ಒಳಮೀಸಲಾತಿ ಜಾರಿಗೆ ದಸಂಸನಿಂದ ಬೃಹತ್ ತಮಟೆ ಚಳುವಳಿ ಜಾರಿಗೆ ದಸಂಸ ಬೃಹತ್ ತಮಟೆ ಚಳುವಳಿ

 


ಸುದ್ದಿಲೈವ್/ಶಿವಮೊಗ್ಗ


ಒಳಮೀಸಲಾತಿ ಜಾರಿಯಾಗುವಂತೆ ಒತ್ತಾಯಿಸಿ ಇಂದು ರಾಜ್ಯಾದ್ಯಂತ ಎಲ್ಲಾ‌ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲ ಬೃಹತ್ ತಮಟೆ ಚಳುವಳಿ ನಡೆಸಿದೆ. 


ಇಂದು ಬಿ.ಹೆಚ್ ರಸ್ತೆಯಲ್ಲಿರುವ ಶಿವಪ್ಪನಾಯಕನ ಪ್ರತಿಮೆ ಎದುರು ಮೆರವಣಿಗೆ ಹೊರಟ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿ ಡಿಸಿಗೆ ಮನವಿ ಸಲ್ಲಿಸಿದೆ. 


ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಆದೇಶಿಸಿದೆ. ಆದೇಶ ಹೊರಡಿಸಿ ಎರಡು ತಿಂಗಳಾದರೂ ಕಾನೂನು ಜಾರಿಯಾಗಿಲ್ಲ ಎಂದು ದೂರಿದ್ದಾರೆ. 


ಪ.ಜಾಯ ಒಳಮೀಸಲಾತಿ ಜಾರಿಗೆ ಸಂವಿಧಾನ ಬದ್ದವಾಗಿದೆ. ಸುಪ್ರೀಂ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಿದೆ. ಪಂಚಮರು, ಶೂದ್ರರು ವೈಶ್ಯರು, ಕ್ಷತ್ರಿಯರು ಹಾಗೂ ಬ್ರಾಹ್ಮಣರಿದ್ದಾರೆ. ಆದರೆ ಪಂಚಮರ ಉದ್ದಾರಕ್ಕಾಗಿ ಡಾ.ಬಾಬಸಾಹೇಬ ಅಂಬೇಡ್ಕರ್ ಅವರು ಮೀಸಲಾತಿ ನೀಡಿದ್ದಾರೆ.  


ಈ ಮೀಸಲಾತಿಗೆ ಒಳ ಮೀಸಲಾತಿ ನೀಡಲು ಸುಪ್ರೀಕೋರ್ಟ್ ಆದೇಶ ಬಂದು ಎರಡೂ ತಿಂಗಳು ಕಳೆದರೂ ಜಾರಿಗೆ ತರಲು ಮೀನಾಮೇಷ ಎಣೆಸಿದೆ. ನಿದ್ರಾವಸ್ಥೆಯಲ್ಲಿರುವ ಸರ್ಕಾರಕ್ಕೆ ಎಚ್ಚರಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಬೃಹತ್ ತಮಟೆ ಚಳುವಳಿ ನಡೆಸಲಾಯಿತು.


ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಮೂರ್ತಿ, ಖಜಾಂಚಿ ಕಾಟಕಿ, ಎಂ ಏಳುಕೋಟಿ, ನಾಗರಾಜ್ ಬೊಮ್ಮನ್ ಕಟ್ಟೆ ಕೃಷ್ಣ, ರಮೇಶ್ ಚಿಕ್ಕಮರಡಿ, ಹಸವಿ ಬಸವರಾಜ್, ಹರಿಗೆ ರವಿ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close