ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ (ಸಿಸಿಎಫ್) ಕಚೇರಿಯ ಆವರಣದಲ್ಲಿ ಮರಗಳ ಕಡಿತಲೆ-ಸ್ಪಷ್ಟೀಕರಣ ಕೇಳಿದ ಸಚಿವರು

 


ಸುದ್ದಿಲೈವ್/ಶಿವಮೊಗ್ಗ

ಜನಗಳು ವಸತಿಗಾಗಿ ಮರ ಕಡಿದರೆ ಕಠಿಣ ಶಿಕ್ಷೆ ಅರಣ್ಯ ಇಲಾಖೆಯ ಅಧಿಕಾರಿಗಳೇ ನಿಯಮ ಉಲ್ಲಂಘಿಸಿದರೆ ಯಾವ ಶಿಕ್ಷೆ? ವರ್ಗಾವಣೆ ಒಂದೇ ಪರಿಹಾರನಾ? ಜನಸಾಮಾನ್ಯರಿಗೊಂದು ಅಧಿಕಾರಿಗಳಿಗೊಂದು ಹಾಗೂ ರಾಜಕಾರಣಿಗಳಿಗೊಂದು ನಿಯಮ ಮೌಖಿಕವಾಗಿ ಜಾರಿಯಲ್ಲಿದೆ ಎಂಬ ಮಾತು ಈ ಘಟನೆಗೆ ಹೋಲಿಸಿದರೆ ಹೌದು ಎನಿಸುತ್ತದೆ. 

ಇಲಾಖೆಯಲ್ಲಿ ಬೆಳೆದಿರುವ ಮರಗಳನ್ನ  ಕಟಾವ್ ಮಾಡಲಾಗಿದೆ. ಈ ಬಗ್ಗೆ ಅರಣ್ಯ ಸಚಿವರೆ ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ (ಸಿಸಿಎಫ್) ಕಚೇರಿಯ ಆವರಣದಲ್ಲಿ ಮರಗಳನ್ನ ಕಟಾವ್ ಮಾಡಲಾಗಿರುವ ಬಗ್ಗೆ ಮಾಹಿತಿ ಕೇಳಿದ್ದು ಸೋಮವಾರದ ಒಳಗೆ ಮಾಹಿತಿ ಕಳುಹಿಸುವಂತೆ ಸೂಚಿಸಿರುವುದು ಭರ್ಜರಿ ಬೆಳವಣಿಗೆಗೆ ಕಾರಣವಾಗಿದೆ.

ಈ ಹಿಂದಿನ ಜೈಲ್ ಸೂಪರಿಂಟೆಂಡೆಂಟ್ ಡಾ.ಅನಿತಾರವರ ಮಾರ್ಗವನ್ನೇ ಅನುಸರಿಸುತ್ತಿರುವ ಈ ಮುಖ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಮಾಧ್ಯಮದವರು ಕೇಳು ಯಾವುದೇ ಮಾಹಿತಿಗೆ ಕರೆಯನ್ನ ಸ್ವೀಕರಿಸಿ ಮಾತನಾಡದ ಅಧಿಕಾರಿಯಾಗಿದ್ದಾರೆ.

ಇಂದು ಸಹ ಈ ಮರ ಕಡಿತಲೆ ಬಗ್ಗೆ ಮಾಹಿತಿ ಪಡೆಯಲು ಹೋದ ಮಾಧ್ಯಮದವರ ಕೈಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಆದರೆ ಅವರ ಮ್ಯಾನೇಜರ್,  ಜನಪ್ರತಿನಿಧಿಗಳ ವಾಹನದ ಮೇಲೆ ಮರ ಬಿದ್ದ ಪರಿಣಾಮ ಕಡಿಯಲಾಗಿರುವುದಾಗಿ ಒಪ್ಪಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ವಾಹನಗಳ ಮೇಲೆ ಮರ ಬಿದ್ದರೆ ಮರಗಳನ್ನೇ ಕಡಿದು ಬಿಸಾಕಲು ಇಲಾಖೆಗೆ ಅನುಮತಿ ಇದೆಯಾ? ಇಲ್ಲಿ ಕಾನೂನುಗಳು ಬರುವುದಿಲ್ಲವೇ? ಮಾಹಿತಿಯ ಪ್ರಕಾರ ಕಚೇರಿಯ ಆವರಣದಲ್ಲಿರುವುದು ರೈನ್ ಟ್ರೀ. ಇವುಗಳ ತಲೆ ಕಡಿದರೆನೇ ಚಿಗುರುವುದು ಕಷ್ಟ. ಎರಡು ವಾರಗಳ ಹಿಂದಷ್ಟೆ ಮರಕಡಿಯಲಾಗಿದೆ.  ಮೊದಲು ತಲೆಗಳನ್ನ ಕಡಿದು ನಂತರ ಬುಡವನ್ನೂ ಕತ್ತರಿಸಲಾಗಿದೆ.


ಈ ಬುಡ ಕತ್ತರಿಸಿರುವ ಉದ್ದೇಶಗಳ ಬಗ್ಗೆ ಅಧಿಕಾರಿಗಳ ಸ್ಪಷ್ಟನೆ ದೊರೆತಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಅತ್ತ ಕಸ್ತೂರಿ ರಂಗನ್ ವರದಿಯ ಬಾಧಿತರ ಸಭೆಯನ್ನ ಸಚಿವ ಈಶ್ವರ್ ಖಂಡ್ರೆ ನಡೆಸುತ್ತಿದ್ದರೆ,  ಇತ್ತ ರೈನ್ ಟ್ರೀಗಳ ಬುಡಕಡಿದು ವಾಹನಗಳಿಗೆ ಸಾಗಿಸಲಾಗುತ್ತಿತ್ತು. 

ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ (ಸಿಸಿಎಫ್) ಕಚೇರಿಯ ಆವರಣದಲ್ಲಿ ಹಲವಾರು ಬೃಹತ್ ಮರಗಳನ್ನು ಕಡಿದು ದಿಮ್ಮಿಗಳನ್ನು ಲಾರಿಗಳಲ್ಲಿ ಸಾಗಿಸಲಾಗಿದೆ ಎಂಬ ಸಚಿತ್ರ ಮಾಹಿತಿ ಸಚಿವ ಈಶ್ವರ್ ಖಂಡ್ರೆ ಕಚೇರಿಗೆ ಬಂದಿದೆ. 

ಅರಣ್ಯ ಇಲಾಖೆಯ ಕಚೇರಿ ಆವರಣದ ಈ ಬೃಹತ್ ವೃಕ್ಷಗಳ ಹನನಕ್ಕೆ ಕಾರಣವೇನು?ನಿಯಮಾನುಸಾರ ಮರ ಕಡಿತಲೆಗೆ ಅರ್ಜಿ ಸಲ್ಲಿಸಿ ಮರ ಕಡಿಯಲು ಆದೇಶ ಪಡೆಯಲಾಗಿದೆಯೇ? ಕಡಿದ ಮರಗಳನ್ನು ಯಾವ ಡಿಪೋಗೆ ಸಾಗಿಸಲಾಗಿದೆ ಎಂಬ ಸಂಪೂರ್ಣ ವಿವರವನ್ನು 3 ದಿನಗಳ ಒಳಗಾಗಿ ಈ ಕಚೇರಿಗೆ ಸಲ್ಲಿಸಲು ಸಚಿವರ ಕಚೇರಿ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket