ಶಿಕಾರಿಪುರದ ಪುರಸಭೆ ಹಂಚಿಕೆಯಲ್ಲಿ ಭ್ರಷ್ಠಾಚಾರ-SIT ತನಿಖೆಗೆ ಆಗ್ರಹ




ಸುದ್ದಿಲೈವ್/ಶಿವಮೊಗ್ಗ


ಶಿಕಾರಿಪುರ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಹರಾಜ್ ಪ್ರಕ್ರಿಯೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗ ಗೋಪಿ ವೃತ್ತದಿಂದ ಹೊರಟು ಗೋಪಿ ವೃತ್ತದ ಬಳಿ ಧರಣಿ ಕುಳಿತಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 


ಪ್ರಭಾವಿಗಳ ಪಾಲಾದ ಪುರಸಭೆಯ ಮಳಿಗೆಗಳ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರ ಈ ಕೂಡಲೇ ಪಾರದರ್ಶಕವಾದ ಉನ್ನತ ಮಟ್ಟದ S.I.T. ತನಿಖೆಗೆ ಆದೇಶಿಸಬೇಕು ಹಾಗೂ ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಶಿಸ್ತುಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. 


 ಮೆರವಣಿಗೆಯ ಉದ್ಧಕ್ಕೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರರವರ ವಿರುದ್ಧ ದಿಕ್ಕಾರ ಕೂಗಲಾಗಿದೆ. 


ಶಿವಮೊಗ್ಗಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪುರಸಭೆಗೆ ಸೇರಿದ ವಿವಿಧ ಯೋಜನೆಗಳಡಿ ನಿರ್ಮಿಸಲಾದ 64 ವಾಣಿಜ್ಯ, ಮಳಿಗೆಗಳನ್ನ 12 ವರ್ಷಗಳ ಅವಧಿಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ಇ-ಹರಾಜು ಮತ್ತು ಬಾಕ್ಸ್ ಟೆಂಡರ್ ಮೂಲಕ ಆಯ್ಕೆ ಮಾಡಲು 2023-24 ರಲ್ಲಿ ಹರಾಜ್ ಪ್ರಕಟೆ  ಮಾಡಲಾಗಿತ್ತು. 


ಬಾಡಿಗೆ ಪಡೆದವರು ಪರಭಾರೆ ಮಾಬಾರದು ಎಂದು ಇದ್ದರೂ 25 ಕ್ಕೂ ಹೆಚ್ಚು ಮಳಿಗೆ ಹಿಡಿದವರು ಪರಭಾರೆ ಮಾಡಿದ್ದಾರೆ. ಈ ಹಿಙದೆ ಬಾಡಿಗೆ ಉಳಿಸಿಕೊಂಡವರು ಟೆಂಡರ್ ನಲ್ಲಿ ಭಾಗಿಯಾಗುವಂತಿಲ್ಲವಾದರೂ ಈ ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. 


ಮಳಿಗೆಗಳನ್ನ ವರ್ಕ್ ಶಾಪ್, ಆಟೋಮೊಬೈಲ್ ರಿಪೇರಿಗೆ ನೀಡುವಂತಿಲ್ಲವಾದರೂ ಅವರುಗಳಿಗೆ ಮಳಿಗೆ ನೀಡಲಾಗಿದೆ. ಕಾಯ್ದೆ ನಿಯಮ 1964 ರ ಪ್ರಕಾರ ಉದ್ದಿಮೆ ಪರವಾನಿಗೆ ಪಡೆದು ನಂತರ ಹರಾಜಿನಲ್ಲಿ ಭಾಗಿಯಾಗಬೇಕೆಂದುದಿದ್ದರೂ ಅಂತಹವರಿಗೆ ಮಳಿಗೆ ಹರಾಜು ಮಡಲಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 


ಈ ತನಿಖೆಯನ್ನ ಎಸ್ಐಟಿಗೆ ವಹಿಸಬೇಕು ಭ್ರಷ್ಠ ಅಧಿಕಾರಿಗಳನ್ನ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ  ಸಂಘಟನೆಯ ರಾಜ್ಯಾಧ್ಯಕ್ಷ ಅನಿಲ್ ಕುಂಚಿ, ಉಪಾಧ್ಯಕ್ಷ ಯುವರಾಜ್, ಹಾಷಂ, ಬಿಬಿ ಆಯಿಷ, ಮೊದಲಾದವರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು