ವಾಟರ್ ಬೋರ್ಡ್ ಗೆ 10 ದಿನ ಗಡುವು



ಸುದ್ದಿಲೈವ್/ಶಿವಮೊಗ್ಗ

ಕುಡಿಯುವ ನೀರಿನ ಟರ್ಬಿಡಿಟಿಗೆ ಶಾಸಕರು ಮತ್ತು ಆಡಳಿಮಂಡಳಿಯ  ಇಚ್ಚಾಶಕ್ತಿ ಕೊರತೆ ಇದೆ ಎಂದು ನಾಗರೀಕ ಹಿತರಕ್ಷಣ ಸಮಿತಿ ಗಂಭೀರ ಆರೋಪ ಮಾಡಿದೆ

ಸುದ್ದಿಗೋಷ್ಠಿಯಲ್ಲಿ ನಡೆಸಿದ ವಸಂತ ಕುಮರ್, ಸತೀಶ್ ಶೆಟ್ಟಿ ಹಾಗೂ ಇತರರು, ವಾಟರ್‌ಪಂಪ್ ಹೌಸ್ ಬಹಳ ಗಂಭೀರವಾಗಿದೆ. ಶಾಸಕರು ಅಧಿಕಾರಿಗಳ‌ಮಾತು ಕೇಳಿ ಡಿ.31ರ ಒರಗೆ ಸರಿಪಡಿಸಲು ಗಡಿ ನೀಡಿದ್ದಾರೆ. ನಮಗೆ ನಿರ್ವಹಿಸಲು ಕೊಡಿ ಎರಡೇ ದಿನಗಳಲ್ಲಿ ಸರಿಪಡಿಸುತ್ತೇವೆ ಎಂದರು. 

ಪೋಸ್ಟ್ ಕ್ಲೋರಿನ್ ಚೆಕ್ ಮಾಡುವ ವ್ಯವಸ್ಥೆ ಇಲ್ಲ,  ಪ್ಯೂರಿಫಿಕೇಷನ್ ಆಗ್ತಾಇಲ್ಲ . ಲ್ಯಾಬ್ ಟೆಕ್ನಿಷಿಯನ್ ಕೊರತೆ ಇದೆ. ಉಪಕರಣಗಳು ಕೆಲಸ ಮಾಡದೆ ದುರಸ್ತಿಗೆ ಬಂದಿವೆ. ಒಟ್ಟಿನಲ್ಲಿ ಕುಡಿಯುವ ನೀರಿನ ಘಟಕ ಅವ್ಯಸ್ಥೆಯಾಗಿದೆ. ಯಾವ ಉಪಕರಣಗಳು ಕೆಲಸಮಾಡುತ್ತಿಲ್ಲ. ಹಾಗಾಗಿ ವಾಟರ್ ಬೋರ್ಡ್ ಗೆ 10 ದಿನಗಳ  ಗಡುವು ಕೊಡುತ್ತಿದ್ದೇವೆ ಎಂದರು. 

ಒ ಅಂಡ್ ಎಂ  ಸಿಸ್ಟಮ್ ಅಡಿ ವಾಟರ್ ಬೋರ್ಡ್ ನ್ನ ಔಟ್ ಸೋರ್ಸ್ ಕೊಟ್ಟಲ್ಲಿ ನಮ್ಮ ಸಂಸ್ಥೆ ನಿರ್ವಹಿಸಲು ಸಿದ್ದವಿದೆ. ಬೆಂಗಳೂರಿನ ವಾಟರ್ ಬೋರ್ಡ್ ನ್ನ ಔಟ್ ಸೋರ್ಟ್ ಅಡಿ ಖಾಸಗಿ ಸಂಸ್ಥೆಗೆ ಗುತ್ತಿಗೆ ಕೊಡಲಾಗಿದೆ. ತುಂಬ ಚೆನ್ನಾಗಿ ನೋಡಿಕೊಂಡು ಹೋಗಲಾಗುತ್ತಿದೆ. ನಾವು ಸಹ ವಾಟರ್ ಬೋರ್ಡ್ ನಿರ್ವಹಿಸು ಸಿದ್ದರಿರುವುದಾಗಿ ಹೇಳಿದರು. ಕೆಮಿಕಲ್ ಮತ್ತು ಬಯಾಲಾಜಿಕಲ್ ಅನಲಿಸಿಸ್ ಇರಬೇಕು. ಪಿಹೆಚ್ ಬಗ್ಗೆ ಅಲ್ಲಿನ ಸಿಬ್ಬಂದಿಗೆ  ಜ್ಞಾನವಿಲ್ಲ. ಜಿಲ್ಲಾಧಿಕಾರಿ, ಜಲಮಂಡಳಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಜವಬ್ದಾರಿ ವಹಿಸಿಕೊಳ್ಳಬೇಕೆಂದು ಆಗ್ರಹಿಸಿದರು. 

10 ದಿನಗಳ ಒಳಗೆ ನೀರಿನ ಸಮಸ್ಯೆ ಸರಿಪಡಿಸಬೇಕು  ಶಾಸಕರು ನಮ್ಮ ಜೊತೆ ಬಂದರೆ ಸಮಸ್ಯೆ ಗೊತ್ತಾಗುತ್ತದೆ. ಶಿವಮೊಗ್ಗ ಮುಂದಿನ ಐದು ವರ್ಷದಲ್ಲಿ 5 ಲಕ್ಷ ಜನ ಜನಸಂಖ್ಯೆ ತಲುಪಿದರೆ 100 ಎಂಎಲ್ ಡಿ ನೀರಿನ ಅವಶ್ಯಕತೆ ಬೇಕಾಗುತ್ತದೆ.  ಶೀಘ್ರದಲ್ಲಿಯೇ ಈ 100 ಎಂ ಎಲ್ ಡಿ ನೀರು ಪೂರೈಕೆಗೆ ಶಿವಮೊಗ್ಗ ಸಿದ್ದವಿರಬೇಕು.  ಪ್ರಸ್ತುತ 84 ಎಂಎಲ್ ಡಿ ನೀರು ಅವಶ್ಯಕತೆ ಇರುವ ಜಾಗದಲ್ಲಿ  44 ಎಂ ಎಲ್ ಡಿ ನೀರು ಸರಬರಾಜಾಗುವುದರಿಂದ ನೀರಿನ ಆಹಾಕಾರ ಶುರುವಾಗಿದೆ ಎಂದರು. 

ಆಲಂ ಸಹ ಇವರ ಬಳಿ ಸಂಗ್ರಹವಿಲ್ಲ. ಮೊನ್ನೆ ಎರಡು ಲೋಡು ಬಂದಿದೆ. ಈ ಕುರಿತು ಡಿಸಿ ಮತ್ತು ಶಾಸಕರ ನೇತೃತ್ವದಲ್ಲಿ ಸಭೆಯಾಗಬೇಕು. ಪಂಪ್ ಹೌಸ್ ನಲ್ಲಿ 15 ಮೋಟಾರ್ ಬೇಕಿದೆ. ವಾಟರ್  ಬೋರ್ಡ್ ನಿರ್ವಹಣೆ ಇಲ್ಲವಾಗಿದೆ.  ಕ್ಲೋರಿನ್ ಯುನಿಟ್ ನಿರ್ವಹಣೆ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಕ್ರೆಬೈಲಿನ ಬಳಿ 20 ಎಕರೆ ಜಾಗ ಬೇಕು 200 ಕೋಟಿ ಬೇಕು ಅಂತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲುಸಲಾಗಿದೆ 1 ಕೋಟಿ ರೂನಲ್ಲಿ ಇರುವ ವಾಟರ್ ಬೋರ್ಡ್ ನ್ನ ಸರಿಪಡಿಸಬಹುದು. ಶಾಸಕರ ಡಿಸೆಂಬರ್ ಗಡುವು ನಗೆ ಹುಟ್ಟಿಸುವಂತಹದ್ದು ಮೂರು ದಿನಗಳಲ್ಲಿ ಪಂಪ್ ಹೌಸ್ ನಲ್ಲಿ ಶುದ್ಧೀಕರಿಸಿದ ನೀರು ಸಿಗುವಂತೆ ನಾವು ಮಾಡುತ್ತೇವೆ  ಎಂದು ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close