ಸುದ್ದಿಲೈವ್/ಶಿವಮೊಗ್ಗ
ನಾನು ಕ್ಷಮೆ ಕೇಳಲ್ಲ ಯಡಿಯೂರಪ್ಪನವರ ಹೆಸರು ಕೆಡೆಸುತ್ತಿರುವುದೇ ಅವರ ಮಕ್ಕಳಿಂದ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ, ಉಪಾಧ್ಯಕ್ಷ ಹರತಾಳು ಹಾಲಪ್ಪ, ಸಂಸದ ರಾಘವೇಂದ್ರ ಹಾಗೂ ಮಾಜಿ ಎಂಎಲ್‌ಸಿ ರಯದ್ರೇಗೌಡರಿಗೆ ನೇರವಾಗಿ ತಾಕೀತು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಕೆಐಡಿಬಿ ಭೂಮಿ, ಪತ್ರಕರ್ತರ ಸೈಟು, ಟೋಲು ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ರಾಘವೇಂದ್ರ ಅವರ ವಿರುದ್ಧ ಆರೋಪ ಮಾಡಿದ್ದೆ. ಅದನ್ನ ಗಮನಿಸದೆ ಮಾಜಿ ಶಾಸಕರಾದ ಹಾಲಪ್ಪ, ರುದ್ರೇಗೌಡರು ಸುದ್ದಿಗೋಷ್ಠಿ ನಡೆಸಿ ನಾನೇ ಯಡಿಯೂರಪ್ಪನವರ ಜೊತೆ ಇದ್ದುಕೊಂಡು ಈಗ ಹೊರಬಂದು ಆರೋಪಮಾಡಿದ್ದಾರೆ. ನಾನು ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ನನ್ನ ಪ್ರಶ್ನೆನೆ ಅರ್ಥೈಸಿಕೊಳ್ಳದೆ ಕ್ಷಮೆ ಕೇಳಬೇಕು ಎಂದು ಮಾಜಿ ಶಾಸಕರ ಹೇಳಿಕೆ ದಿಕ್ಕುತಪ್ಪಿಸುವ ಯತ್ನವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಯಾವತ್ತೂ ಯಡಿಯೂರಪ್ಪನವರ ಪರವಾಗಿ ನಿಲುವು ತಾಳದ ಹರತಾಳು ಹಾಲಪ್ಪನವರು ನಾನು ಕ್ಷಮೆ ಕೇಳಬೇಕು ಎಂದಿದ್ದಾರೆ. ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದಾಗ, ನಾನು ಮತ್ತು ರೇಣುಕಾಚಾರ್ಯ ಬಿಟ್ಟರೆ ಯಾವ ನಾಯಕರು ಮಾತನಾಡಲಿಲ್ಲ ಎಂದರು.
ರಾಘವೇಂದ್ರ ಮತ್ತು ವಿಜೇಂದ್ರ ಅವರ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಸಮಂಜಸವಾದ ಉತ್ತರ ನೀಡಲಿಲ್ಲ. ಹಾಲಪ್ಪನವರು ಬಂಗಾರಪ್ಪನವರನ್ನಬಿಟ್ಟು ಬಂದು ಬಂಗಾರಪ್ಪನವರ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಸರಿ ಒಪ್ಪಿಕೊಳ್ಳುವೆ ಬಂಗಾರಪ್ಪನ ಬಗ್ಗೆ ಅವರು ಮಾತನಾಡಿಲ್ಲ. ಆದರೆ ಆಗ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪನವರ ವಿರುದ್ಧ ಮಾತನಾಡಿಲ್ವಾ? ಹಾಗೆ ನಾನು ಸಹ ರಾಘವೇಂದ್ರ ಮತ್ತು ವಿಜೇಂದ್ರರವರ ಬಗ್ಗೆ ಮಾತನಾಡಿದ್ದೀನಿ.
ಯಡಿಯೂರಪ್ಪನವರು ರಾಜವಂಶಸ್ಥರ ಕುಟುಂಬಕ್ಕೆ ಸಮಾನ. 35.34 ಎಕರೆ ಜನೀನಿನಲ್ಲಿ ನಾಲ್ಕು ಎಕರೆ ಮಾತ್ರ ಕೆಐಡಿಬಿ ಜಾಗ ವಿಜೇಂದ್ರರಿಗೆ ರಿಜಿಸ್ಟ್ರರ್ ಆಗಿದೆ. ಈ ನಾಲ್ಕು ಎಕರೆ ಯಾರದ್ದು? ಗದಗಿನ ಸಂಗಮೇಶ್ ಪರಪ್ಪ ಗದಗ ಹೆಸರಿನಲ್ಲಿದೆ. ಈ ಸಂಗಮೇಶ್ ಯಾರು? ಸಂಸದ ರಾಘವೇಂದ್ರ ಅವರ ಶ್ರೀಮತಿಯ ಸಹೋದರ ಇವರು. ಅಷ್ಟೇ ಆಸ್ತಿ ಕೆಐಡಿಬಿಗೆ ಯಾಕೆ ಖರೀದಿ ಮಾಡುತ್ತೆ? ನಂತರ ಕೆಐಡಿಬಿಯಿಂದ ಖರೀದಿ ಮಾಡಿದ್ದ ತಂತ್ರಗಾರಿಕೆ ಏನು ಎಂದು ಕೇಳಿದ್ದೆ.
ನಾನು ಭದ್ರಾವತಿಯ ಜಂಕ್ಷನ್ ನ 70 ಎಕರೆ ಜಾಗ ಯಾರದ್ದು? ಶಿಕಾರಿಪುರದಲ್ಲಿ ಶಿವಮೊಗ್ಗದಲ್ಲಿ ಖರೀದಿ ಮಾಡಿದ ಖಾಸಗಿ ಜಾಗದ ಬಗ್ಗೆ ನಾನು ಪ್ರಶ್ನಿಸಿಲ್ಲ. ಹಾಗಾಗಿ ಯಾಕೆ ಕ್ಷಮೆ ಕೇಳಬೇಕು? ಬಿಎಸ್ ವೈ ಜೊತೆ ಇದ್ದಾಗ ನಾನು ಫೋರ್ಜರಿ ಸಹಿ ಮಾಡಿಲ್ಲ, ಸಿಎಂ ಸ್ಥಾನದಿಂದ ಇಳಿಸಿಲ್ಲ. ವರ್ಗಾವಣೆ ದಂಧೆ ಮಾಡಿಲ್ಲ ಬಿಎಸ್ ವೈಗೆ ಕೆಟ್ಟದ್ದು ಬಯಸಿಲ್ಲ. ಹಾಗಾಗಿ ನಾನೇಕೆ ಕ್ಷಮೆ ಕೇಳಬೇಕು ಕೇಳಬೇಕು ಎಂದು ಪ್ರಶ್ನಿಸಿದರು.
ರಾಜವಂಶಸ್ಥರ ಋಣ ತಿಂದಿಲ್ಲ. ನನ್ನನ್ನ ಕ್ಷಮೆ ಕೇಳಿ ಎಂದಾಗ ಬಿಜೆಪಿ ನಾಯಕರು ಯೋಚಿಸಬೇಕಿತ್ತು. ನಾನು ಆಯನೂರನ್ನ ಹೆಂಗೆ ಬೆಳೆಸಿದ್ರು ಎಂಬುದನ್ನ ನನಗೆ ಗೊತ್ತು. ಜೈಲುವಾಸ, ಲಾಠಿ ಏಟು ತಿಂದು ಬಂದು ಸಂಸದನಾಗಿದ್ದೆ. ಬಳ್ಳಾರಿ, ಗುಲ್ಬರ್ಗ, ಬೆಂಗಳೂರು ಕೇಂದ್ರ ಕಾರಾಗ್ರಹದಲ್ಲಿದ್ದವನು ನಾನು. ಪಕ್ಷ ಕಟ್ಟುವ ಯತ್ನದಲ್ಲಿ ನನ್ನಶ್ರಮವಿತ್ತು. ಅದಕ್ಕೆ ಬಿಎಸ್ ವೈ ಸಹಕಾರವಿದೆ. ಗ್ರಾಪಂ ಸದಸ್ಯನಿಂದ ಏಕಾಏಕಿ ಲೋಕಸಭೆ ಸದಸ್ಯನಾಗಿಲ್ಲ ಎಂದು ತಿಳಿಸಿದರು.
ನಾನು ಸಂಸದನಾದಾಗ ನನ್ನ ವಿರುದ್ಧ ರುದ್ರೇಗೌಡರನ್ನ ಹೇಗೆ ಎದುರು ತಂದರು? ನಂತರ ರುದ್ರೇಗೌಡರನ್ನ ಸರಿಸಿ ಮಗನನ್ನ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಸಯಿತು ಎಂಬುದನ್ನ ಮುಂದಿನ ದಿನಗಳಲ್ಲಿ ಹೇಳುವೆ. ಸಿದ್ದರಾಮಯ್ಯನ ಹೆಂಡತಿಗೆ ಕೊಟ್ಟಿದ್ದು ಅಪರಾಧವಾಗುತ್ತೆ ಅನ್ನೋದಾದ್ರೆ, ಇಲ್ಲಿ ಶ್ರೀಮತಿಯ ಸಹೋದರನ ಹೆಸರಿನಿಂದಕೈಡಿಬಿಗೆ ಕೊಡ್ಸಿ ನಂತರ ಖರೀದಿ ಮಾಡಿದ್ದು ತಪ್ಪಾಗಲ್ವಾ? ಎಂದು ಪ್ರಶ್ನಿಸಿದರು.
ಪತ್ರಕರ್ತರ ಸೈಟನ್ನ ತಮ್ಮವರಿಗೆ ಬರೆಯಿಸಿ ನಂತರ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ್ರಲ್ಲ. ಟೋಲ್ ಬಿಜೆಪಿಯ ಕಾಲದಲ್ಲಿ ನಡೆದಿದೆ ಎಂದರೆ ಆಣೆ ಮಾಡೋಣ ಬನ್ನಿ ಅಂತ ಕರೆಯುತ್ತಾರೆ. ನನಗೆ ಆಣೆ ಬಗ್ಗೆ ನಂಬಿಕೆ ಇಲ್ಲ. ಆಣೆ ಬರಲು ಸಿದ್ದ ಆದರೆ ಸಂಸದರು ವರ್ಗಾವಣೆ ಮಾಡಿಲ್ಲ, ಬೇನಾಮಿ ಆಸ್ತಿ ಮಾಡಿಲ್ಲ, ಅಂತ ಆಣೆ ಮಾಡಲು ಸಿದ್ದನಾ ಎಂದು ಸವಾಲು ಎಸೆದರು.
ಬಿಎಸ್‌ವೈ ಬಗ್ಗೆ ಗೌರವವಿದೆ, ರಾಘವೇಂದ್ರ ವಿಜೇಂದ್ರರ ಬಗ್ಗೆ ಸದಾಭಿಪ್ರಾಯವಿದೆ. ನಾನು ಬಿಎಸ್ ವೈ ಕ್ಷಮೆ ಕೇಳಲ್ಲ. ಯಡಿಯೂರಪ್ಪನವರ ಹೆಸರು ಕೆಡೆಸುತ್ತಿರುವುದೇ ಅವರ ಮಕ್ಕಳು, ನನಿಗೆ ಎಂಪಿ ಸ್ಥಾನ ತಪ್ಪಿಸಿರುವ ಬಗ್ಗೆ ರುದ್ರೇಗೌಡರಿಗೆ ಗೊತ್ತು ಎಂದು ವಿವರಿಸಿದರು.