ಸುದ್ದಿಲೈವ್/ಹೊಳೆಹೊನ್ನೂರು
ಆನವೇರಿಯಲ್ಲಿ ತಗಡಿನ ಶೆಡ್ ನಿಮಾರ್ಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾನೆ. ಸಮೀಪದ ಹನುಮಂತಾಪುರದ ರಕ್ಷಿತ್ (೨೨) ಮೃತ ದುದೈರ್ವಿ.
ಹನುಮಂತಾಪುರದ ರಕ್ಷೀತ್ ಆನವೇರಿಯ ಕೆಕೆ ರಸ್ತೆಯಲ್ಲಿ ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟಿçà ಹೋಟೆಲ್ ಶೆಡ್ ನಿರ್ಮಾಸಿದ್ದಾನೆ. ಬುಧವಾರ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ ೧೧ ಕೆ..ವಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ಯುವಕನನ್ನು ಕೂಡಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಅಷ್ಟರಲ್ಲೆ ಯುವಕ ಸಾವನಪ್ಪಿದ್ದಾನೆ. ಹನುಮಂತಾಪುರದ ಲಲಿತಾಬಾಯಿ ಕೃಷ್ಣೋಜಿರಾವ್ ದಂಪತಿಯ ಒಬ್ಬನೆ ಮಗ ರಕ್ಷಿತ್ ಚಿಕ್ಕಪ್ಪನ ಮಗನ ಸಹಭಾಗಿತ್ವದಲ್ಲಿ ಮಿಟ್ಟಿçà ಹೋಟೆಲ್ ನಿರ್ಮಾಣದ ಕನಸು ಕಂಡಿದು ಆನವೇರಿಯಲ್ಲಿ ಖಾಲಿ ಜಾಗವೊಂದನ್ನು ಗುತ್ತಿಗೆ ಪಡೆದು ತಗಡಿನ ಶೆಡ್ ನಿರ್ಮಾಣ ಮಾಡಿ ಕೊಂಡು ವಿದ್ಯುತ್ ಸಂಪರ್ಕ ಪಡೆಯುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ರಕ್ಷಿತ್‌ಗೆ ಒಬ್ಬಳು ತಂಗಿ ಇದ್ದಾಳೆ. ಇದೊಬ್ಬ ಮಗನನ್ನು ಕಳೆದುಕೊಂಡ ಕುಟುಂಸ್ಥರ ಗೋಳು ಮುಗಿಲು ಮುಟ್ಟಿತ್ತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.