ಸುದ್ದಿಲೈವ್/ಶಿವಮೊಗ್ಗ
ಭದ್ರಾವತಿಯ ಮಸ್ಜಿದ್-ಎ-ಸುನ್ನಿ ಮತ್ತು ಹೆಚ್ಚುವರಿ ಆಸ್ತಿಗಳು ಇದರ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ 11 ಜನರ ನಿರ್ದೇಶಕರನ್ನ ಆಯ್ಕೆ ಮಾಡಲಾಗಿದೆ.
11 ಜನ ನಿರ್ದೇಶಕರ ಸ್ಥಾನಕ್ಕೆ 16 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಅಖಾಡಕ್ಕಿಳಿದ್ದರು. 16 ಜನ ಸ್ಪರ್ಧಿಗಳಲ್ಲಿ 310 ಮತಗಳನ್ನ ಪಡೆದ ಶಬ್ಬೀರ್ ಖಾನ್ ಅತಿಹೆಚ್ಚು ಮತ ಪಡೆದು ಮೊದಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 295 ಮತಗಳನ್ನ ಪಡೆದ ಮೊಹಮ್ಮದ್ ಸಮೀವುಲ್ಲ ಎರಡನೇ ನಿರ್ದೇಶಕರಾಗಿ ಗೆಲವು ಸಾಧಿಸಿದ್ದಾರೆ.
ಅಬಿದಲಿ.ಎ ಎಂಬುವರು284 ಮತಗಳನ್ನ ಪಡೆದು ಮೂರನೇ ನಿರ್ದೇಶಕರಾಗಿ ಆಯ್ಕೆ ಆದರೆ, ಮೆಹಬೂಬ್ ಪಾಶ 280 ಮತಗಳನ್ನ ಪಡೆದು ನಾಲ್ಕನೇ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 279 ಮತಗಳನ್ನ ಪಡೆದ ಅಫ್ತಾಬ್ ಅಹಮದ್ ಎನ್ ಐದನೇ ನಿರ್ದೇಶಕರಾಗಿ,
275 ಮತಗಳನ್ನ ಪಡೆದ ನಸ್ರುಲ್ಲಾ 6 ನೇ ನಿರ್ದೇಶಕರಾಗಿ, 274 ಮತಗಳನ್ನ ಪಡೆದ ಜಾವಿದ್ ಖಾನ್ 7 ನೇ ನಿರ್ದೇಶಕರಾಗಿ, 272 ಮತಗಳನ್ನ ಪಡೆದ ಅಕ್ರಂ ಪಾಶ 8 ನೇ ನಿರ್ದೆಶಕರಾಗಿ, 266 ಮತಗಳನ್ನ ಪಡೆದ ದಾವೂದ್ ಯು.ಹೆಚ್.ಎಸ್ 9 ನೇ ನಿರ್ದೇಶಕರಾಗಿ, 245 ಮತಗಳನ್ನ ಪಡೆದ ಮೊಹಮದ್ ಶೋಯಬ್ ಉಲ್ಲಾ 10 ನೇ ನಿರ್ದೇಶಕರಾಗಿ, 11 ನೇ ನಿರ್ದೇಶಕರಾಗಿ ಮೊಹಮದ್ ಕಯ್ಯೂಮ್ 225 ಮತಗಳನ್ನ ಪಡೆದು ಆಯ್ಕೆಯಾಗಿದ್ದಾರೆ
ಭದ್ರಾವತಿಯ ಮಸ್ಜಿದ್-ಎ-ಚೌಕ್ ಸುನ್ನಿ ಮತ್ತು ಹೆಚ್ಚುವರಿ ಆಸ್ತಿಗಳು, ಭದ್ರಾವತಿ ಟೌನ್ & ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇದರ 11 ಜನ ಸದಸ್ಯರ ಆಡಳಿತ ಮಂಡಳಿ ಚುನಾವಣೆಗೆ ಒಟ್ಟು 16 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆ ಹಿನ್ನಲೆಯಲ್ಲಿ ಅಲ್-ಮಹಮೂದ್ ಬಾಲಕಿಯರ ಪಿಯು ಕಾಲೇಜಿನಲ್ಲಿ ಇಂದು ಮತದಾನ ನಡೆದಿದೆ.
ಮತದಾನವು ಬೆಳಿಗ್ಗೆ 08:00 ಗಂಟೆಯಿಂದ ಪ್ರಾರಂಭಗೊಂಡು ಸಂಜೆ 04:00 ಗಂಟೆಯವರೆಗೆ ನಡೆದು ಮುಕ್ತಾಯವಾಗಿದೆ. ಒಟ್ಟು 556 ಮತದಾರರಿದ್ದು, 556 ಮತದಾರರಲ್ಲಿ ಒಟ್ಟು 472 ಮತದಾರರು ಮತಗಳನ್ನು ಚಲಾಯಿಸಿದ್ದಾರೆ. ಸಂಜೆ 05:00 ಗಂಟೆಯಿಂದ ಮತೆಣಿಕೆ ನಡೆದಿದೆ.
ಎರಡು (02) ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ಮತಎಣಿಕೆ ಪ್ರಕ್ರಿಯೆಯು 06:15 ಗಂಟೆಗೆ ಮುಕ್ತಾಯಗೊಂಡಿದೆ. ಮತ ಎಣಿಕೆಯಲ್ಲಿ 11 ಜನರ ಆಯ್ಕೆಯಾಗಿದೆ. ಜಿಲ್ಲಾ ವಕ್ಫ್ ಅಧಿಕಾರಿ ಸೈಯ್ಯದ್ ಮೆಹ್ತಾಬ್ ಸಾಬ್ ಯಶಸ್ವಿಯಾಗಿ ಚುನಾವಣೆ ನಡೆಸಿಕೊಟ್ಟಿದ್ದಾರೆ. ಎಂಎಲ್ ಸಿ ಬಲ್ಕಿಸ್ ಭಾನು ಗೆದ್ದ ನಿರ್ದೇಶಕರನ್ನ ಅಭಿನಂದಿಸಿದ್ದಾರೆ.