ಗಣಪತಿ ಸಮಿತಿ ವತಿಯಿಂದ ನೇತ್ರ ತಪಾಸಣಾ ಶಿಬಿರ



ಸುದ್ದಿಲೈವ್/ಶಿರಾಳಕೊಪ್ಪ 

ಗಣೇಶೋತ್ಸವ ಸೇರಿದಂತೆ ಧಾರ್ಮಿಕ ಆಚರಣೆಗಳು ದಿಕ್ಕು ತಪ್ಪುತ್ತಿರುವ ಈ ಸಂದರ್ಭದಲ್ಲಿ ಪಟ್ಟಣದ ಹಿಂದೂ ಮಹಾಸಭಾ ಗಣಪತಿ ಸಮಿತಿ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ರಾಜ್ಯ ನಿಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ. ಬಳೆಗಾರ ಅಭಿಪ್ರಾಯಪಟ್ಟರು.

ಪಟ್ಟಣದ ಸೊರಬ ರಸ್ತೆಯಲ್ಲಿ ಶನಿವಾರ ಲಯನ್ಸ್ ಕ್ಲಬ್,ಶಂಕರ ಆಸ್ಪತ್ರೆ,ಶಂಕರ್ ವಿಷನ್ ಸೆಂಟರ್ ಹಾಗೂ ಹಿಂದೂ ಮಹಾಸಭಾ ಗಣಪತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ಸ್ ಕ್ಲಬ್ ನ ಎಂ ಆರ್ ಗಿರೀಶ್ ಮಾತನಾಡಿ,ಬಡವರ ಸೇವೆಗಾಗಿ ಹುಟ್ಟಿಕೊಂಡಂತಹ ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ಲಕ್ಷಾಂತರ ಜನರ ಕಣ್ಣುಗಳನ್ನು ರಕ್ಷಿಸುವ ಕೆಲಸ ಮಾಡಿದೆ ಎಂದರು.

ಪುರಸಭಾ ಮಾಜಿ ಸದಸ್ಯ ಐಎಂ ಶಿವಾನಂದ ಸ್ವಾಮಿ ಮಾತನಾಡಿ,ಮನುಷ್ಯನ ಆರೋಗ್ಯ ಅವರ ಅಂಗೈಯಲ್ಲಿ  ಇದ್ದು,ಪ್ರತಿ ದಿನ ಕಣ್ಣುಗಳ ಶುಚಿತ್ವದ ಬಗ್ಗೆ ಗಮನಹರಿಸಿದರೆ ಕಣ್ಣುಗಳನ್ನು ದೀರ್ಘಕಾಲ ಸಂರಕ್ಷಿಸಬಹುದು ಎಂದು ಸಲಹೆ ನೀಡಿದರು.

ಈ ಶಿಬಿರದಲ್ಲಿ 120ಕ್ಕೂ ಹೆಚ್ಚು ಜನ ಉಚಿತ ನೇತ್ರ ತಪಾಸಣೆ ಮಾಡಿಸಿದ್ದು, 24 ಜನರನ್ನು ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದೆ.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲ,ಮುಖ್ಯ ಅಧಿಕಾರಿ ಹೇಮಂತ್ ಡೊಳ್ಳೆ, ಡಾ|| ಖೇಮು ಜಾದವ್ ,ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಇಸ್ಲೂರು ಮಾತನಾಡಿದರು .

ಪುರಸಭೆ ಮಾಜಿ ಅಧ್ಯಕ್ಷ ಹೆಚ್ಎಂ ಚಂದ್ರಶೇಖರ್,ರಟ್ಟಿಹಳ್ಳಿ ಲೋಕೇಶ್, ಮಾಜಿ ಸದಸ್ಯ ಇಂದೂಧರ್ , ಬಿ. ಎಲ್. ಮಂಜು ನಾಯ್ಕ,ದಯಾನಂದ ರಾಯ್ಕರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಗಡಿ ಆದಿತ್ಯ, ಹಿಂದೂ ಮಹಾಸಭಾ ಸಮಿತಿ ಅಧ್ಯಕ್ಷ ಶ್ರೀಕಾಂತ್‌, ಖಜಾಂಚಿ ಮಾಲತೇಶ್, ಶಾಂತಮ್ಮ, ಶಂಕರ್ ವಿಷನ್ ಸೆಂಟರ್ ನ  ಬಸವನಗೌಡ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close