ಆರೋಪಿ ಅಮ್ಮು ಕಾಲಿಗೆ ಗುಂಡೇಟು



ಸುದ್ದಿಲೈವ್/ಶಿವಮೊಗ್ಗ

ಉದ್ಯಮಿ ನಾಸೀರ್ ಖಾನ್   ಅವರ ಮೇಲೆ ಶಸ್ತ್ರಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಅಮ್ಮು ಅಲಿಯಾಸ್ ಹಬೀಬುಲ್ಲಾ ಎಂಬುವರ ಕಾಲಿಗೆ ಗುಂಡೇಟು ಬಿದ್ದಿದೆ. 

ಆರೋಪಿಯು ಗರುಡ ಲೇಔಟ್ ನಲ್ಲಿದ್ದಾನೆ ಎಂದು ತಿಳಿದ ತಕ್ಷಣ ತುಂಗ ನಗರ ಪೊಲೀಸರಾದ ಪಿಐ ಗುರುರಾಜ್ ಮತ್ತು ಸಿಬ್ಬಂದಿಗಳು ಬಂಧಿಸಲು ತೆರಳಿದ್ದರು. ಸಿಬ್ಬಂದಿಗಳು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಹಬೀಬುಲ್ಲಾ ಅಲಿಯಾಸ್ ಅಮ್ಮು (31) ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. 

ಅಮ್ಮು ತಪ್ಪಿಸಿಕೊಳ್ಳಲು ಸಣ್ಣದಾದ ಶಸ್ತ್ರಾಸ್ತ್ರಗಳನ್ನ ಬಳಸಿ ಪೊಲೀಸ್ ಪಿಸಿ ಜಯಪ್ಪ ಎಂಬುವರ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾನೆ.ಈ ವೇಳೆ ಪಿಸಿ ಜಯಪ್ಪನವರಿಗೆ ಗಾಯವಾಗಿದೆ. ಪಿಐ ಗುರುರಾಜ್ ಎಚ್ಚರಿಕೆಯ ನಡುವೆಯೂ ಅಮ್ಮು ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಅಮ್ಮು ಕಾಲಿಗೆ ಗುಂಡೇಟು ತಗುಲಿದೆ. 



ಆರೋಪಿ ಮತ್ತು ಗಾಯಾಳು ಜಯಪ್ಪರನ್ನ‌ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಆರೋಪಿ ಅಮ್ಮು ಕಬೀರ್ ಎಂಬುವರ ಹತ್ಯೆಯಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close