ಮಲೆನಾಡ ರೈತರ ಹೋರಾಟಕ್ಕೆ ಸಿಕ್ತು ಗುಡ್ ನ್ಯೂಸ್



ಸುದ್ದಿಲೈವ್/ಶಿವಮೊಗ್ಗ

ಶರಾವತಿ ಮುಳುಗಡೆಯ ಸಂತ್ರಸ್ತರ ಹೋರಾಟಕ್ಕೆ ಸರ್ಕಾರ ಸ್ಪಂಧಿಸಿದೆ. ಸಾಗರದ ಎಸಿ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದ ಮಲೆನಾಡ ರೈತರ 12 ಸಂಘಟನೆಯ ಹೋರಾಟದ ಬಿಸಿ ಬೆಂಗಳೂರಿಗೆ ತಲುಪಿದಂತೆ ಕಂಡು ಬಂದಿದೆ. 

ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರು ಹಾಗೂ ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲು ಸರ್ಕಾರ ಸಭಾ ಸೂಚನೆಯನ್ನ ಹೊರಡಿಸಿದೆ.

ನಾಳೆ ಸಂಜೆ 04:00ಗಂಟೆಗೆ ವಿಧಾನ ಸಭೆಯ ಕೊಠಡಿಸಂ: 313,  ನಡೆಯಲಿರುವ ಸಭೆಗೆ ಭಾಗವಹಿಸುವಂತೆ ಶಿವಮೊಗ್ಗ ಜಿಲ್ಲಾ ರೈತರ ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ. ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಭಾಗಿಯಾಗುವಂತೆ ಕೋರಿದೆ. 

ಇವರ ಜೊತೆಗೆ 1.ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, 2. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, 

3. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ, 4. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಭವನ, 5. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಸಂರಕ್ಷಣೆ), ಅರಣ್ಯ ಭವನ, 6. ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ. 7. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ, ಶಿವಮೊಗ್ಗ.

8. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ/ ಭದ್ರಾವತಿ/ ಸಾಗರ, 9. ಸಹಾಯಕ ಆಯುಕ್ತರು, ಶಿವಮೊಗ್ಗ ಮತ್ತು ಸಾಗರ ಉಪವಿಭಾಗ ಇವರುಗಳು ಸಭೆಯಲ್ಲಿ ಭಾಹಿಯಾಗುವಂತೆ ಕೋರಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close