Girl in a jacket

ಮಳೆಗೆ 3500 ಕೋಳಿಮರಿಗಳು ಬಲಿ



ಸುದ್ದಿಲೈವ್/ಹೊಳೆಹೊನ್ನೂರು 

ಭಾನುವಾರ ರಾತ್ರಿ ಸುರಿದ ಭೀಕರ ಮಳೆಯಿಂದ ಕೋಳಿ ಫಾರಂಗೆ ನೀರು ನುಗ್ಗಿ 3500 ಕೋಳಿ ಮರಿಗಳು ಸಾವನ್ನಪ್ಪಿರುವ ಘಟನೆ ಸಮೀಪದ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮಹೇಶ್ ಎಂಬುವರಿಗೆ ಸೇರಿದ ಕೋಳಿಫಾರಂ ಇದಾಗಿದ್ದು ಸುಮಾರು 6 ಸಾವಿರ ಕೋಳಿಗಳನ್ನು ಸಾಕುತ್ತಿದ್ದರು. ಆದರೆ ಭಾನುವಾರ ರಾತ್ರಿಇಡೀ ಮಳೆ ಎಡಬಿಡದ ಸುರಿಯುತ್ತಿತ್ತು. ಬೆಳಗಿನ ಜಾವ 3 ಘಂಟೆ ಸುಮಾರಿಗೆ ಫಾರಂ ಪಕ್ಕದಲ್ಲಿರುವ ಗೋಂದಿನಾಲೆ ಭರ್ತಿಯಾಗಿ ಏರಿಮೇಲೆ ನೀರು ಹತ್ತಿ ಹರಿಯಲಾರಂಬಿಸಿತು. ನೋಡನೋಡುತ್ತಿದ್ದಂತೆ ನೀರಿನ ಪ್ರಮಾಣ ದಿಢೀರನೆ ಜಾಸ್ತಿಯಾಗಿ ನಿಯಂತ್ರಣಕ್ಕೆ ಬಾರದಂತಾಯಿತು. ಫಾರಂನಲ್ಲಿದ್ದ ಕೆಲಸಗಾರರು ಎಷ್ಟೇ ಪ್ರಯತ್ನ ಮಾಡಿದರೂ ನೀರು ಒಳಗಡೆ ಬರುವುದನ್ನು ತಡೆಯಾಲಿಲ್ಲ. 

3500 ಮರಿಗಳು, ಭತ್ತದ ಹೊಟ್ಟು, ಕೋಳಿ ಫುಡ್ ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದೆ. ಇನ್ನು ನೀರಿನಲ್ಲಿ ನೆನೆದು ಒದ್ದೆಯಾಗಿರುವ ಕೆಲವು ಮರಿಗಳು ಬದುಕುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಪಶುವೈದ್ಯರು ತಿಳಿಸಿದರು. ಸುಮಾರು 3 ಲಕ್ಷದಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live