Suddilive/ಶಿವಮೊಗ್ಗ
ಮಲೆನಾಡು ಶಿವಮೊಗ್ಗದಲ್ಲಿ ಮಾನವ- ವನ್ಯಜೀವಿ ಸಂಘರ್ಷ ಮುಂದುವರಿದಿದೆ. ಕಾಡಾನೆಗಳ ಹಾವಳಿಯಿಂದಾಗಿ ರೈತರ ಬೆಳೆ ಧ್ವಂಸವಾಗಿದೆ.
ತಡರಾತ್ರಿ ಎರಡು ಕಾಡಾನೆಗಳ ದಾಳಿಯಿಟ್ಟಿದ್ದು, ರೈತರ ಬೆಳೆ ಸಂಪೂರ್ಣ ನಾಶಗೊಂಡಿದೆ. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ.
ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ ಎಂಬುವರ ತೋಟ- ಹೊಲಕ್ಕೆ ಆನೆಗಳು ನಿನ್ನೆ ದಾಳಿಯಿಟ್ಟಿವೆ. ಅಡಿಕೆ ಹಾಗೂ ತೆಂಗಿನ ಮರಗಳನ್ನು ಕಾಡಾನೆಗಳು ಬುಡಮೇಲು ಮಾಡಿವೆ.
ಜೋಳ ಹಾಗೂ ಕಬ್ಬನ್ನು ನಾಶ ಮಾಡಿವೆ.ಅರಣ್ಯ ಇಲಾಖೆಯ ವಿರುದ್ಧ ರೈತರ ಆಕ್ರೋಶ ಮುಂದುವರೆದಿದೆ. ಆನೆಗಳ ಬಗ್ಗೆ ಮಾಹಿತಿ ನೀಡಿದ್ರೂ ಇಲಾಖೆಗಳು ಕ್ರಮಕೈಗೊಳ್ಳದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕೇವಲ ರಸ್ತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಾಡುತ್ತಾರೆ. ದೂರು ನೀಡಿದರೆ ಸ್ಥಳಕ್ಕೆ ಬರೊಲ್ಲ. ಆನೆ ದಾಳಿಗೆ ಪರಿಹಾರ ನೀಡುವಂತೆ ರೈತರ ಒತ್ತಾಯಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 9 ಕಿ.ಮೀ ದೂರದಲ್ಲಿರುವ ಪುರದಾಳು ಗ್ರಾಮದಲ್ಲಿ ಆನೆ ದಾಳಿ ಹೊಸದಲ್ಲ. ಆದರೆ ಕ್ರಮ ಕೈಗೊಳ್ಳಿ ಎಂದಿದ್ದಾರೆ.