Girl in a jacket

ಅ.11 ರಂದು ಕನ್ನಡ ಜ್ಯೋತಿ ರಥಯಾತ್ರೆ ಶಿವಮೊಗ್ಗ ಜಿಲ್ಲೆಗೆ ಆಗಮನ


ಸುದ್ದಿಲೈವ್/ಶಿವಮೊಗ್ಗ

‘ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ’ ಅಭಿಯಾನದ ಅಂಗವಾಗಿ ಮುಖ್ಯಮಂತ್ರಿಗಳಿಂದ ಚಾಲನೆಗೊಂಡ ಕನ್ನಡ ಜ್ಯೋತಿ ರಥಯಾತ್ರೆಯು ಅ.11 ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದೆ.

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ 2023 ರ ನವೆಂಬರ್ 1 ಕ್ಕೆ 50 ವರ್ಷ ಪೂರ್ಣಗೊಂಡ ಶುಭ ಸಂದರ್ಭಕ್ಕೆ ಮಾನ್ಯ ಮುಖ್ಯಮಂತ್ರಿಗಳು 2023-24 ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಸಂಭ್ರಮ-50 ಘೋಷಿಸಿದ್ದು, ಇದರಡಿ ‘ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಕನ್ನಡ ಜ್ಯೋತಿ ರಥೆಯಾತ್ರೆಯನ್ನು ಮಾನ್ಯ ಮುಖ್ಯಮಂತ್ರಿಗಳು 2023 ರ ನ.02 ರಂದು ವಿಜಯನಗರ ಜಿಲ್ಲೆಯ ಹಂಪೆಯಿಂದ ಚಾಲನೆ ನೀಡಿದ್ದು, ಈ ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಾ, ಶಿವಮೊಗ್ಗ ಜಿಲ್ಲೆಗೆ ಅ.11 ರಂದು ಆಗಮಿಸಲಿದೆ.

ರಥಯಾತ್ರೆಯನ್ನು ಜಾನಪದ ಕಲಾತಂಡಗಳೊಂದಿಗೆ ಸ್ವಾಗತಿಸಿ, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘಟನೆಗಳು ಭಾಗವಹಿಸಿ, ಬೀಳ್ಕೊಡಲಾಗುವುದು. ಅ.11 ರಂದು ಹೊಸನಗರ, ಅ.13 ರಂದು ತೀರ್ಥಹಳ್ಳಿ, ಅ.14 ರಂದು ಭದ್ರಾವತಿ, ಅ.15 ರಂದು ಶಿವಮೊಗ್ಗ, ಅ.16 ರಂದು ಶಿಕಾರಿಪುರ, ಅ.17 ರಂದು ಸೊರಬ ಮತ್ತು ಅ.18 ರಂದು ಸಾಗರ ತಾಲ್ಲೂಕುಗಳಲ್ಲಿ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು