ಯುವತಿಯ ಜಿಎಸ್‌ಟಿ ಬಳಸಿಕೊಂಡು ಕೋಟ್ಯಾಂತರ ರೂ. ಅವ್ಯವಹಾರ



 ಸುದ್ದಿಲೈವ್/ಶಿವಮೊಗ್ಗ


ಪರಿಚಯದ ಯುವತಿಯ ಜಿಎಸ್‌ಟಿ ಮಾಡಿಸಿಕೊಡುವುದಾಗಿ ನಂಬಿಸಿ ಆಕೆಯ ಜಿಎಸ್‌ಟಿ ನಂಬರ್  ಬಳಸಿಕೊಂಡು ಕೋಟ್ಯಾಂತರ ರೂ.ವ್ಯವಹಾರ ನಡೆಸಿ ವಂಚಿಸಿರುವÀ ವ್ಯಕ್ತಿಯ ವಿರುದ್ಧ ದೊಡ್ಡಪೇಟೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಭಿಷೇಕ್ ಎಂಬ ವ್ಯಕ್ತಿಯು ಗೋಪಾಳದ ಯುವತಿಗೆ ಆತನ ಅಣ್ಣನ ಮೂಲಕ ಇನ್ಕಮ್ ಟ್ಯಾಕ್ಸ್ ರಿಟರ್ನ್ ಮಾಡಿಸಿಕೊಡುತ್ತೇನೆಂದು ಜಿಎಸ್‌ಟಿ ಮಾಡಿಸಿಕೊಡುತ್ತಾನೆ ಎಂದು ಪರಿಚಯವಾಗಿರುತ್ತಾನೆ. ಯುವತಿಗೆ ಜಿಎಸ್‌ಟಿ ನಂಬರ್ ಪಡೆದ ನಂತರ ಒಟಿಪಿ ಪಡೆದು ಆಕೆಯ ಜಿಎಸ್‌ಟಿ ನಂಬರ್ ನಲ್ಲಿ ೧,೧೫,೪೦,೧೮೯ ರೂ.ವನ್ನ ಗಮನಕ್ಕೆ ಬಾರದೆ ವ್ಯವಹಾರ ನಡೆಸಿರುತ್ತಾನೆ.

ಈ ವ್ಯವಹಾರಕ್ಕೆ ಯುವತಿಗೆ ಟ್ಯಾಕ್ಸ್ ಕಟ್ಟಲು ತೆರಿಗೆ ಇಲಾಖೆ ಸೂಚನೆ ಬಂದಿದೆ. ಅಭಿಷೇಕ್ ಬಳಸುತ್ತಿದ್ದ ಇಮೇಲ್ ಮತ್ತು ಮೊಬೈಲ್‌ನಿಂದ ಈ ವ್ಯವಹಾರ ನಡೆದಿರುವುದು ಯುವತಿಗೆ ತಿಳಿದು ಬಂದಿದೆ. ಯುವತಿ ಜಿಎಸ್‌ಟಿ ವ್ಯವಹಾರಕ್ಕೆ ಹೊಸ ಪಾಸ್ ವರ್ಡ್ ನೀಡುವಂತೆ ಅರ್ಜಿ ಬರೆದು ತನ್ನ ಅಕೌಂಟ್ ನಂಬರ್ ನಿಂದ ೯,೫೬,೭೮೯ ರೂ. ಮಾತ್ರ ವ್ಯವಹಾರ ನಡೆಸಿರುವುದಾಗಿ ತಿಳಿದುಬಂದಿರುತ್ತದೆ.

ಉಳಿದ ಹಣವನ್ನ ಅಭಿಷೇಕ್ ನಡೆಸಿದ್ದು ಇದಕ್ಕೆ ಸಂಬAಧಿಸಿದAತೆ ೧,೪೨,೭೬೪ ರೂ. ಹಣವನ್ನ  ಕಟ್ಟುವಂತೆ ತಿಳಿದುಬಂದಿದೆ. ಇದನ್ನ ಕಾನೂನು ಬದ್ಧವಾಗಿ ಕಟ್ಟಿರುವುದಾಗಿ ಅದರ ಜೊತೆ ಯುನಿಕ್ ಸಲ್ಯೂಷನ್ ಮೂಲಕ ಜಿಎಸ್‌ಟಿ ಟ್ಯಾಕ್ಸ್ ಇನ್ವಾಯ್ಸ್ ನೀಡಿರುವುದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಮಾನಸಿಕ ಹಿಂಸೆ ನೀಡಿದ ಮತ್ತು ತೆರಿಗೆ ಇಲಾಖೆಗೆ ವಂಚಿಸಿದ ಅಭಿಷೇಕ್ ಮತ್ತು ಆತನ ತಂಗಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಯುವತಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು