Girl in a jacket

6 ನೇ ಬಾರಿಗೆ ಅಂಬಾರಿ ಹೊತ್ತ ಸಾಗರ್, ಮಳೆಯ ನಡುವೆಯೇ ಕಿಕ್ಕಿರಿದ ಜನ




ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ದಸರಾ ಮೆರವಣಿಗೆ ಫ್ರೀಡಂ ಪಾರ್ಕ್‌ನ ಅರಮನೆ ತಲುಪಿದೆ.  ಶಿವಮೊಗ್ಗದ ಶಿವಪ್ಪ ನಾಯಕ ಅರಮನೆ ಆವರಣದಿಂದ ಹೊರಟಿದ್ದ ಮೆರವಣಿಗೆ ಮಳೆ ಅಡ್ಡಿಯ ನಡುವೆಯೂ ಅಂಬಾರಿ ಮೆರವಣಿಗೆ ಬನ್ನಿ ಮಂಟಪ ತಲುಪಿದೆ.

ಬನ್ನಿ ಮಂಟಪಕ್ಕೆ ಮಳೆಯ ನಡುವೆಯೇ ಗಜಗಾಂಭೀರ್ಯದಿಂದ ಸಾಗರ್ ಬಹದ್ದೂರು, ಬಾಲಣ್ಣ ಎಂಬ ಮೂರು ಆನೆಗಳು ಬಂದು ತಲುಪಿವೆ. 650 ಕೆಜಿ ಬೆಳ್ಳಿ ಅಂಬಾರಿಯನ್ನು ಸಾಗರ್ ಆನೆ ಹೊತ್ತು ತಂದಿದೆ.

ಸಾಗರ್ ನನ್ನ ಹಿಂಬಾಲಿಸಿಕೊಂಡು ಬಾಲಣ್ಣ ಹಾಗೂ ಬಹದ್ದೂರ್ ಆನೆಗಳು ಸಾಗಿ ಬಂದಿದೆ. ಈ ಮೊದಲು ಆಂಬಾರಿ ಹೊತ್ತ ಆನೆಗೆ ಅಕ್ಕಪಕ್ಕ ಹೆಣ್ಣಾನೆಗಳು ಸಾಥ್ ನೀಡುತ್ತಿದ್ದವು. ಈ ಬಾರಿಯ ಬದಲಾವಣೆ ಯಶಸ್ಸು ನೀಡಿದೆ. ಸತತ 6 ನೇ ಬಾರಿ ಅಂಬಾರಿಯನ್ನು  ಸಾಗರ್ ಹೊತ್ತುಕೊಂಡು ಬಂದಿದೆ. 

ಯಶಸ್ವಿಯಾಗಿ ಅಂಬಾರಿ ಹೊತ್ತ ಸಾಗರ್ ಗೆ  ಮಾವುತರು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದ್ದಾರೆ. ಚಪ್ಪಾಳೆ ಮೂಲಕ ಹರ್ಷ ವ್ಯಕ್ತ ಪಡಿಸಿದರು. ಬನ್ನಿ ಮುಡಿಯುವ ಕಾರ್ಯಕ್ರಮವ್ನು  ತಹಶೀಲ್ದಾರ್ ನಾಗರಾಜ್ ನೆರವೇರಿಸಲಿದ್ದಾರೆ. 

ಕೋಟೆ ರಸ್ತೆ, ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಬಳಿಕ ಫ್ರೀಡಂ ಪಾರ್ಕ್ ತಲುಪಿದ ಮೆರವಣಿಗೆ ತಲುಪಿದೆ. ಬನ್ನಿ ಮಂಟಪಕ್ಕೆ ಬಂದ ನೂರಾರು ದೇವಾಲಯಗಳ ದೇವತೆಗಳು ಆಗಮಿಸಿವೆ. ಬನ್ನಿ ಮಂಟಪದಲ್ಲಿ  ಸಾವಿರಾರು ಜನರು ಮಳೆಯ ನಡುವೆಯೂ ಛತ್ರಿ ಹಿಡಿದು ಭಾಗಿಯಾಗಿದ್ದಾರೆ. ಫ್ರೀಡಂ ಪಾರ್ಕ್‌ನ ನೆಲ ಮಳೆಯಿಂದಾಗಿ ಕೆಸರಂತಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live