ಶಿವಮೊಗ್ಗದಲ್ಲಿ ನ್ಯೂಸ್‌ 18 ಕನ್ನಡ ವಾಹಿನಿಯ ಕರುನಾಡ ಹಬ್ಬ-ಹಬ್ಬಕ್ಕೆ ನಿಮ್ಮ ಸುದ್ದಿಲೈವ್ ಸಾಥ್!



ಸುದ್ದಿಲೈವ್/ಶಿವಮೊಗ್ಗ 

ಕನ್ನಡ ಸಂಸ್ಕೃತಿಯ ಸಡಗರ ಹಾಗೂ ಸಂಭ್ರಮಾಚರಣೆ ಇದೀಗ ನಮ್ಮ ಶಿವಮೊಗ್ಗದಲ್ಲಿ ನಡೆಯುತ್ತಿದ್ದು, ಇದೇ ಅಕ್ಟೋಬರ್ 18, 19, 20ರಂದು ಶಿವಮೊಗ್ಗದ ಸೈನ್ಸ್ ಫೀಲ್ಡ್ ನಲ್ಲಿ ನೆಡೆಯಲಿದೆ.

ಈ ಕರುನಾಡ ಹಬ್ಬದ ರಂಗು ಹೆಚ್ಚಿಸಲು ಧಾರಾವಾಹಿ ಕಲಾವಿದರು, ಮಿಮಿಕ್ರಿ ಕಲಾವಿದರು, ಮ್ಯೂಸಿಕ್ ಬ್ಯಾಂಡ್ ಹಾಗೂ ಸಿಂಗರ್ಸ್‌ಗಳು ಆಗಮಿಸಲಿದ್ದಾರೆ. ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ರಾಘವೇಂದ್ರ, ಮಿಮಿಕ್ರಿ ಗೋಪಿ, ಸಾಗರ್ ತುರುವೇಕೆರೆ, ಸೇರಿ ಹಲವು ನಟ ನಟಿಯರು ಆಗಮಿಸಲಿದ್ದಾರೆ.

ಅಷ್ಟೇ ಅಲ್ಲದೆ ಅಡುಗೆ, ನೃತ್ಯ, ಮಕ್ಕಳಿಗಾಗಿ ಬೆಂಕಿರಹಿತ ಅಡುಗೆ ಸ್ಪರ್ಧೆ, ಹಾಡು - ನೃತ್ಯ, ಚಿತ್ರಕಲೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಗೇಮ್ಸ್, ಕಾಮಿಡಿ ಶೋ, ಫ್ಯಾಶನ್ ಶೋ ಸೇರಿ ಹಲವು ರೀತಿಯ ಮನೋರಂಜನೆ ಸ್ಪರ್ಧೆಗಳನ್ನು ಒಂದೇ ವೇದಿಕೆಯಲ್ಲಿ ನಿಮಗಾಗಿ ನ್ಯೂಸ್‌ 18 ಕನ್ನಡ ವಾಹಿನಿ ಕಲ್ಪಿಸಿದೆ.ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ. ಸರ್ವರಿಗೂ ಉಚಿತ ಪ್ರವೇಶವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close