ಸುದ್ದಿಲೈವ್/ಶಿವಮೊಗ್ಗ
ಗ್ರಾಮಪಂಚಾಯಿತಿಯಲ್ಲಿ ವಿವಿಧ ಸ್ಥಾನಗಳಿಗೆ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ 15 ಗ್ರಾಮ ಪಂಚಾಯಿತಿಯ 19 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ರಾಜದ್ಯಂತ ಒಟ್ಟು 531 ಗ್ರಾಮ ಪಂಚಾಯಿತಿಗಳ 641 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಯಾವಾಗ ಮತದಾನ?
ಉಪ ಚುನಾವಣೆಗೆ ನ.6ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದಾರೆ. ನ.12ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನ.15 ನಾಮಪತ್ರ ಹಿಂಪಡೆಯಲು ಅವಕಾಶ. ನ.23ರಂದು ಮತದಾನ ನಡೆಯಲಿದೆ. ನ.26ರಂದು ಮತ ಎಣಿಕೆ ನಡೆಯಲಿದೆ.
ಶಿವಮೊಗ್ಗ ತಾಲೂಕಿನ ಕೋಟೆಗಂಗೂರು, ಸಾಗರದ ಕುದರೂರು, ಭದ್ರಾವತಿಯ ಬಾರಂದೂರು, ಅರಕೆರೆ, ತೀರ್ಥಹಳ್ಳಿಯ ತೀರ್ಥಮತ್ತೂರು, ಹೊಸನಗರದಎಂ.ಗುಡ್ಡೆಕೊಪ್ಪ, ಶಿಕಾರಿಪುರದ ಮಾರವಳ್ಳಿ, ಹಿತ್ತಲ, ಸುಣ್ಣದಕೊಪ್ಪ, ತರಲಘಟ್ಟ, ಸೊರಬ ತಾಲೂಕಿನ ಹೊಸಬಾಳೆ, ಜಡೆ, ಭಾರಂಗಿ ಗ್ರಾಮ ಪಂಚಾಯಿತಿಗಳ ತಲಾ ಒಂದು ಸ್ಥಾನ, ಭದ್ರಾವತಿಯ ಮೈದೊಳಲು, ಅರಹತೊಳಲು ಗ್ರಾಮ ಪಂಚಾಯಿತಿಗಳ ತಲಾ ಮೂರು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.