ಕಿತ್ತೂರ ಉತ್ಸವ-2024ರ ವಿಜಯ ಜ್ಯೋತಿ ಶಿವಮೊಗ್ಗಕ್ಕೆ

 


ಸುದ್ದಿಲೈವ್/ಶಿವಮೊಗ್ಗ

ಬ್ರಿಟೀಶರ ವಿರುದ್ಧ ದಂಗೆ ಎದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ಕಿತ್ತೂ ರಿನ  ಚೆನ್ನಮ್ಮ ಈಸ್ಟ್ ಇಂಡಿಯಾ ಕಂಪನಿಯಾ ವಿರುದ್ಧ 1824 ನೇ ಇಸವಿಯಲ್ಲಿ  ದಂಗೆ ಎದ್ದು ಮೊದಲ ಯುದ್ಧ ಗೆದ್ದಿದ್ದರು.

ದಂಗೆ  ಎದ್ದು ಮೊದಲ ವಿಜಯ ಸಾಧಿಸಿದಕ್ಕೆ 200 ವರ್ಷ ಕಳೆದಿದೆ. 200 ವರ್ಷದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಿತ್ತೂರು ಉತ್ಸವ-2024 ವಿಜಯಯೋತ್ಶವ ಆಚರಿಸಲಾಗಿದೆ.‌ ಹೊಸಕೋಟೆಯಲ್ಲಿ ವಿಜಯ ಜ್ಯೋತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಹೊಸಕೋಟೆ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ,  ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮೂಲಕ ಇಂದು ಶಿವಮೊಗ್ಗಕ್ಕೆ ತಲುಪಿದೆ. ಜ್ಯೋತಿಗೆ ಶಾಸಕ ಚೆನ್ನಬಸಪ್ಪ ಪೂಜೆ ಸಲ್ಲಿಸಿ ಮುಂದಿನ ನಗರಕ್ಕೆ ಬೀಳ್ಕೊಟ್ಟಿದ್ದಾರೆ. ಮುಂದಿನ ಕಹ. ಚಿಕ್ಕಮಗಳೂರು, ತುಮಕೂರಿಗೆ ಸಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸಾಗಿ ಜ್ಯೋತಿಯು ಕಿತ್ತೂರು ತಲುಪಲಿದೆ.

ಅ.22 ರಂದು ಕಿತ್ತೂರಿನ ಸೈನಿಕ ಶಾಲೆಗೆ ವಿಜಯ ಜ್ಯೋತಿ ತಲುಪಲಿದೆ. ಅ.23,24,25 ರಂದು ಮೂರು ದಿನ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ-2024 ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close