Girl in a jacket

ಸುಪ್ರೀಂ ನಿರ್ದೇಶನದಂತೆ ಬೋರ್ಡ್ ಎಕ್ಸಾಂ-ಮಧು ಬಂಗಾರಪ್ಪ



ಸುದ್ದಿಲೈವ್/ಶಿವಮೊಗ್ಗ

ಬೋರ್ಡ್ ಎಕ್ಸಾಂ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆದುಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು‌ 

ಮಾಧ್ಯಮಗಳಿಗೆ ಮಾತನಾಡಿ,  ಸುಪ್ರೀಂ ಕೋರ್ಟ್ 5,7,9,11 ತರಗತಿಗಳಿಗೆ ಬೋರ್ಡ್ ಎಕ್ಸಾಂ ಬೇಡ ಅಂತಾ ನಿರ್ದೇಶನ ನೀಡಿತ್ತು. ಅದರಂತೆ ಬೋರ್ಡ್ ಎಕ್ಸಾಂ ಬೇಡ ಅಂತಾ ಕೈಬಿಟ್ಟಿದ್ದೇವು ಅಷ್ಟೇ. ಇನ್ನುಳಿದಂತೆ 10, 12 ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ನಡೆಯಲಿದೆ.

ತುಂಗಾ ಭದ್ರಾ ನದಿ ಸ್ವಚ್ಛತೆ ವಿಚಾರದಲ್ಲಿ ಮಾತನಾಡಿದ ಅವರು, ನದಿಗಳ ಸ್ವಚ್ಛತೆ ಈಡಿ ರಾಜ್ಯ, ದೇಶದಲ್ಲಿ ಆಗಬೇಕು. ನದಿ ಶುದ್ದವಾಗಿರಬೇಕು. ನದಿ ರಕ್ಷಣೆಗೆ ಸಮಿತಿ ಮಾಡಿದ್ದಾರೆ ಎಂದರು. 

ಮುಡಾ ಕಚೇರಿ ಮೇಲೆ ಇಡಿ ದಾಳಿ ವಿಚಾರದಲ್ಲಿ ಸಚಿವರು ಸಿಡಿಮಿಡಿಗೊಂಡಂತೆ ಕಾಣುತ್ತಿದೆ. ಮುಡಾ ವಿಚಾರ ಬಿಟ್ಟು ಬಿಡಿ. ದಿನ ಬೆಳಗಾದರೆ ಅದನ್ನೇ ಕೇಳುತ್ತೀರಾ. ಕೇಂದ್ರ ಸರಕಾರ ಒತ್ತಡ ಹಾಕಿ ದಾಳಿ ನಡೆಸಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ. ಕಾನೊನು ಹೋರಾಟ ಮಾಡ್ತೀವಿ. ಕಾನೊನು ಹೋರಾಟದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂದರು. 

ನಮ್ಮ ಜಿಲ್ಲೆಯಲ್ಲು ಹಗರಣ ನಡೆದಿವೆ. ಅದನ್ನು ಹೊರಗೆ ತೆಗೆಯುತ್ತೇವೆ. ಮೂಡಾ ವಿಚಾರದಲ್ಲಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳಲಾಗುತ್ತಿದೆ. ಬಿಜೆಪಿಯವರಿಗೆ ಮಾಡಲು ಕೆಸಲ ಇಲ್ಲ. ರಾಜೀನಾಮೆ ಕೇಳುವದೇ ಅವರ ಕೆಲಸವಾಗಿದೆ. ಮೊದಲು ವಿಜಯೇಂದ್ರ‌ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದರು. 

ಈಗ ರಾಘವೇಂದ್ರ ಅವರು ರಾಜೀನಾಮೆ ಕೇಳುತ್ತಿದ್ದಾರೆ. ಅವರು ರಾಜೀನಾಮೆ ಕೇಳುತ್ತಲೇ ಇರಲಿ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಬಿಜೆಪಿಯವರಿಗೆ ಪಾಪದ ಕೊಡ ತುಂಬಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡದ ಬಿಜೆಪಿ ಸಿಎಂ ರಾಜೀನಾಮೆ ಹಿಂದೆ ಬಿದ್ದಿದೆ.  ಮಳೆಗಾಲ ಮುಗಿದ ನಂತರ ಅಭಿವೃದ್ಧಿ ಕಾರ್ಯ ನಡೆಯುತ್ತವೆ ಎಂದರು. 

ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನ ಸಚಿವ ಮಧು ಬಂಗಾರಪ್ಪ ಹೊರಹಾಕಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live