ದಸರಾ ಹಬ್ಬಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ಆಹ್ವಾನ



ಸುದ್ದಿಲೈವ್/ಶಿವಮೊಗ್ಗ

ವಿಜೃಂಭಣೆಯ ದಸರಾಕ್ಕಾಗಿ ಆನೆ ಬಿಡಾರದ ಆನೆಗಳಿಗೆ ಆಹ್ವಾನಿಸಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಶಾಸಕ ಚೆನ್ನಬಸಪ್ಪ, ಪಾಲಿಕೆ ವೈದ್ಯೆ ಡಾ.ರೇಖಾ ಮೊದಲಾದವರು ಸಕ್ರೆಬೈಲಿಗೆ ತೆರಳಿ ಡಿಎಫ್ಒ ಪ್ರಸನ್ನ ಕುಮಾರ್ ಪಟಗಾರ್ ಗೆ ದಸರಾಕ್ಕೆ ಭಾಗಿಯಾಗುವಂತೆ ಆಹ್ವಾನ ಪತ್ರಿಕೆ ನೀಡಿದರು.

ಸಕ್ರೆಬೈಲಿನ ಬಾಲಣ್ಣ, ಸಾಗರ ಬಹದ್ದೂರು ಈ  ಮೂರು ಗಂಡಾನೆಗಳನ್ನ ದಸರಾಕ್ಕೆ ಆಹ್ವಾನಿಸಲಾಗಿದೆ. ಈ ಬಾರಿ ದಸರಾಕ್ಕೆ ಒಂದರ ಹಿಂದೆ ಒಂದು ಆನೆ ಮೆರವಣಿಗೆಯಲ್ಲಿ ಸಾಗಲಿದೆ. 

ಶಾಸಕ ಚೆನ್ನ ಬಸಪ್ಪ ಮಾತನಾಡಿ, ಅ.12 ರಂದು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿ ಮೂರು ಗಂಡಾನೆಗಳು ಪಾಲ್ಗೊಳ್ಳಲಿವೆ. ಒಂದರ ಹಿಂದೆ  ಒಂದು ಆನೆಗಳು ಭಾಗಿಯಾಗುವ ಲಕ್ಷಣವಿದೆ. ದಸರಾ ಆಹ್ವಾನಕ್ಕೆ ಇಂದು ಅರಣ್ಯ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ಆಹ್ವಾನಿಸಿದ್ದೇವೆ ಎಂದರು. 

ಡಿಎಫ್ ಒ ಪ್ರಸನ್ನ ಕುಮಾರ್ ಪಟಗಾರ್ ಮಾತನಾಡಿ, ನಾಳೆ ಅಥವಾ ನಾಡಿದ್ದು ಆನೆಗಳು ಶಿವಮೊಗ್ಗಕ್ಕೆ ತೆರಳಲಿವೆ. ತಾಲೀಮು ಸರಾಗವಾಗಿ ನಡೆದಿದೆ. ಎರಡು ಮೂರು ದಿನಗಳಲ್ಲಿ ನಗರದಲ್ಲೂ ತಾಲೀಮು ನಡೆಸಲಿದ್ದೇವೆ. ಶಿವಮೊಗ್ಗಕ್ಕೆ ಬಂದ ನಂತರ ಪಾಲಿಕೆ ನೀಡುವ ಆಹಾರವನ್ನ ನಾವು ಆನೆಗಳಿಗೆ ನೀಡಲಿದ್ದೇವೆ ಎಂದರು. 

ಮೂರು ಆನೆಗಳು ಸಧೃಢವಾಗಿ ಮತ್ತು ಆರೋಗ್ಯವಾಗಿ ಇವೆ. 650 ಕೆಜಿ ಅಙಬಾರಿಯನ್ನ ಆನೆಗಳು ಹೋರಲಿದ್ದಾವೆ. ಸಕ್ರೆಬೈಲಿನಲ್ಲಿರುವ ನಾಲ್ಕು ಹೆಣ್ಣಾನೆಗಳಿವೆ ಒಂದು ಗರ್ಭಾವತಿಯಿದ್ದರೆ ಇನ್ನೂ ಮೂರು ಮರಿಹಾಕಿದ್ದರಿಂದ ಈ ಬಾರಿ ದಸರಾ ಉತ್ಸವಕ್ಕೆ ಹೆಣ್ಣನೆಗಳು ಪಾಲ್ಗೊಳ್ಳುತ್ತಿಲ್ಲವೆಂದರು‌.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close