವಹಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close