ಗುರುವಾರ, ಸೆಪ್ಟೆಂಬರ್ 12, 2024

ಸೌಹಾರ್ಧವೇ ಹಬ್ಬ



ಸುದ್ದಿಲೈವ್/ಶಿವಮೊಗ್ಗ


ನಗರದಲ್ಲಿ ಗಣಪತಿ ಮತ್ತು ಈದ್ ಹಬ್ಬದ ಮೆರವಣಿಗೆಗಗಳು ಶಾಂತಿ ಹಾಗೂ ಸಂಭ್ರಮದಿಂದ ಆಚರಿಸಲಿ ಎಂದು  ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿಯ ಶ್ರೀಪಾಲ್  ನೇತೃತ್ವದಲ್ಲಿ ಸೌಹಾರ್ಧವೇ ಹಬ್ಬ ಎಂಬ ಕಾರ್ಯಕ್ರಮ ಜರುಗಿದೆ.  


ಮೆಗ್ಗಾನ್ ಆತ್ಪತ್ರೆಯಿಂದ ಸೈನ್ಸ್ ಮೈದಾನದ ವರೆಗೆ ನಡೆದ ಸೌಹಾರ್ಧವೇ ಹಬ್ಬ ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಸಂತರು, ಮುಸ್ಲೀಂ ಮೌಲ್ವಿಗಳು, ಕ್ರಿಶ್ಚಿಯನ್ ಫಾದರ್ ಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


ನಮ್ಮ ಊರನ್ನ ಜಗದಗಲ ಹೆಸರಾಗಿಸಲು ಸನ್ನದ್ಧರಾಗಬೇಕಿದೆ. ನಮ್ಮ ನಗರದ ಆಸ್ಮಿತೆ ಉಳಿಯ ಬೇಕಿದೆ. ಆಸ್ಮಿತೆಯೇ ಬ್ಯಾಂಡ್ ಶಿವಮೊಗ್ಗ. ಇದು ನನ್ನ ಮತ್ತು ನಮ್ಮ ನಗರ ಎಂದಿಗೂ ಶಾಂತಿ ಸೌಹಾರ್ಧತೆಗೆ ಹೆಸರಾಗಿರಬೇಕು. ಇಷ್ಟಾದರೆ ನಮ್ಮ ನಗರಕ್ಕೊಂದು ಬ್ರ್ಯಾಂಡ್ ಇಮೇಜ್ ತಾನಾಗಿಯೇ ಲಭ್ಯವಾಗಲಿದೆ ಎಂಬ ಸಂಕಲ್ಪದೊಂದಿಗೆ ಮೆರವಣಿಗೆ ಸಾಗಿದೆ. 


ಮೆರವಣಿಗೆಯಲ್ಲಿ ಹೆಚ್ ಮತ್ತು ಎಂಬ ಎಂಬ ಆಂಗ್ಲ ಅಕ್ಷರ ಮಾಲೆಯನ್ನ ಹಿಡಿಯಲಾಗಿತ್ತು. ದೇಶದ ತ್ರವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಮಿತಿಯವರು ಭಾಗವಹಿಸಿದ್ದರು. 


ಮೊದಲ ವರ್ಷ ನಮ್ಮ ನಡಿಗೆ ಶಾಂತಿಯ ಕಡೆಗೆ ಎಂಬ ಜಾಥ ಹಮ್ಮಿಕೊಳ್ಳಲಾಗಿತ್ತು. ಆಗ, ಮಹಿಳೆಯರು, ವಿಕಲ ಚೇತನರು, ಮಹಿಳೆಯರು ಭಾಗಿಯಾಗಿದ್ದರು. ಅದರ ಯಶಸ್ಸನ್ನ ಕಳೆದ ವರ್ಷ ನಡೆದಿದ್ದೇ ಸೌಹಾರ್ಧವೇ ಹಬ್ಬ ಎಂದು ಆಚರಿಸಲಾಯಿತು. ಈ ವರ್ಷ ಮತ್ತೆ ಸೌಹಾರ್ಧ ಹಬ್ಬ ಆಚರಿಸಲಾಗಿದೆ. 


ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿಯ, ವಕೀಲ ಶ್ರೀಪಾಲ್,  ಮಂಜುನಾಥ್ ಎನ್,  ಹೆಚ್ ಆರ್ ಬಸವರಾಜಪ್ಪ,  ಕಿರಣ್ ಕುಮಾರ್, ರಫಿ, ಗುರುಮೂರ್ತಿ ಎಂ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ