ಒಂದೂವರೆ ಗಂಟೆಯಲ್ಲಿ ಸುರಿದಿದ್ದು 80 ಮಿಮಿ ಮಳೆ


ಸುದ್ದಿಲೈವ್/ಭದ್ರಾವತಿ/ಶಿವಮೊಗ್ಗ

ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ನಿನ್ನೆ ಸುರಿದ ಮಳೆ ಎರಡೂ ನಗರದ ಜನರಲ್ಲಿ ಭೀತಿ ಮೂಡಿಸಿದೆ. ಬೆಳೆಗ್ಗೆಯಲ್ಲಾ ಬಿಸಿಲು ಇದ್ದರೆ ಮಧ್ಯಾಹ್ನದ ನಂತರದ ಮೋಡಗಳು ನಗರದ ಜನರಲ್ಲಿ ಆತಂಕ ಮೂಡಿಸುತ್ತಿದೆ. 

ನಿನ್ನೆ ಶಿವಮೊಗ್ಗದಲ್ಲಿ ಮಳೆಯಾಗಿದ್ದು ಕುಂಸಿ ಕೆರೆಯ ಕೋಡಿ ತುಂಬಿ ಗದ್ದೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಭದ್ರಾವತಿ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಮಳೆ ಅಕ್ಷರಶಃ ಆತಂಕ ಮೂಡಿಸಿದೆ. ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಚರಂಡಿಗಳು ತುಂಬಿ, ರಸ್ತೆ ಮೇಲೆ ನೀರು ಹರಿಯುತ್ತಿದೆ.  ಜನ್ನಾಪುರದ ಕಿತ್ತೂರು ರಾಣಿ ಚೆನ್ನಮ್ಮ ಬ್ಲಾಕ್‌ನ ಮನೆಯೊಂದರೆ ಕಾಂಪೌಂಡ್‌ ಗೋಡೆ ಕುಸಿದಿದೆ. ಮನೆಗಳಿಗೆ ನುಗ್ಗಿರುವ ನೀರನ್ನು ಹೊರಗೆ ಹಾಕಲು ಜನರು ಹರಸಾಹಸ ಪಟ್ಟಿದ್ದಾರೆ. 

ನಿನ್ನೆ ಭದ್ರಾವತಿಯಲ್ಲಿ ಒಂದುವರೆ ಗಂಟೆಗಳಲ್ಲಿ 80 ಮಿಮಿ ಮಳೆ ಆಗಿದೆ. ಹಳೇನಗರ ಪೊಲೀಸ್ ಠಾಣೆಯ ಮೆಟ್ಟಿಲವರೆಗೆ ಮಳೆ ನೀರು ವಂದು ತಲುಪಿದೆ. ಐದರಿಂದ 10 ಮನೆಗಳಿಗೆ ಮಖೆ ನೀರು ನುಗ್ಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕಟ್ಟಡದ ಬೇಸ್ ಮೆಂಟ್ ನಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. 

ಆಯುಧ ಪೂಜೆಯ ದಿನವೇ ಮಳೆಯ ಆರ್ಭಟ ವ್ಯಾಪಾರವನ್ನ ಹಾಳು ಮಾಡಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಬೈಕ್ ಗಳು ಹಾಳಾಗಿರುವುದು ತಿಳಿದುಬಂದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close