ಸುದ್ದಿಲೈವ್/ಶಿವಮೊಗ್ಗ
ಕಾಂಗ್ರೆಸ್ ಸರ್ಕಾರವನ್ನ ಬಿಜೆಪಿ ಶಾಸಕ ಚೆನ್ನಬಸಪ್ಪ ಹಾಡಿಹೊಗಳಿದ್ದಾರೆ. ತಾವು ನೀಡಿದ ಮನವಿಗೆ ಸಿಎಂ ಸಿದ್ದರಾಮಯ್ಯನವರು ಸ್ಪಂಧಿಸಿದ್ದಾಗಿ ಸುದ್ದಿಗೋಷ್ಠಿಯಲ್ಲಿ ಹಾಡಿಹೊಗಳಿದ್ದಾರೆ.
ನಾನು ಮತ್ತು ಎಂಎಲ್‌ಸಿ ಡಿ.ಎಸ್ ಅರುಣ್ ಸಿಎಂ ಅವರನ್ನ ಭೇಟಿ ಮಾಡಿ, ದಸರಾಕ್ಕೆ, ಮೃತ ಚಂದ್ರಶೇಖರ್ ಅವರ ಕುಟುಂಬಕ್ಕೆ ಪರಿಹಾರ, ಅವರ ಮಗನಿಗೆ ಸರ್ಕಾರಿ ಉದ್ಯೋಗದ ಮನವಿ ಮಾಡಿಕೊಂಡಿದ್ದು, ಮೂರು ಬೇಡಿಕೆಗೆ ಸ್ಪಂಧಿಸಿರುವುದಾಗಿ ಹೇಳಿದರು.
ಪಾಲಿಕೆ ಅಯವ್ಯಯದ ಜೊತೆ ಸರ್ಕಾರದ ಅನುದಾನವೂ ಬಿಡುಗಡೆಯಾಗುತ್ತಿದೆ. ಆಯುಕ್ತರು 14 ಸಮಿತಿ ರಚಿಸಿದ್ದಾರೆ. ಮತ್ತೊಂದಿಷ್ಟು ಶಕ್ತಿ ತುಂಬಲು ನಾನು ನತ್ತು ಅರುಣ್ ಸಿಎಂ ಭೇಟಿ ಮಾಡಿದ್ದೇವೆ. 2 ಕೋಟಿ ಬೇಡಿಕೆ ಇಟ್ಟಿದ್ದೇವೆ ಎಂದರು.
ಪಾಲಿಕೆ ಬಜೆಟ್ ನ 1.5 ಕೋಟಿ ಬಳಕೆಗೆ ಅವಕಾಶವಿದೆ. ಮತ್ತೊಂದಿಷ್ಟು ಹಣ ಬಿಡುಗಡೆಗೆ ಬೇಡಿಕೆ ಇಟ್ಟಿದ್ದೇವೆ. ಪೌರಕಾರ್ಮಿಕರ ದಸರಾ, ಪತ್ರಕರ್ತರ ದಸರಾ ಹಾಗೂ ಜ್ಞಾನದಸರಾ ಹೊಸದಾಗಿ ಆರಂಭಿಸಲಾಗುತ್ತಿದೆ ಎಂದರು.
ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಮೃತರ ಕುಟುಂಬಕ್ಕೆ ಪರಿಹಾರ ಸಿಕ್ಕಿರಲಿಲ್ಲ. ಚಂದ್ರಶೇಖರ್ ಅವರ ಕುಟುಂಬರನ್ನ ಬೆಂಗಳೂರಿಗೆ ಕರೆಯಿಸಿ ಚೆಕ್ ವಿತರಿಸಲಾಗುತ್ತಿದೆ ಎಂದರು.
ಪರಿಹಾರ ನೀಡುವುದು ತಡವಾಗಿದೆ. ಆದರೂ ಕಾರ್ಯರೂಪಕ್ಕೆ ಬಂದಿದೆ 25ಲಕ್ಷ ರೂ. ಹಣ ಬಿಡುಗಡೆಯಾಗುತ್ತಿದೆ. ಜು.19 ರಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಕುರಿತು ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಸೆಷನ್‌ನಲ್ಲಿ ಜು.17 ರಂದು ಮಾತನಾಡಿದ್ರು. ಎರಡು ಮೂರು ದಿನಗಳಲ್ಲಿ ಮೃತರ ಪತ್ನಿಗೆ ಪರಿಹಾರ ನೀಡಲಾಗುತ್ತಿದೆ.
ಕುಟುಂಬದ ಮಗನಿಗೆ ಸರ್ಕಾರಿ ಉದ್ಯೋಗ ಕೊಡಲು ಆಗ್ರಹಿಸಲಾಗಿದೆ. ಸಿಎಂ ಸಹ ಸ್ಪಂಧಿಸಿದ್ದಾರೆ. ನಾನೆ ಕರೆದುಕೊಂಡು ಹೋಗುತ್ತಿದ್ದೇನೆ. ಇಂದು ಚೆಕ್ ಗೆ ಸಹಿ ಆಗುವ ನಿರೀಕ್ಷೆ ಇದೆ ಎಂದರು.
ದಸರಾಕ್ಕೆ ಹೆಣ್ಣಾನೆ ಬರೊಲ್ಲ
ಗಂಡಾನೆಗಳು ದಸರಾಗೆ ಬರಲಿದೆ. ಇಂಟರ್‌ನಲ್ ಏನು ಮಾಡಬೇಕು ಚರ್ಚಿಸಲಾಗುತ್ತಿದೆ. ಕಳೆದ ಬಾರಿ ಕುಂತಿ ದಸರಾ ಮರಿಯೊಂದಕ್ಕೆ ಜನ್ಮ ನೀಡಿತ್ತು. ಹೆಣ್ಣು ಆನೆಗಳು ಯಾವುದು ಮೆರವಣಿಗೆಯಲ್ಲಿ ಭಾಗವಹಿಸುವ ಸ್ಥಿತಿಯಲ್ಲಿಲ್ಲ ಆದುದರಿಂದ ಗಂಡಾನೆ ಭಾಗವಹಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು.