Girl in a jacket

ಸಂಚಲನ ಮೂಡಿಸಿದ ಗೃಹ ಸಚಿವರ ಭೇಟಿ


ಸುದ್ದಿಲೈವ್/ಶಿವಮೊಗ್ಗ

ಸಾಗರದ ಕಾಗೋಡು ತಿಮ್ಮಪ್ಪರನ್ನ ಮಾತನಾಡಿಸಲು ಹೊರಟಿದ್ದ ಗೃಹ ಸಚಿವ ಡಾ.ಜಿ ಪರಮೇಶ್ವರ್ ದಿಡೀರ್ ಎಂದು ಕುಂಸಿ ಠಾಣೆಗೆ ಭೇಟಿ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 

ಶಿವಮೊಗ್ಗದಿಂದ ಸಾಗರದ ಕಡೆ ಹೊರಟಿದ್ದ ಸಚಿವರ ಕಾರು ಕುಂಸಿ ಠಾಣೆಯ ಒಳಗೆ ಪ್ರವೇಶಿಸಿದ ನಂತರವೇ ಅಲ್ಲಿನ ಪಿಐ ಮತ್ತು ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿದೆ. ಸಚಿವರು ಬರುವ ವೇಳೆ ಪಿಐ ದೀಪಕ್, ಎಸ್ ಹೆಚ್ ಒ ಮತ್ತು ಸೆಂಟ್ರಿ ಮಾತ್ರ ಹಾಜರಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. 

ಠಾಣೆಯ ಸಿಬ್ಬಂದಿಗಳೆಲ್ಲಾ  ಸಚಿವರ ಬಂದೋ ಬಸ್ತ್ ನಲ್ಲಿದ್ದ ಕಾರಣ  ಭೇಟಿಯ ವೇಳೆ ಸಿಬ್ಬಂದಿಗಳಿರಲಿಲ್ಲ.  ಹಾಜರಾತಿ, ಬೀಟ್ಸ್ ಪುಸ್ತಕಗಳನ್ನ ಸಚಿವರು ಪರಿಶೀಲಿಸಿದ್ದಾರೆ. ಕೆಲವು ದೋಷಗಳು ಕಂಡು ಬಂದಿದ್ದರಿಂದ ಬೀಟ್ಸ್ ಗಳನ್ನ ಸರಿಪಡಿಸಿಕೊಳ್ಳುವಂತೆ ಪಿಐಗೆ ಸೂಚನೆಯನ್ನೂ ನೀಡಿರುವುದಾಗಿ ತಿಳಿದು ಬಂದಿದೆ. 

ಎಲ್ಲೇ ಹೋದರು ಗೃಹಸಚಿವ ಡಾ.ಜಿ.ಪರಮೇಶ್ವರ್ ಠಾಣೆಗೆ ಈ ರೀತಿಯ ಸಪ್ರೈಸ್ಡ್ ವಿಸಿಟ್ ನೀಡುವುದು ಮಾಮೂಲಿ. ಅದರಂತೆ ಇಂದು ಸಾಗರಕ್ಕೆ ತೆರಳುವ ವೇಳೆ ಕುಂಸಿ ಠಾಣೆಗೆ ಭೇಟಿ ನೀಡಿದ್ದಾರೆ.

ಇದೇ ವೇಳೆ ಹಾಜರಿದ್ದ ಗ್ರಾಮಸ್ಥರನ್ನೂ ಸಚಿವರು ಮಾತನಾಡಿಸಿದ್ದಾರೆ.  ಠಾಣೆ ಹಳೆಯದಾದುರಿಂದ ಸರಿಪಡಿಸಿ ಕೊಡುವಂತೆ ಹಾಗೂ ಮೊದಲು  ಸಬ್ ಇನ್ ಸ್ಪೆಕ್ಟರ್ ಅವರ ಠಾಣೆಯಾಗಿದ್ದು ಈಗ ಮೇಲ್ದರ್ಜೆಗೆ ಏರಿಸಿದ ಪರಿಣಾಮ ಪಿಐ ಠಾಣೆಯಾಗಿದೆ. 


ನಾಲ್ಕು ಜನ ಸಬ್ ಇನ್ ಸ್ಪೆಕ್ಟರ್ ಗೆ ಕೂರುವ ಕೊಠಡಿಗಳಿಲ್ಲ. ಆದುದರಿಂದ ಹೊಸ ಠಾಣೆ ಮಾಡಿಸಿಕೊಡುವಂತೆ ಕೇಳಿಕೊಂಡಿರುವ ಬಗ್ಗೆನೂ ತಿಳಿದು ಬಂದಿದೆ. ಇದರಿಂದ ಸಚಿವರ ಸಪ್ರೈಸ್ಡ್ ವಿಸಿಟ್ ಜಿಲ್ಲೆಯ ಪೊಲೀಸರಲ್ಲಿ ಸಂಚಲನ ಮೂಡಿಸಿದ್ದಂತು ಸತ್ಯ


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close