Girl in a jacket

ಗೊಂದಲಗಳ ನಡುವೆ ಮತ್ತೊಂದು ವಿಮಾನ ಹಾರಾಟ


ಸುದ್ದಿಲೈವ್/ಶಿವಮೊಗ್ಗ

ಗೊಂದಲದ ನಡುವೆಯೇ ಮತ್ತೊಂದು ವಿಮಾನ ಹಾರಾಟ ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಆರಂಭವಾಗಿದೆ. ಚೆನ್ನೈಯಿಂದ ಶಿವಮೊಗ್ಗ ಮತ್ತು ಶಿವಮೊಗ್ಗದಿಂದ ಹೈದ್ರಾಬಾದ್ ಗೆ ಸ್ಪೈಸ್ ಜೆಟ್ ಹಾರಾಟ ಇಂದಿನಿಂದ ಆರಂಭಗೊಂಡಿದೆ. 

ವಿಮಾನ ನಿಲ್ದಾಣದ ನಿರ್ಮಾಣ, ನೈಟ್ ಲ್ಯಾಂಡಿಂಗ್, ಡಿಎಸಿಇ ದಂಡ, ಪರವಾನಗಿ ಸರಿಯಾಗಿ ನವೀಕರಣಗೊಳ್ಳದೆ ಇರುವುದು.  ಗೃಹಸಚಿವರು, ಮಾಜಿ ಸಿಎಂ ಬಿಎಸ್ ವೈ ಅವರಿದ್ದ ವಿಮಾನಗಳೆ ಸರಿಯಾಗಿ ಲ್ಯಾಂಡಿಂಗ್ ಆಗದೆ ವಾಪಾಸಾದ ಉದಾಹರಣೆಗಳಿವೆ.‌ ಈ ನಡುವೆ ಮತ್ತೊಂದು ವಿಮಾನ ಹಾರಾಟ ಅಚ್ಚರಿ ಮೂಡಿಸಿದೆ. ಪ್ರತಿದಿನ ಶಿವಮೊಗ್ಗದಿಂದ ಹಾರಾಡುತ್ತಿದ್ದ‌ ಗೋವ ವಿಮಾನದ ಹಾರಾಟ ವಾರಕ್ಕೆ ಮೂರು ದಿನಕ್ಕೆ ಬಂದಿದೆ. 

ಸಧ್ಯಕ್ಕಂತು ವಿಮಾನ ನಿಲ್ದಾಣ ಸಂಸದರ ಕನಸಿನ ಕೂಸಾಗಿದೆ. ನಿಲ್ದಾಣದ ಹೊಗಳಿಕೆ ಅವರಿಗೆ ಅನಿವಾರ್ಯನೂ ಆಗಿದೆ. 775 ಎಕರೆ 600 ಕೋಟಿ ವೆಚ್ಚದ ವಿಮಾನ ನಿಲ್ದಾಣ ತೆರಿಗೆ ಹಣ ಸಧ್ಯಕ್ಕೆ ವ್ಯಯವಾಗದಂತೆ ನೋಡಿಕೊಳ್ಳುವ ಜವಬ್ದಾರಿ ಬಂತು ನಿಂತಿದೆ. ಇಂದು ಚೆನ್ನೈನಿಂದ ಸ್ಪೈಸ್ ಜೆಟ್ ಶಿವಮೊಗ್ಗಕ್ಕೆ ಬಂದು ನಿಂತಿದೆ.‌ 

ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ, ವಿಮಾನ ಹಾರಾಟ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 12 ರೌಂಡ್ಸ್ ಇದೆ. ಎರಡು ವರ್ಷದಲ್ಲಿ ಶಿವಮೊಗ್ಗದಲ್ಲಿ ಹೆಚ್ಚಿನ ವಿಮಾನ ಹಾರಾಟ ನಡೆಯುತ್ತಿದೆ. ನವರಾತ್ರಿಯ ವೇಳೆ ಪ್ರಧಾನಿಯವರ ಕೊಡುಗೆಯೇ ಸ್ಪೈಸ್ ಜೆಟ್ ಎಂದಿದ್ದಾರೆ. 

ಚೆನ್ನೈ ಟು ಶಿವಮೊಗ್ಗ, ಶಿವಮೊಗ್ಗ ಟು ಹೈದ್ರಾಬಾದ್ ವಿಮಾನ ಹಾರಾಟ ಇಂದಿನಿಂದ ಆರಂಭವಾಗಿದೆ. ಗೋವಾ, ತಿರುಪತಿ, ಹೈದ್ರಾಬಾದ್ ಎರಡನೇ ರೂಟು ಆರಂಭವಾಗಿದೆ. ಆದರೆ ಮೂರನೇ ರೌಂಡ್ಸ್ ನಲ್ಲಿ ಹೈದ್ರಾಬಾದ್ ನಿಂದ ಶಿವಮೊಗ್ಗ, ಶಿವಮೊಗ್ಗ ಟು ಡೆಲ್ಲಿ ಇದು ಮೂರನೇ ರೂಟ್ ಆರಂಭವಾಗಬೇಕಿದೆ ಎಂದರು. ಶಿವಮೊಗ್ಗದಿಂದ ಚೆನ್ನೈನ ನಡುವಿನ ಈ ವಿಮಾನ ಹಾರಾಟ ಉಡಾನ್ ಯೋಜನೆ ಅಡಿ ಬಾರದೆ ಇರುವುದರಿಂದ ಹಾರಾಟದ ದರ ಹೆಚ್ಚಿಗೆ ಇರುವ ಸಂಭವ್ಯವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live