ಸಿಹಿಮೊಗ್ಗೆ ಸ್ವಾಸ್ಥ್ಯಾ ಸೇವಾಯಾತ್ರ-2ಗೆ ನಾಳೆ ಚಾಲನೆ



ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ದಕ್ಷಿಣ ಪ್ರಾಂತದ, ರಾಷ್ಟ್ರೀಯ ಮೆಡಿಕೋಸ್ ಆರ್ಗನೈಜೇಷನ್ , ವಿಕಾಸ ಟ್ರಸ್ಟ್ ಹಾಗೂ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ವತಿಯಿಂದ ಅ.27 ರಂದು ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಸಿಹಿಮೊಗ್ಗೆ ಸ್ವಾಸ್ಥ್ಯಾ ಸೇವಾ ಯಾತ್ರೆ-2 ಕಾರ್ಯಕ್ರಮ ನಡೆಯಲಿದೆ. 

ವಾರ್ಡ್( ಸೇವಾ ಬಸ್ತಿ)ಗಳಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ಹಾಗೂ ಮೆಡಿಕಲ್ ಕಿಟ್ ನ್ನ  ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಹಂಚಲಾಗುತ್ತದೆ.  

ಡಿಹೆಚ್ ಒ ನಟರಾಜ್, ಡಿಸ್ಟ್ರಿಕ್ ಸಜ್ಜನ್ ಡಾ.ಸಿದ್ದಣ್ಣ ಗೌಡ ಪಾಟೀಲ್, ವಿಕಾಸ ಟ್ರಸ್ಟ್ ನ ಅಧ್ಯಕ್ಷ ರಂಗನಾಥ ಬಿ.ಎ, ಐಡಿಎ ಅಧ್ಯಕ್ಷ ಸಾಥ್ವಿಕ್, ಆರ್ಗನೈಜೇಷನ್ ಡಾ.ಶ್ರೀಧರ್, ಜಿಪಂ ಸಿಇಒ ಹೇಮಂತ್, ಸುಬ್ಬಯ್ಯ  ಮೆಡಿಕಲ್ ಕಾಲೇಜಿನ ಮೆಡಿಕಲ್ ಡೈರೆಕ್ಟರ್ ಡಾ.ನಾಗೇಂದ್ರ ಸ್ವಾಸ್ಥ್ಯ ಸೇವಾ ಯಾತ್ರೆಯ ಅಧ್ಯಕ್ಷ ಡಾ.ರವೀಶ್ ಕೆ.ಆರ್ ಭಾಗಿಯಾಗಲಿದ್ದಾರೆ. 

ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ 100 ಸೇವಾ ಬಸ್ತಿಗಳಲ್ಲಿ ಏಕಕಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಬಿ.ಎಂ. ಮೌಲ್ಯ ಮಾಪನ, ಪೌಷ್ಠಿಕಾಂಶದ ಮೌಲ್ಯ ಮಾಪನ, ಉಚಿತ ಔಷಧಿಗಳು, ಆರೋಗ್ಯ ಶಿಕ್ಷಣ ನಡೆಸಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close