ಗೋಪಾಳದಲ್ಲಿ ರಸ್ತೆ ಅಪಘಾತ-ಸಕಾಲಕ್ಕೆ ಬಾರದ ಅಂಬ್ಯುಲೆನ್ಸ್



ಸುದ್ದಿಲೈವ್/ಶಿವಮೊಗ್ಗ


ಗೋಪಾಳದಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದು, ಸಕಾಲದಲ್ಲಿ ಅಂಬ್ಯೂಲೆನ್ಸ್ ಸಿಗದೆ ಸ್ಥಳೀಯರ ಸಹಾಯದಿಂದ ಬೇರೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. 


ಗಾಯಗೊಂಡವರನ್ನ ಬಿಹಾರದ ಕೂಲಿ ಕಾರ್ಮಿಕರೆಂದು ತಿಳಿದು ಬಂದಿದ್ದು, ಬೈಕ್ ನಲ್ಲಿ ಬಂದ ವೇಳೆ ಕಾರಿಗೆ ಗುದ್ದಿದ್ದಾರೆ. ಇಬ್ಬರಿಗೆ ತೀವ್ರವಾಗಿ ಗಾಯವಾಗಿದೆ. 


ಸಕಾಲದಲ್ಲಿ ಅಂಬ್ಯುಲೆನ್ಸ್ ಗಳು ಸಿಗುತ್ತಿಲ್ಲ ಎಂಬ ಆರೋಪದ ನಡುವೆಯೇ ನಗರದಲ್ಲಿ ಈ ಘಟನೆ ಮತ್ತೊಂದು ಸಾಕ್ಷಿಯಾಗಿ ಹೊರಹೊಮ್ಮಿದೆ. ಜೀವ ಉಳಿಸಲು ಬರಬೇಕಿದ್ದ ಅಂಬ್ಯುಲೆನ್ಸ್ ವಿಳಂಬವಾದ ಕಾರಣ ಆತನನ್ನ ಸ್ಥಳೀಯರೆ ಆಟೋ ಮತ್ತು ಗುದ್ದಿದ ಕಾರಿನಲ್ಲಿಯೇ ಆಸ್ಪತ್ರೆಗೆ ಸಾಗಿಸಲಾಗಿದೆ. 


ಕಾಶಿಪುರದಲ್ಲಿ ಪಿಒಪಿ ಕೆಲಸಕ್ಕೆಂದು ಬಿಹಾರ್ ದಿಂದ ಬಂದಿದ್ದಾರೆ. ಇಬ್ವರಿಗೆ ಕಾಲು ಮುರಿತಗೊಂಡಿದೆ. ಹೆಸರುಗಳು ತಿಳಿದು ಬಂದಿಲ್ಲ. ಈ ಘಟನೆ ಇಂದು ಸಂಜೆ ಸಂಭವಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close