ಮಧ್ಯಾಹ್ನ 1 ಗಂಟೆಗೆ ಈ ಕಚೇರಿಯ ಸಿಬ್ಬಂದಿಗಳು ಸಾಮೂಹಿಕ ಊಟಕ್ಕೆ ತೆರಳುತ್ತಾರೆ!

ಸುದ್ದಿಲೈವ್/ಶಿವಮೊಗ್ಗ

ಹಿರಿಯ ಉಪ ನೋದಣಿ ಕಚೇರಿ ಬಣ ಬಣ ಎನ್ನುವಂತಾಗಿದೆ. ದಿನಗಟ್ಟಲೆ ನಿಂತು ರಿಜಿಸ್ಟ್ರೇಷನ್ ಗೆ ಕಾಯ ಬೇಕಿದ್ದ ಕಚೇರಿ ಈಗ ಬಿಕೋ ಎನ್ನುವಂತಾಗಿದೆ. 

ಇ-ಸ್ವತ್ತು ಸಿಗದ ಕಾರಣ ಕಚೇರಿ ಬಿಕೋ ಎನ್ನುತ್ತಿದೆ. ಇ-ಸ್ವತ್ತು ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಾರಿಗೆ ತಂದಿದೆ. ಇದೊಂದು ಸಾಫ್ಟ್ ವೇರ್ ಆಗಿದ್ದು, ಈ ದಾಖಲಾತಿ ಇಲ್ಲದೆ  ಇಲ್ಲದೆ ನೋಂದಣಿಯಾಗುತ್ತಿಲ್ಲ. ಪರಿಣಾಮ ಕಚೇರಿ ಬಿಕೋ ಎನ್ನುವಂತಾಗಿದೆ.

ಲಕ್ಷ ಕೋಟಿಗಳ ಲೆಕ್ಕಾಚಾರದಲ್ಲಿ ನಡೆಯುತ್ತಿದ್ದ ಸಬ್ ರಿಜಿಸ್ಟ್ರಾರ್ ಕಚೇರಿಯ ವ್ಯವಹಾರ, ಊಟಕ್ಕೂ ಬಿಡುವಿಲ್ಲದಂತಿತ್ತು. ಆದರೆ ಇ-ಸ್ವತ್ತಿನ ಜಾರಿಯಿಂದಾಗಿ ಕಚೇರಿಯ ಸಿಬ್ಬಂದಿಗಳ  ಊಟದ ಸಮಯವೂ ಬದಲಾಗಿದೆ. ಇ-ಸ್ವತ್ತು ಜಾರಿಗೆ ಮೊದಲು ಕೆಲವೊಂದು ವೇಳೆಯಲ್ಲಿ ಇಲ್ಲಿ ಸಿಬ್ಬಂದಿಗಳು ನಾಲ್ಕುಗಂಟೆಗೆ ಊಟಕ್ಕೆ ಹೋಗುತ್ತಿದ್ದ ಉದಾಹರಣೆಗಳಿತ್ತು

ಆದರೆ ಸಬ್ ರಿಜಿಸ್ಟ್ರು ಕಚೇರಿಯ ಸಿಬ್ಬಂದಿಗಳು ಜನಗಳು ಇಲ್ಲದೆ ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಹೋಗಿದ್ದಾರೆ. ಈ ವೇಳೆಯಲ್ಲಿ ಇಲ್ಲಿನ ಸಿಬ್ಬಂದಿಗಳು ಸಾಮೂಹಿಕ ಊಟಕ್ಕೆ ಹೋಗಿರುವುದರಿಂದ ಕಚೇರಿ ಯಾವುದೋ ಪ್ರತಿಭಟನೆಯಲ್ಲಿ ತೊಡಗಿರಬೇಕು ಎಂಬ ಭಾವನೆ ಮೂಡುವಂತಾಗಿದೆ. ಮದುವೆ ರಿಜಿಸ್ಟ್ರೇಷನ್ ಗೆ ಇಲ್ಲಿ ಜನಗಳ ಸಾಲು ಕಡಿಮೆನೆ

ಸ್ವತ್ತು ಮಾರಲು ಇ-ಸ್ವತ್ತು ಅಡ್ಡಿ

ಪಾಲಿಕೆಯಲ್ಲಿ ಖಾತೆ ಎಕ್ಸ್ಟ್ರಾಕ್ಟ್ ‌ಬದಲು ಇ-ಸ್ವತ್ತು ನೀಡಬೇಕು ಎಂದು ಸರ್ಕಾರ ಸೂಚಿಸಿದ್ದು ಯಡವಟ್ಟಾಗಿದೆ. ಯಾರ ಹೆಸರಿನಲ್ಲಿ ರಿಜಿಸ್ಟ್ರೇಷನ್ ಆಗಿದೆಯೋ ಅವರ ಆಧಾರ್ ಕಾರ್ಡ, ಮನೆ ಪತ್ರ, ಹಳೆ ಕಂದಾಯ, ನಿವೇಶನದ ಅಥವಾ ಕಟ್ಟಡದ ಚಿತ್ರ ನೀಡಬೇಕು. ನಂತರ ಬಿಲ್ ಕಲೆಕ್ಟರ್ ಬಂದು ಮನೆಯಿಂದಲೇ ಲೊಕೇಷನ್ ಹಾಕಿ ಮೂರು ದಿನಗಳಲ್ಲಿ ಈ ದಾಖಲಾತಿ ಸಾರ್ವಜನಿಕರ ಕೈ ಸಿಗಬೇಕು ಎಂಬುದು ಸರ್ಕಾರದ ಉದ್ದೇಶ. 

2018 ರ ಸರ್ಕಾರದ ಆದೇಶ ಇದಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ಈ ವ್ಯವಸ್ಥೆಯನ್ನ 2023 ರವರೆಗೂ ಜಾರಿ ಮಾಡಿಕೊಂಡಿರಲಿಲ್ಲ. ಸರ್ಕಾರ ಯಾವಾಗ ದುಂಬಾಲು ಬಿತ್ತೋ ಪಾಲಿಕೆ 2 ಜನ ಹೊರಗುತ್ತಿಗೆ ದಾರರನ್ನ ನಡೆಸಿ ಸರ್ವೆ ನಡೆಸಿತು. ಎಲ್ಲರಿಗೂ  ದಾಖಲಾತಿ ನೀಡಲು ಸೂಚಿಸಿತ್ತು. ಶಿವಮೊಗ್ಗದಲ್ಲಿ ಸರಿಸುಮಾರು 2 ಲಕ್ಷ ಜನ ಖಾತೆದಾರರಿದ್ದಾರೆ.  

ಇದರಲ್ಲಿ 60-80% ಜನ ಪಾಲಿಕೆಗೆ ದಾಖಲಾತಿ ನೀಡಿದ್ದಾರೆ. ಇ-ಸ್ವತ್ತು ಎಂಬುದು ಸಾಫ್ಟ್ ವೇರ್ ಆಗಿರುವುರಿಂದ ಖಾತೆ ಹೊಂದಿದವರ ಹೆಸರು ಹೊರತುಪಡಿಸಿ, ಬೇನಾಮಿ ಹೆಸರಿನಲ್ಲಿ   ಖಾತೆಯಾಗಿದ್ದ ಉದಾಹರಣಗಳಿವೆ.  ಇದನ್ನ ತಪ್ಪಿಸಲು ಸರ್ಕಾರ ಉತ್ತಮ ಸಾಫ್ಟವೇರ್ ತಂದಿದೆ. ಆದರೆ ಪಾಲಿಕೆ ಸಾರ್ವಜನಿಕರು ಕೊಟ್ಟ ದಾಖಲಾತಿಗಳು ಸ್ಕ್ವಾಶ್ ಆಗಿದೆ ಹೊಸದಾಗಿ ಕೊಡಲು ಹೇಳುತ್ತಿದೆ. 

ಇದರೊಂದಿಗೆ ಈಗ 15 ವರ್ಷ ಇಸಿಕೊಡಲು ಹೇಳುತ್ತಿರುವುದು ಸಹ ಜನರಿಗೆ ಬೇಸರ ತಂದಿದೆ. ಇ-ಸ್ವತ್ತು ಇಲ್ಲದೆ ಖರೀದಿ ಮತ್ತು ಮಾರಾಟ ಒಂದೇ ಅಲ್ಲ ಮಾರ್ಟಿಗೇಜ್ ಸಾಲ ಸಹ ಸಿಗುತ್ತಿಲ್ಲ. ನಿನ್ನೆ ಪತ್ರಬರಹಗಾರರು ಇ-ಸ್ವತ್ತು ವಿಳಂಬವನ್ನ ಖಂಡಿಸಿ ಪ್ರತಿಭಟಿಸಿದ್ದಾರೆ. ನಿನ್ನೆ ಪಾಲಿಕೆ ಆಯುಕ್ತರು ಖಾತೆ ಎಕ್ಸ್ಟ್ರಾಕ್ಟ್ ಪಡೆದು ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ಕೇಳಿ ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close