ನ.03 ರಂದು ಸುಗಮ‌ ಸಂಭ್ರಮ ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ

ನ.03‌ಕ್ಕೆ ಕುವೆಂಪು ರಂಗ ಮಂದಿರದಲ್ಲಿ ಶ್ರೀಗಂಧದಿಂದ ಸಂಗೀತ ಕ್ಷೇತ್ರದ ಹಿರಿಯ ಸಾಧಕರಿಗೆ ಸನ್ಮಾನ ಮತ್ತು ಗೀತ ನಮನ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದು, ಸುಗಮ ಸಂಭ್ರಮ ಎಂಬ ಅಡಿ ಈ ಕಾರ್ಯಕ್ರಮ ಜರುಗಲಿದೆ. 

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಗುಹುಗುಹ ನಾಗರಾಜ್ ಶೃಂಗೇರಿ ಮತ್ತು ವಿನಯ್ ಕುಮಾರ್, ಗರ್ತಿಕೆರೆ ರಾಘಣ್ಣ, ನಿತೋತ್ಸವ ಹಾಡಿನ ಗಾಯಕಿ ಎಂ.ಕೆ.ಜಯಶ್ರೀ, ಪುತ್ತೂರು ನರಸಿಂಹ ನಾಯಕ್ ಅವರಿಂದ ಭಾವ ಗೀತಗಳು ಹಾಡಲಿದ್ದಾರೆ. 

ನಗರದ ನರರೋಗ ತಜ್ಞ, ಡಾ.ಶಿವರಾಂಕೃಷ್ಣನ್, ಗಣಿತ ಉಪನ್ಯಾಸಕ ಪ್ರೊ.ಶಂಕರ್ ನಾರಾಯಣ ಶಾಸ್ತ್ರಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಕಿರಣ್ ದೇಸಾಯಿಗೆ ಸನ್ನಾನಿಸಲಾಗುವುದು. 

ನಂತರ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಿರಿಯ ಗಾಯಕರ ಉಪಸ್ಥಿತಿಯಲ್ಲಿ ಯುವ ಕಲಾವಿದರು ಹಾಡಲಿದ್ದಾರೆ. 700 ರಿಂದ 800 ಜನ ಈ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಮೂಹ ಗಾಯನ ನಡೆಯಲಿದೆ. ಗುರುಗುಹ, ಶಾರದಾ ಮತ್ತು ರಾಗರಂಜನಿ ಪಾಠ ಶಾಲೆಯರು ಭಾಗವಹಿಸಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close