ಸುದ್ದಿಲೈವ್/ಶಿವಮೊಗ್ಗ
ನಾನು ಬಿಜೆಪಿಗೆ ಹೋಗುವುದು ಖಚಿತ ಆದರೆ ಶುದ್ದೀಕರಣದ ನಂತರವೇ ಹೋಗುವುದು ಬಿಡುವುದರ ಬಗ್ಗೆ ನಿರ್ಧರಿಸಲಿದ್ದೇನೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೊದಲು ಬಿಜೆಪಿ ಶುದ್ದೀಕರಣಗೊಳ್ಳಬೇಕು. ನಾನು ಬಿಜೆಪಿಗೆ ಹೋಗುವ ಚರ್ಚೆ ಮತ್ತೆ ಮುನ್ನಾಲೆಗೆ ಬಂದಿದೆ. ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಹೊಂದಾಣಿಕೆ ರಾಜಕಾರಣವನ್ನ ಪಕ್ಷದಲ್ಲಿ ಸಹಿಸಲು ಆಗಲಿಲ್ಲ. ಡಿಸಿಎಂ ಡಿಕೆಶಿ ನಮ್ಮ ಭಿಕ್ಷೆಯಿಂದ ವಿಜೇಂದ್ರ ಶಿಕಾರಿಪುರದಲ್ಲಿ ಗೆದ್ದಿದ್ದಾನೆ ಎಂದಿದ್ದಾರೆ. ಹಾಗಾದರೆ ಡಿಸಿಎಂ ಡಿಕೆಶಿ ವಿಜೇಂದ್ರರಿಗೆ ಅಲ್ಲಿ ಗೆಲ್ಲುವ ಭಿಕ್ಷೆ ಕೊಟ್ಟು ಪ್ರತಿಫಲವಾಗಿ ಏನು ಪಡೆದರು ಎಂದು ಪ್ರಕಟಿಸಲಿ ಎಂದು ಆಗ್ರಹಿಸಿದರು.
ವಿಜೇಂದ್ರ ಬಿಜೆಪಿ ಹೈಕಮಾಂಡ್ ಬಳಿ ಹೋಗಿ ತಲೆ ತಿಂದು ರಾಜ್ಯಾಧ್ಯಕ್ಷರಾದರು. ಹೊಂದಾಣಿಕೆ ರಾಜಕಾರಣ ನಡೆಸುವವರೆಗೆ, ಕುಟುಂಬ ರಾಜಕಾರಣ ಬಿಜೆಪಿಗೆ ಬಂದ ಕೆಟ್ಟರೋಗ. ಒಂದು ಕುಟುಂಬಕ್ಕೆ ಒಂದು ಸ್ಥಾನವನ್ನ ಮೋದಿ ಹೇಳಿದ್ದು ರಾಜ್ಯದಲ್ಲಿ ನಡೆಯಲಿಲ್ಲ. ರಘುಪತಿ ಭಟ್ ರನ್ನ ಕೈಬಿಡಲಾಯಿತು. ಸಿಟಿ ರವಿ ರಾಜ್ಯಾಧ್ಯಕ್ಷ ಆಗಲು ಸಾಧ್ಯವಿಲ್ಲವಾ? ಈ ಶುದ್ಧೀಕರಣ ಆಗಬೇಕು. ಮೊದಲು ಆ ಬಗ್ಗೆ ಚರ್ಚೆ ಆಗಲಿ. ನಂತರ ಪಕ್ಷಕ್ಕೆ ಸೇರುವ ಬಗ್ಗೆ ನಿರ್ದರಿಸುವೆ ಎಂದರು.
ಕೇಂದ್ರ ಸರ್ಕಾರ ಚುನಾವಣ ಬಾಂಡ್ ಮೂಲಕ ಹಣ ಪಡೆಯಲು ಅನುಮತಿ ನೀಡಿದೆ. ಒತ್ತಾಯ ಮಾಡಿ ಹಣ ಸಂಗ್ರಹಿಸಿರುವುದಾಗಿ ದೂರಾಗಿದೆ. ಇದಕ್ಕೆ ದಾಖಲೆ ಸಂಗ್ರಹಿಸಿ ಪ್ರಕರಣ ನಡೆಸಲಿ ಎಂದರು.
ಪಾಲಿಕೆ ಚುನಾವಣೆ ಗೊಂದಲ ಉಂಟಾಗಿದೆ. ನವೆಂಬರ್ ನಲ್ಲಿ ಚುನಾವಣೆ ಎಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಭಯ ಉಂಟಾಗಿದೆ. ವಿಜಯದಶಮಿ ಉತ್ಸವನ್ನ ಮೊದಲಬಾರಿಗೆ ಪಾಲಿಕೆ ಸದಸ್ಯರಿಲ್ಲದೆ ನಡೆಸಲಾಗುತ್ತಿದೆ. ಸಂಪ್ರದಾಯವನ್ನೆಲ್ಲಾ ಮುರಿಯಲಾಗಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮೋದಿ ಅಧಿಕಾರದಿಂದ ಇಳಿಯದನ್ನ ನೋಡಿ ಕಣ್ಣುಮುಚ್ಚಿಕೊಳ್ಳುವ ಆಸೆ ಇದೆ ಎಂದಿದ್ದಾರೆ. ಅವರಿಗೆ ಬುದ್ದಿಹೇಳುವಷ್ಟು ದೊಡ್ಡವನು ನಾನಲ್ಲ. ಅವರು ನೂರಾರು ವರ್ಷ ಬದುಕಲಿ. ಮೋದಿಯವರು ಸಹ ಚಿರಕಾಲ ಭಾರತವನ್ನ ಆಳಲಿ ಎಂದು ಆಶಿಸುವೆ ಎಂದರು.
ಹಿಂದೂ ಧರ್ಮದ ವಿರುದ್ಧ ಪ್ರೊ ಭಗವಾನ್ ಅವಹೇಳನ ಕಾರಿ ಮಾತುಗಳನ್ನಾಡಿದ್ದಾರೆ. ನಾಯಿ ಬೊಗಳದರೆ ಆನೆಗೆ ತೊಂದರೆ ಆಗಲ್ಲ. ಹಿಂದೂ ಸಮುದಾಯ ಅಗಾಧವಾಗಿ ಬೆಳೆದಿದೆ. ಬೇರೆ ಕೋಮಿನ ಬಗ್ಗೆ ಮಾತನಾಡಲು ಅವರಿಗೆ ಧೈರ್ಯವಿಲ್ಲ ಹಾಗಾಗಿ ಹಿಂದೂ ಸಮುದಾಯದ ಬಗ್ಗೆ ಮಾತನಾಡಿದ್ದಾರೆ ಎಂದರು.