ಬ್ರಿಗೇಡ್ ನ ಚಿಂತನ ಮಂಥನ ಸಭೆ ಅ.20 ರಂದು ಬಾಗಲಕೋಟೆಯಲ್ಲಿ



ಸುದ್ದಿಲೈವ್/ಶಿವಮೊಗ್ಗ

ಬ್ರಿಗೇಡ್ ರಚನೆಗೆ ಮುಂದಾಗಿರುವ ಮಾಜಿ ಡಿಸಿಎಂ ಈಶ್ವರಪ್ಪ ಇಂದು ಸುದ್ದಿಗೋಷ್ಠಿ ನಡೆಸಿ ಸ್ವಾಮೀಜಿಯವರ ಅಪೇಕ್ಷೆಯಂತೆ ಎಲ್ಲಾ ಜನಾಂಗದ ಬಡವರನ್ನ ಈ ಸಂಘಟನೆಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ  ಎಂದು ತಿಳಿಸಿದರು. 

ಅ.20 ರಂದು ಬಾಗಲಕೋಟೆಯ ಚರಂತಿಮಠ ಸಮುದಾಯಭವನದಲ್ಲಿ ಪ್ರಮುಖ ಕಾರ್ಯಕರ್ತರ ಚಿಂತನ ಮಂಥನ ಸಭೆ ನಡೆಸಲು ಹುಬ್ಬಳ್ಳಿಯಲ್ಲಿ ನಿರ್ಧರಿಸಲಾಗಿದೆ. 25 ಜನ ಸಾಧುಸಂತರು ಭಾಗಿಯಾಗಲಿದ್ದಾರೆ. ಈ ಸಂಘಟನೆಗೆ ಹೆಸರು ಇಡುವ ಬಗ್ಗೆ ಮತ್ತು ಮುಂದಿನ ಕಾರ್ಯಕ್ರಮದ ಬಗ್ಗೆ ನಿರ್ಧರಿಸಲಾಗಿದೆ ಎಂದರು. 

ಹಿಂದೂ ಸಂಘಟನೆಯಲ್ಲಿರುವ ಹಿಂದುಳಿದ, ದಲಿತರ ಸಮಾಜದ ಸರಿಯಾದ ಸಂಘಟನೆ ಅನಿವಾರ್ಯವಾಗಬೇಕಿದೆ. ಜಯಮೃತ್ಯುಂಜಯ ಸ್ವಾಮಿಗಳ ಹೇಳಿಕೆಯಿಂದ ಆರ್ ಸಿಬಿ ಗೆ ಚಾಲನೆ ಆಗಿದೆ. ಈ ಆರ್ ಸಿಬಿಗೆ ಮುಂದಿನ ದಿನಗಳಲ್ಲಿ ಸಾಧುಸಂತರ ಸಲಹೆ ಮೂಲಕ ಮುಂದಿನ‌ಕಾರ್ಯಕ್ರಮ ಮತ್ತು ಸಂಘಟನೆಯ ಹೆಸರು ಇಡಲಾಗುವುದು ಎಂದರು. 

ಕಾರ್ಯಕರ್ತರಿಗೆ ಆರ್ಥಿಕವಾಗಿ ಕಷ್ಟವಾಗಬಹುದು ಆದರೆ ಅಂತಹವರನ್ನ ಬಿಡಲು ಸಾಧ್ಯವಿಲ್ಲ. ಭದ್ರಾವತಿಯಿಂದ, ಮೈಸೂರಿನಿಂದ, ಹೊಸಕೋಟೆ, ಬೆಂಗಳೂರಿನಿಂದ ಕರೆಗಳು ಬಂದಿವೆ. ಅವರೆಲ್ಲರಿಗೂ ಬಾಗಲಕೋಟೆಗೆ  ಪ್ರಮುಖರು ಮಾತ್ರ ಬರಲು ಹೇಳಿರುವೆ ರಾಜ್ಯದ ಉತ್ತರ ಮತ್ತು ದಕ್ಷಿಣದ ಭಾಗದ ಜನರಿಗೆ ಸಂಘಟನೆ ಹೇಗೆ ಕಾರ್ಯಕ್ರಮ ನಡೆಸುವ ಬಗ್ಗೆ ಸೂಚನೆ ನೀಡಲಾಗುವುದು. ಚಿಂತನೆಗೂ ಮೀರಿ ಜನ ಮುಂದೆ ಬರ್ತಾ ಇದ್ದಾರೆ. ಪ್ರತಿ ಜಿಲ್ಲೆಯಿಂದ 5-6 ಜನ ಬಾಗಲಕೋಟೆಗೆ ಬರಲು ಸೂಚಿಸಿದ್ದೇವೆ ಎಂದರು. 

ಅನ್ವಾರ್ ಮಾಣಿಪಾಡ್ ಮತ್ತು ಶಂಕರಮೂರ್ತಿಗೆ ಭದ್ರತೆ ನೀಡಿ

ಕೇಂದ್ರ ವಕ್ಫ್ ಮಂಡಳಿಯ ಜಂಟಿ ಸಂಸದೀಯ ಸಭೆ ಮುಂದೆ ಅನ್ವರ್ ಮಾಣಿಪಾಡ್ ಅವರ ವರದಿಯು ಬಂದಾಗ  ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರು ಸಭಾತ್ಯಾಗ ಮಾಡಿದ್ದಾರೆ. 

ಆದರೆ ಅನ್ವರ್ ಮಾಣಿಪಾಡಿಯ ವರದಿಯನ್ನೇ ಅಅಂದಿನ ಸರ್ಕಾರವೇ ಸ್ವೀಕರಿಸಿರಲಿಲ್ಲ. ಆದರೆ ಆಗಿನ ಸಭಾಪತಿಗಳಾದ ಶಂಕರಮೂರ್ತಿಯವರು ಸ್ವೀಕರಿಸಿದ್ದರು. ವಕ್ಫ್ ಜಾಗವನ್ನ ಪ್ರಭಾವಿ ಮುಸ್ಲೀಂರು ಲೂಟಿ ಮಾಡಿದ್ದಾರೆ. ವರದಿಯ ಪ್ರಕಾರ ರೆಹಮಾನ್ ಖಾನ್, ಖರ್ಗೆ ಸೇರಿದಂತೆ ಹಲವಾರು ಪ್ರಭಾವಿ ನಾಯಕರು ವಕ್ಫ್ ಆಸ್ತಿ ಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ನೀಡಲಾಗಿತ್ತು. 

ಆದರೆ ಜೆಪಿಸಿ ಸಮಿತಿ ರಚನೆಯಾಗುತ್ತಿದ್ದಂತೆ ಅನೇಕರು ಸಭಾ ತ್ಯಾಗ ಮಾಡಿದ್ದಾರೆ. ಓವೈಸಿ ಅವರು ಸಭಾತ್ಯಾಗ ಮಾಡಿದ್ದಾರೆ. ವರದಿಯನ್ನ ಅವರು ಓದಿ ನಂತರ ನಿರ್ಧರಿಸಬೇಕಿತ್ತು ಎಂದು ಸಲಹೆ ನೀಡಿದರು. 

ಅನ್ವರ್ ಮಾಣಿಪಾಡಿ ನೇತೃತ್ವದ ಸಮಿತಿ ರಚಿಸುತ್ತಿದ್ದಂತೆ ವಿರೋಧಿಸಲಾಯಿತು. ಮುಸ್ಲೀಂ ಬಡವರಿಗೂ ನ್ಯಾಯಕೊಡಿಸಬೇಕು. ಉಳಿದ ಎಲ್ಲಾ ಮುಸ್ಲೀಂರು ವಿರೋಧಿ ಮಾಡಿರುವುದು ಸರಿಯಲ್ಲ. ಮಾಣಿಪಾಡಿಯವರು ಕಷ್ಟಪಟ್ಟು ವರದಿ ಮಾಡಿದ್ದಾರೆ. ಶಂಕರ್ ಮೂರ್ತಿವರು ಟೇಬಲ್ ಮಾಡಿದ್ದಾರೆ. ಇವರಿಬ್ಬರಿಗೂ ಭದ್ರತಾ ವ್ಯವಸ್ಥೆ ಮಾಡಬೇಕೆಂದು ಈಶ್ವರಪ್ಪ ತಿಳಿಸಿದರು. 

ಕಾಂಗ್ರೆಸ್ ನಾಯಕರು ಮುಸ್ಲೀಂ ಎಂಬ ಕಾರಣಕ್ಕೆ ವಿರೋಧಿಸುತ್ತಿದೆ. ಪ್ರಭಾವಿ ನಾಯಕರಿಂದ ಲಕ್ಷಾಂತರ ಆಸ್ತಿ ಲೂಟಿಯಾಗಿದೆ. ಬಡ ಮುಸ್ಲೀಂರ ಪರವಾಗಿಯೂ ಕಾಂಗ್ರೆಸ್ ನಿಲ್ಲಬೇಕು. ಕೇವಲ ಪ್ರಭಾವಿ ಮುಸ್ಲೀಂರ ಪರ ನಿಲ್ಲುವುದರಲ್ಲಿ ದೊಡ್ಡವಿಚಾರವಿಲ್ಲ ಎಂದು ಸಲಹೆ ನೀಡಿದರು. 

ಯತ್ನಾಳ್ ಹೋರಾಟ ಬೇರೆ

ಜಮೀರ್ ಬಹತೇಕ ಆಸ್ತಿಗಳು ವಕ್ಫ್ ಆಸ್ತಿ ಮಾಡಿ ಎಂದು ಹೇಳಿದ್ದಾರೆ. ವಕ್ಫ್ ಆಸ್ತಿಯನ್ನ ಖಾತೆ ಮಾಡಿ ಎಂದಿರುವುದಕ್ಕೆ ಶಾಸಕ ಯತ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೆಹಮಾನ್ ಖಾನ್,  ಖರ್ಗೆಯವರು ಸೇರಿದಂತೆ ಅನೇಕ‌ ಮುಸ್ಲೀಂ ನಾಯಕರು ಈಗಾಗಲೇ ಆಸ್ತಿ ಖಾತೆಯಾಗಿರುವುದು ಗುಳುಂ ಆಗಿದೆ. ಇದಕ್ಕೂ ಯತ್ನಾಳ್ ಪ್ರತಿಭಟನೆಗೂ ವ್ಯತ್ಯಾಸವಿದೆ ಎಂದರು.‌

ಹಬ್ಬಳ್ಳಿ ಠಾಣೆಯ ಮೇಲಿದ ಗಲಾಟೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಎಡವಿದೆ

ರಾಜ್ಯ ಸರ್ಕಾರ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ನಡೆದ ಗಲಭೆಯಲ್ಲಿನ ಆರೋಪಿಗಳ ಕೇಸ್ ವಾಪಾಸ್ ಪಡೆದಿರುವುದು ಗೂಂಡಾ ರಾಜ್ಯ ಮಾಡಲು ಸರ್ಕಾರ ಹೊರಟಿದೆ. ಪೊಲೀಸರ ಬೆಂಬಲಕ್ಕೆ ಇಳಿಯಬೇಕಿದ್ದ ಸರ್ಕಾರ ಅವರ ನೈತಿಕತೆಯನ್ನ ಕಸಿದುಕೊಂಡಿದೆ. 

ಮೊನ್ನೆ ಗಣಪತಿ ಮೆರವಣಿಗೆಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರು ಜನ ಸಾಮಾನ್ಯರ ರಕ್ಷಣೆಗೆ ಬಾರದೆ ಇರುವುದು ಕಾಂಗ್ರೆಸ್ ನ ದುರಾಡಳಿತದಿಂದ ಎಂದು ದೂರಿದ ಈಶ್ವರಪ್ಪ ಯಲ್ಲಮ್ಮನ ಗುಡ್ಡಕ್ಕೆ ಮತ್ತು ಮೈಸೂರಿನ‌ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಹಣೆಗೆ ಕುಂಕುಮ ಹಚ್ಚಿಕೊಂಡಿದ್ದಾರೆ. ದೇವಭಕ್ತಿ ಬಂದಿರುವುದು ಸ್ವಾಗತ. ಆದರೆ ನಾಟಕವಾಗಬಾರದು. ನಿಮ್ಮ ಸ್ವಾರ್ಥಕ್ಕೆ ದೈವಭಕ್ತಿ ತೋರಿಸಬೇಡಿ. ಗೂಂಡಾಗಳ ಬೆನ್ನಿಗೆ ನಿಂತು ದೇವಸ್ಥಾನಗಳಿಗೆ ಹೋದರೆ ಯಾವ ಪ್ರಯೋಜನವೂ ಇಲ್ಲ ಎಂದು ಖಂಡಿಸಿದರು. 

ಹಗರಣ ಮುಚ್ಚಿಹಾಕುವ ಯತ್ನ ಆಗಬಾರದು

ಜನಗಣತಿಯನ್ನ ಅ.18 ಕ್ಕೆ ಸಚಿವ ಸಂಪುಟ ನಡೆಸಿ ಮಂಡಿಸುವುದಾಗಿ ಹೇಳಿದ್ದ ಸಿಎಂ ಅ.25 ಕ್ಕೆ ಮುಂದೂಡಿದೆ. ಹಗರಣಗಳನ್ನ ಮುಚ್ಚಿಹಾಕಲು ಸಿಎಂ ಜಾತಿ ಗಣತಿ ಅಸ್ತ್ರ ಬಳಸದಂತೆ ಸೂಚಿಸಿದ ಈಶ್ವರಪ್ಪ, ಮುಂದೂಡಿದ ಕಾರಣವೇನು? ಇವೆಲ್ಲರಿಗೂ ನ್ಯಾಯ ಕೊಡಿಸಲು ಬ್ರಿಗೇಡ್ ರಚಿಸಲಾಗುತ್ತಿದೆ ಎಂದು ಆಗ್ರಹಿಸಿದರು.‌

ಈ ಹಿಂದೆ ಬ್ರಿಗೇಡ್ ಮಾಡಲು ಹೋಗಿ ಹಿಂದೆ ಸರಿದೆ. ಅದನ್ನ ಈ ಬಾರಿ ಮಾಡೊಲ್ಲ. ಇದನ್ನ ಸಾಧು ಸಂತರು ಬ್ರಿಗೇಡ್ ಮಾಡಲು ಹೊರಟಿದ್ದಾರೆ. ಈಗ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಈಶ್ವರಪ್ಪ, ಸಚಿವ ನಾಗೇಂದ್ರರಿಗೆ ಜಾಮೀನು ಕೊಟ್ಟಿರುವುದು ಅವರ ಪರವಾಗಿ ಜಯ ಸಿಕ್ಕಿದೆ ಎಂದು ಅಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯೇ ಇದು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close