Girl in a jacket

ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು-ಸಂಗಮೇಶ್ವರ್


ಸುದ್ದಿಲೈವ್/ಭದ್ರಾವತಿ 04

ಪ್ರತಿಯೊಂದು ಕಾರ್ಯಕ್ಕೆ ಚಾಮುಂಡೇಶ್ವರಿ ದೇವರ ಅರ್ಶೀವಾದ ಬೇಕು, ಇಲ್ಲಿನ ನಗರಸಭೆ ಸಹಾ ಪ್ರತಿವರ್ಷ ನಾಡಹಬ್ಬ ದಸರಾವನ್ನು ಚಾಮುಂಡೇಶ್ವರಿ ತಾಯಿ ಕೃಪೆಯಿಂದ ಅದ್ದೂರಿಯಾಗಿ ಅಚರಿಸುತ್ತಾ ಬಂದಿದೆ. ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿಪ್ರಾಯಿಸಿದರು.

 ನಗರಸಭೆ ವತಿಯಿಂದ ಗುರುವಾರ ನಗರಸಭೆ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ನಾಡಹಬ್ಬ ದಸರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಾಗೂ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ತಾವು ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಗುತ್ತಿಗೆದಾರರ ಸಹಕಾರ ಸಿಗದೆ ಕೆಲ ಕಾಮಗಾರಿಗಳು ಅಪೂರ್ಣಗೊಂಡರೇ, ಇನ್ನು ಕೆಲ ಕಾಮಗಾರಿಗಳು ಪ್ರಾರಂಭಗೊಳ್ಳದೆ ನಿಂತಿವೆ ಎಂದು ವಿಷಾಧಿಸಿದರು.

ಇದಕ್ಕಾಗಿ ಅಧಿಕಾರಿಗಳು ಗುತ್ತಿದಾರರಿಗೆ ಕಾರ್ಯನಿರ್ವಹಿಸಲು ತಾಯಿ ಚಾಮುಂಡೇಶ್ವರಿ ದೇವಿ ಪ್ರತಿಯೊಬ್ಬರಿಗೂ ಅರ್ಶೀವದಿಸಲಿ ಜೊತೆಗೆ ಅರೋಗ್ಯ ಕರುಣಿಸಲಿ ಎಂದರು.

ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು

ಊರಿನ ಅಭಿವೃದ್ಧಿ ವಿಚಾರದಲ್ಲಿ  ಸಹಕರಿಸುವಂತೆ ಮನವಿ ಮಾಡಿದರು.ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡದೇ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಕೋಟ್ಯಾಂತರ ರು. ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಮಂಜುರಾತಿಯಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದ ದಿನಗಳಲ್ಲಿ ಒಂದಾಗಿ ಕ್ಷೇತ್ರದ ಅಭಿವೃದ್ದಿ ಮಾಡಬೇಕು ಎಂದರು.

ನಗರಸಭೆ  ಪ್ರಭಾರ ಅಧ್ಯಕ್ಷ ಎಂ. ಮಣಿ  ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ತರುತ್ತಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆದಾರರು ಶಾಸಕರಿಗೆ ಸಹಕರಿಸಿ ತಾಲ್ಲೂಕಿನ ಅಭಿವೃದ್ಧಿ ಗೆ ಸಹಕರಿಸುವಂತೆ ಮನವಿ ಮಾಡಿ

ಶಾಸಕರು ಪಕ್ಷಬೇದ ಮಾಡದೇ ನಗರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ಅಗಬೇಕಾದ ಕಾಮಗಾರಿಗಳ ಬಗ್ಗೆ ಒತ್ತು ನೀಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಇನ್ನೂ ಹೆಚ್ಚಿನ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದ್ದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ  ಬಿ.ಕೆ ಮೋಹನ್ ಮಾತನಾಡಿ ತಾಹಶೀಲ್ದಾರ್ ರವರು ಊರಿನ ಅಭಿವೃದ್ಧಿ ಕಾರ್ಯದಲ್ಲಿ ಹಿಂಜಿರಿಯುತ್ತಿದ್ದಾರೆ, ದಸರಾ ಕಾರ್ಯಕ್ರಮ ಕ್ಕೂ ಗೈರು ಹಾಜರಾಗಿದ್ದರೆ, ಅವರಿಗೆ ಕೆಲಸ ಮಾಡುವ ಇಚ್ಚೆ ಇಲ್ಲದಿದ್ದಲ್ಲಿ ವರ್ಗಾವಣೆ ತೆಗೆದುಕೊಳ್ಳಲಿ ಅಥವಾ ಶಾಸಕರಿಗೆ ಸಹಕರಿಸಿ ಅಭಿವೃದ್ಧಿ ಯತ್ತ ಗಮನ ಹರಿಸಲಿ. ಉದ್ಘಾಟನೆಗೆ ಹಿರಿಯರಾದ ಕಾಗೋಡು ತಿಮ್ಮಪ್ಪ ಅಗಮಿಸಬೇಕಿತ್ತು ಕಾರಣಾಂತರಗಳಿಂದ ಅಗಮಿಸಲಿಲ್ಲ, ಅವರು ಉದ್ಘಾಟಿಸಬೇಕಿದ್ದ ದಸರಾ ಕಾರ್ಯಕ್ರಮ ಸಹೋದರ ಶಾಸಕ ಬಿಕೆಎಸ್ ಉದ್ಘಾಟಿಸಿದ್ದು ಸಂತೋಷ ವಾಯಿತು ಎಂದರು ಎಲ್ಲರೂ ಸೇರಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಅಚರಿಸಲು ಮನವಿ ಮಾಡಿದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮತ್ತು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖ‌ರ್,  ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಎಲ್ಲಾ ಸದಸ್ಯರು, ಆಶ್ರಯ ಸಮಿತಿ ಮತ್ತು ಸೂಡಾ ಸದಸ್ಯರು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸ್ವಾಗತಿಸಿ. ಬಸವರಾಜ ನಾಯ್ಕ ಪ್ರಾರ್ಥಿಸಿ, ಮಹಮ್ಮದ್ ಗೌಸ್ ಕಾರ್ಯಕ್ರಮ ನಿರೂಪಿಸಿ, ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ ವಂದಿಸಿದರು.

  ಕಾರ್ಯಕ್ರಮ ಮುನ್ನ   ಮಾಧವಚಾರ್ ವೃತ್ತದಿಂದ ಶಾಸಕ ಬಿ.ಕೆ ಸಂಗಮೇಶ್ವರ್ ರನ್ನು  ಸ್ವಾಗತಿಸಿ ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು  

ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಭರತ್ಯನಾಟ್ಯ  ಮಾಡಿದ ನಿಖಿತಾ ರನ್ನು ಸನ್ಮಾನಿಸಲಾಯಿತು. ಸಿಡಿಮದ್ದುಗಳನ್ನು ಸಿಡಿಸಲಾಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close