ಟೋಲ್ ರದ್ಧತಿಗೆ ಸಂಸದರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಕುಟ್ರಳ್ಳಿ ಟೋಲ್


ಸುದ್ದಿಲೈವ್/ಶಿವಮೊಗ್ಗ


ಸವಳಂಗಕ್ಕೆ ಹೋಗುವ ಕಮಲಾಪುರ ಹಾಗೂ ಶಿರಾಳಕೊಪ್ಪದಲ್ಲಿರುವ ಕುಟ್ರಳ್ಳಿ ಟೋಲ್ ಕುರಿತು ಇಂದು ಸಂಸದ ರಾಘವೇಂದ್ರರವರ ಜೊತೆ  ಇಂದು ನಗರದ ಐಬಿಯಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಕೆಶಿಪ್ ಅಧಿಕಾರಿಗಳ ಚರ್ಚೆ ನಡೆದಿದೆ. ಸಭೆಯಲ್ಲಿ ಟೋಲ್ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. 


ಆದರೆ, ರಾಜ್ಯ ಸರ್ಕಾರವೇ ಟೋಲ್ ರದ್ಧತಿ ಕುರಿತು ತೀರ್ಮನಿಸ ಬೇಕಿರುವುದರಿಂದ ಸಂಸದ ರಾಘವೇಂದ್ರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಎಂಡಿಗೆ ಹಾಗೂ ಲೋಕೋಪಯೋಗಿ ಸಚಿವರಿಗೆ ಸಭೆಯಲ್ಲೇ ಕರೆ ಮಾಡಿ ಟೋಲ್ ರದ್ಧತಿವೆ ಮನವಿ ಮಾಡಿಕೊಂಡಿದ್ದಾರೆ.‌ ಕಡಿಮೆ ದೂರದಲ್ಲಿ ಟೋಲ್ ಸ್ಥಾಪಿಸಿರುವ ಬಗ್ಗೆ ಗಮನಕ್ಕೆ ತಂದು ಪರಿಶೀಲನೆ ಹಂತಕ್ಕೆ ತಂದಿದ್ದಾರೆ. ಸುಮಾರು ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಿದ್ದವಾಗಬೇಕಿದೆ. 


ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದ ರಾಘವೇಂದ್ರ ಶಿವಮೊಗ್ಗ-ಸವಳಂಗ, ಶಿಕಾರಿಪುರ-ಆನವಟ್ಟಿ ರಸ್ತೆಯಲ್ಲಿ  ಕೆಶಿಪ್ ನಲ್ಲಿ ಪಿಡಬ್ಲೂಡಿಯಿಂದ ಟೋಲ್ ನಿರ್ಮಾಣವಾಗಿದೆ. ಬಿಎಸ್ ವೈ ಸರ್ಕಾರ ತಡೆದಿತ್ತು. ಈ ಎರಡು ಟೋಲು ಮೂರು ಜಿಲ್ಲೆಗೆ ಸಂಪರ್ಕ ಸಾಧಿಸುತ್ತದೆ.‌ 


ಸಬ್ ರೋಡ್ ಇದ್ದರೆ ಕಡಿಮೆ ಅಂತರದಲ್ಲಿ ಟೋಲ್ ನಿರ್ಮಿಸಲು ಅವಕಾಶ ಇದೆ. ಇದು ದಯರುಪ ಯೋಗವಾಗಿದ್ದರಿಂದ  60 ಕಿಮಿ ದೂರ ಇರಬೇಕಾದ ಟೋಲ್ 30 ಕಿಮಿಗೆ ತಗ್ಗಿಸಿ ನಿರ್ಮಿಸಲಾಗಿದೆ.  25 ಕಿಮಿ ದೂರದ ವ್ಯಕ್ತಿ ಶಿವಮೊಗ್ಗಕ್ಕೆ ಬರಲು 70 ರೂ. ತೆರಿಗೆಯನ್ನ ರಸ್ತೆಗೆ ಕಟ್ಟಬೇಕಿದೆ. ಹಾಗಾಗಿ ಸಾರ್ವಜನಿಕರಿಗೆ ಹೊಡೆತ ಬೀಳುವುದನ್ನ ತಪ್ಪಿಸಬೇಕಿದೆ. ಎಂಡಿ ಮತ್ತು ಲೋಕೋಪಯೋಗಿ ಸಚಿವರಿಗೆ ಟೋಲ್ ರದ್ದತಿಗೆ ಪತ್ರಬರೆಯಲಾಗುತ್ತಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು