ಸುದ್ದಿಲೈವ್/ಶಿವಮೊಗ್ಗ
ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ (ಜುಲೈ-ಆಗಸ್ಟ್) ಹಣ ಅಕ್ಟೋಬರ್ 12 ರೊಳಗೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂಪಾಯಿ ನೇರವಾಗಿ ಜಮೆಯಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಎಸ್. ಚಂದ್ರಭೂಪಾಲ ರವರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾನ್ಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ರವರು ಜಿಲ್ಲಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದಾರೆ. ನವರಾತ್ರಿಯ ನಾಡ ಹಬ್ಬ ದಸರಾವನ್ನು ಮಹಿಳೆಯರು ಸಂತೋಷದಿಂದ ಆಚರಿಸಲು ಹಬ್ಬದ ಒಳಗೆ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಹಣ ಅರ್ಹ ಮಹಿಳೆಯರಿಗೆ ದೊರೆಯಲಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 375621 ಮಹಿಳಾ ಫಲಾನುಭವಿಗಳು ಅರ್ಹರಾಗಿದ್ದು ತಲಾ ಅರ್ಹ ಮಹಿಳೆಗೆ ರೂ.2000/- ರೂಗಳಂತೆ ಒಟ್ಟು ರೂ.751242000/- (ಎಪ್ಪತ್ತೈದು ಕೋಟಿ ಹನ್ನರೆಡು ಲಕ್ಷ ನಲವತ್ತೆರಡು ಸಾವಿರ) ರೂಪಾಯಿಗಳನ್ನು ಪ್ರತಿ ತಿಂಗಳು ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.