22 ಬೈಕ್ ಗಳು ಬೆಂಕಿಗೆ ಆಹುತಿ-ಬೆಂಕಿ ಹಚ್ಚಿದವ ಪೊಲೀಸರ ಅತಿಥಿ



ಸುದ್ದಿಲೈವ್/ಶಿವಮೊಗ್ಗ

ಎನ್ ಟಿ ರಸ್ತೆಯಲ್ಲಿರುವ ಕಾರ್ತಿಕ್ ಶೋ ರೂಮ್ ನ್ನ ಬೆಂಕಿ ಹಚ್ಚಲಾಗಿದೆ . ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಗೊಂದಲ ಸಹ ಮೂಡಿದೆ. 

ಎನ್ ಟಿ ರಸ್ತೆಯಲ್ಲಿ ಟಿವಿಎಸ್ ವಾಹನ ಮಾರಾಟ ನಾಡುವ ಕಾರ್ತಿಕ್ ಶೋ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಶೋ ರೂಮ್ ನ ಪೀಠೋಪಕರಣ ಮತ್ತು 22 ಬೈಕ್ ಗಳು ಸುಟ್ಟು ಕರಕಲಾಗಿದೆ.

ಕೆಲಸಗಾರರಿಂದಲೇ ಪರಸ್ಪರ ಗೊಂದಲ ಮೂಡಿ ಬೆಂಕಿ ಕಾಣಿಸಿಕೊಂಡ ಶಂಕೆಗಳು ಹೊರಬೀಳುತ್ತಿದೆ. ಹಣದ ವ್ಯವಹಾರದಲ್ಲಿ ಗೊಂದಲ ಉಂಟಾಗಿ ಬೆಂಕಿ ಹಚ್ಚಿರುವುದಾಗಿ ತಿಳಿದು ಬಂದಿದೆ.  

ನಷ್ಟ ಮತ್ತು ಹಾನಿಗಳ ಲೆಕ್ಕಾಚಾರ ಆಗಬೇಕಿದೆ. ಕೆಲಸಗಾರ ಆದರ್ಶ ಎಂಬುವನನ್ನ ದೊಡ್ಡಪೇಟೆ ಪೊಲೀಸರು ವಶಪಡಿಸಿಕೊಳ್ಳಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close