Girl in a jacket

ಹಿಂದೂ ಹೆಣ್ಣುಮಕ್ಕಳ ರಕ್ಷಣೆಗೆ ಆಗ್ರಹಿಸಿ ಹಿಂಜಾವೇ ಡಿಸಿಗೆ ಮನವಿ



ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ತಾಲೂಕಿನಲ್ಲಿ ಅಪ್ರಾಪ್ತಳಿಗೆ ಅನ್ಯಕೋಮಿನ ವ್ಯಕ್ತಿ ಮದ್ಯ ಕುಡಿಸಿ ಮಜಾತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಡಿಸಿ ಕಚೇರಿಯ ಬಾಗಲಿನಲ್ಲಿ ಪ್ರತಿಭಟನೆ ನಡೆಸಿ ಹಿಂದೂ ಹಣ್ಣುಮಕ್ಕಳ ರಕ್ಷಣೆಗೆ ಆಗ್ರಹಿಸಿದೆ. 

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಘಟಕ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದೆ. ಪ್ರತಿಭಟನೆ ಉದೇಶಿಸಿ ಮಾತನಾಡಿದ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಹಲ್ಲೆ ಲೈಂಗಿಕ ದೌರ್ಜನ್ಯದಡಿ ಮತ್ತು ಅತ್ಯಾಚಾರ, ಕೊಲೆ ಪ್ರಕರಣಗಳು ಗಮನಿಸಿದಾಗ ಹೆಣ್ಣು ಮಕ್ಕಳ ಸುರಕ್ಷತೆ ವಿಚಾರವಾಗಿ ಗಂಭೀರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.‌ 

ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಯಲ್ಲಿ ನಡೆದ ಪ್ರಕರಣಗಳನ್ನ ಅಂಕಿ ಅಂಶದಲ್ಲಿ ಬಿಚ್ಚಿಟ್ಟ ದೇವರಾಜ್,  2019 ರಿಂದ 2021ರವರೆಗೆ ಕರ್ನಾಟಕದ ಸುಮಾರು 40,000 ಸ್ತ್ರೀಯರು ನಾಪತ್ತೆಯಾಗಿ ರುವ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕೆಂದು ಆಗ್ರಹಿಸುತ್ತೇವೆ. 

ಜಿಲ್ಲೆಯಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ಲವ್ ಜಿಹಾದ್ ಮೋಸದ ಜಾಲ ಹರಡು ತ್ತಿದ್ದು. ಲವ್ ಜಿಹಾದ್ ಬಲೆಗೆ ಹೆಣ್ಣು ಮಕ್ಕಳು ಅದರಲ್ಲೂ ಶಿಕ್ಷಣ ವ್ಯಾಸಂಗಕ್ಕೆಂದು ಹೊರ ಜಿಲ್ಲೆಯಿಂದ ಮತ್ತು ನಮ್ಮದೇ ಜಿಲ್ಲೆಯ ನಗರ ಪ್ರದೇಶ ಹಾಗೂ ಹಳ್ಳಿ ಭಾಗಗಳಿಂದ ಪಟ್ಟಣಕ್ಕೆ ಬರುತ್ತಿರುವ ಹೆಣ್ಣು ಮಕ್ಕಳು  ಗುರಿಯಾಗುತ್ತಿದ್ದಾರೆ. ಕೆಲವು ಪೋಷಕರು ಧೈರ್ಯ ವಾಗಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. 

ಹಲವಾರು ಪ್ರಕರಣಗಳು ನ್ಯಾಯಾಲದ ಮೆಟ್ಟಿಲೇರಿದೆ ಇನ್ನು ಕೆಲವು ಪೋಷಕರು ಗೌರವಕ್ಕೆ ಅಂಜಿ ಪ್ರಕರಣಗಳನ್ನು ದಾಖಲಿಸಲು ಹಿಂಜರಿಯುತ್ತಿದ್ದಾರೆ. ಲವ್ ಜಿಹಾದ್ ಮಟ್ಟ ಹಾಕದಿದ್ದರೆ ದೇಶಕ್ಕೆ ಗಂಡಾಂತರ ನಿಶ್ಚಿತ ಎಂದು ಕಳೆದ ವಾರ ಉತ್ತರ ಪ್ರದೇಶದ ಬರೆಲಿ ಕ್ಷಿಪ್ರಗತಿ ನ್ಯಾಯಾಲಯದ ಹೆಚ್ಚುವರಿ ಮಾನ್ಯ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ದಿವಾಕರ್ ರವರು ಆತಂಕ ವ್ಯಕ್ತಪಡಿಸಿದ್ದಾರೆ. 

ಎಲ್ಲಾ ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳನ್ನು ಈ ಮೇಲ್ಕಂಡ ಎಲ್ಲ ವಿಚಾರಗಳಾಗಿ ಜಾಗೃತಿ ಮೂಡಿ ಸುವಂತಹ ಯೋಜನೆಗಳನ್ನು ರೂಪಿಸಬೇಕಾಗಿ ಮತ್ತು ಪ್ರಾಥಮಿಕ ಶಾಲೆಯಿಂದಲೂ ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಯ ಕಲೆಯನ್ನು ಒಂದು ವಿದ್ಯಾಭ್ಯಾಸದ ವಿಷಯವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿ ಮಾನ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡ ಬೇಕೆಂದು ತಮ್ಮ ಮೂಲಕ ವಿನಂತಿಸುತೆವೆ.

ಎರಡು ದಿನದ ಮುಂಚೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಗೆ ಬಾಲಕಿಯ ತಾಯಿ ಮತ್ತು ಸ್ನೇಹಿತ ಬಲವಂತವಾಗಿ ಮಧ್ಯಪಾನ ಮಾಡಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ಸೂಕ್ತ ತನಿಖೆ ಆಗಬೇಕೆಂದು ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ತಕ್ಕ ಶಿಕ್ಷೆಯಾಗಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹ ಪತ್ರ ನೀಡುವ ಮೂಲಕ  ಅಗ್ರಹಿಸುತ್ತಿದ್ದೇವೆ ಎಂದು ಹೇಳಿದರು . ಈ ಸಮಯದಲ್ಲಿ ಸಂಘಟನೆಯ ಪ್ರಮುಖರಾದ ಶಿವುಕುಮಾರ್. ಪವನ್. ರುದ್ರ.ಪಾಟೀಲ್. ರಾಕೇಶ್. ಮುರುಡೇಶ. ರಘುವರನ್.ನಾಗೇಶ್. ರಾಜೇಂದ್ರ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close