ಹಬ್ಬ ಮುಗುಸಿಕೊಂಡು ಹೋಗುತ್ತಿದ್ದ ಸೂರಜ್ ಮೇಲೆ ಕಡ್ಡಿ ಮಧು ಹಾಗೂ ಆತನ ಗ್ಯಾಂಗ್‌ನಿಂದ ಅಟ್ಯಾಕ್



ಸುದ್ದಿಲೈವ್/ಶಿವಮೊಗ್ಗ


ಗಣಪತಿ ಹಬ್ಬದ ರೌಡಿಶೀಟರ್ ಕಡ್ಡಿಮಧು ಮತ್ತು ಸೂರಜ್ ನಡುವೆ ಗಲಾಟೆಯಾಗಿದ್ದು, ಕಡ್ಡಿಮಧು ಮತ್ತು 13 ಜನರ ವಿರುದ್ಧ ದೂರು ದಾಖಲಾದರೆ, ಮತ್ತೊಂದು ಪ್ರಕರಣದಲ್ಲಿ ಸೂರಜ್, ದರ್ಶನ್ ಮತ್ತು 2-3 ಜನರ ವಿರುದ್ಧ ವಿದ್ಯಾರ್ಥಿಯೊಬ್ಬ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  


ಗಣಪತಿ ಹಬ್ಬ ಮುಗಿಸಿಕೊಂಡು ಹೊಗುತ್ತಿದ್ದ ಇಬ್ಬರು ಯುವಕರ ಮೇಲೆ ಕಡ್ಡಿಮಧು ಸೇರಿದಂತೆ 14 ಜನರ ಗುಂಪೊಂದು ಮುಗಿಬಿದ್ದಿದ್ದು, ಇಬ್ಬರಲ್ಲಿ ಒಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಆತನನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

೨೦ ದಿನದ ಹಿಂದೆ ಕಡ್ಡಿ ಮಧು ಹಾಗು ಕಪಾಲಿ ಸೀನ ಸೂರಜ್ ಯಾನೆ ಸೂರನ ಸ್ನೇಹಿತ ಚೇತನ್ ಎಂಬುವನ ಮೊಬೈಲ್ ಕಸಿದುಕೊಂಡು ಹೋಗಿದ್ದರು. ಮೊಬೈಲ್ ಕಸಿದುಕೊಂಡು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಸೂರಜ್ ಕಪಾಲಿ ಸೀನ ಬಳಿ ತೆರಳಿ ಮೊಬೈಲ್ ಇಸ್ಕೊಂಡು ಬಂದಿದ್ದನು. ಈ ವಿಚಾರದಲ್ಲಿ ಕಡ್ಡಿಮಧು ಮತ್ತು ಆತನ ಸಹಚರರು ಸೂರಜ್ ಮೇಲೆ ಅಟ್ಯಾಕ್ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ರಾಜಿ ಮಾಡಲಾಗಿತ್ತು. 


ಇದಾದ ಬಳಿಕ ಗಣಪತಿ ಹಬ್ಬ ಮುಗಿಸಿಕೊಂಡು ರಾತ್ರಿ ಕಾಮಾಕ್ಷಿ ಬೀದಿಯಲ್ಲಿರುವ ಮಹೇಶ್ವರಮ್ಮ ದೇವಸ್ಥಾನದ ಬಳಿ ಊಟ ಮುಗಿಸಿಕೊಂಡು ಸೂರಜ್ ಮತ್ತು ಆತನ ಸ್ನೇಹಿತ ದರ್ಶನ್ ಜ್ಯೂವೆಲ್ ರ‍್ಯಾಕ್ ಹೋಟೆಲ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಕಡ್ಡಿ ಮಧು ಮತ್ತು ಆತನ ಸಂಗಡಿಗರಾದ ಕಪಾಲಿ, ಸೀನಾ, ಎಪ್ರಿಲಾ ಸೀನಾ, ಚಿಂಟು, ಮಾರ್ವಾಡಿ, ಮೋಟು, ಬಾಬು, ಗುಳ್ಳೆ ಸೀನಾ, ಸುಕೇಶ್, ಮಣಿ, ಕತ್ತೆ ಕಾರ್ತಿಕಾ, ಬಂಕ್ ಲೋಕಿ, ಯನೂಶ್ ಬಸವನಗುಡಿ ಇವರುಗಳು ಇಂಡಿಕಾ ಮತ್ತು ಗ್ಲಾಂಜಾ ಕಾರಿನಲ್ಲಿ ಫಾಲೋ ಮಾಡಿದ್ದಾರೆ. 


ಫಾಲೋ ಮಾಡಿಕೊಂಡು ಬಂದು ಡಿಕ್ಕಿಹೊಡೆಸಿ ಅಪಘಾತ ಪಡಿಸಲು ಯತ್ನಿಸಿದ್ದಾರೆ. ಇದನ್ನ ಅರಿತ ಸೂರಜ್ ಮತ್ತು ದರ್ಶನ್ ಬೈಕ್ ನಲ್ಲಿ ವೇಗವಾಗಿ ಚಲಿಸಿ ಶರಾವತಿ ನಗರದಲ್ಲಿರುವ ಚಿಕ್ಕಪ್ಪನವರ ಮನೆಗೆ ಹೋಗಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಚಿಕ್ಕಪ್ಪನವರ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಆದರೆ ದರ್ಶನ್ ಪಕ್ಕದ ಓಣಿಯಲ್ಲಿ ಪರಾರಿಯಾಗಿದ್ದಾನೆ. ಆದರೆ ಸೂರಜ್ ಮೇಲೆ ಮಾರಕಾಸ್ತçಗಳಿಂದ ಕಡ್ಡಿಮಧು ಕಡೆ ಹುಡುಗರು ಮಾರಕಾಸ್ತ್ರ ಗಳಿಂದ ಹಲ್ಲೆ ಮಾಡಿದ್ದಾರೆ. 


ಈಗ ಸೂರಜ್ ಅವರನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಮಾಕ್ಷಿ ಬೀದಿಯ ದೇವಸ್ಥಾನದಿಂದ ಸೂರಜ್ ಮತ್ತು ದರ್ಶನ್ ಮನೆಕಡೆ ಹೊರಡುವ ಮುಂಚೆ ಸಣ್ಣ ಕಿರಿಕ್ ಆಗಿದೆ. ಚಂದನ್ ಎಂಬ 20 ವರ್ಷದ ವಿದ್ಯಾರ್ಥಿಗೆ ಮತ್ತು ಆತನ ಜೊತೆಗಿದ್ದ ದರ್ಶನ್ ಯಾನೆ ದಾಸನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು