ಹಲವು ವರ್ಷಗಳಿಂದ ನಾಲ್ವರು ಮಿಸ್ಸಿಂಗ್



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಾಣೆಯಾದವರ ಕುರಿತು ಪ್ರಕರಣ ದಾಖಲಾಗಿರುವ ಕೆಳಕಂಡವರ ವಿವರಗಳನ್ನು ಮರುಪ್ರಕಟಣೆಗಾಗಿ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾ. ಮುದ್ದಿನಕೊಪ್ಪ ವಾಸಿ ಪವಿತ್ರ ಎಂಬುವವರ ಪತಿ ಉಮೇಶ ಎಂ.ಡಿ ಬಿನ್ ದೇವರಾಜ್ ಎಂಬ 45 ವರ್ಷದ ವ್ಯಕ್ತಿ ಜೂನ್ 2016 ರಲ್ಲಿ ಮನೆಬಿಟ್ಟು ಹೋಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.2 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಬಿಳಿ ಬಣ್ಣ ತಲೆಯಲ್ಲಿ ಕಪ್ಪು ಕೂದಲಿರುತ್ತದೆ. ಕನ್ನಡ,ತೆಲುಗು ಮಾತನಾಡುತ್ತಾರೆ. 

ಶಿವಮೊಗ್ಗ ಹೊಸಮನೆ 6ನೇ ಕ್ರಾಸ್ ವಾಸಿ ಶ್ರೀಮತಿ ಮಾರಕ ಎಂಬುವವರ ಪತಿ ಮೂರ್ತಿ ಬಿನ್ ದುರ್ಗಾಭೋವಿ ಎಂಬ 42 ವರ್ಷದ ವ್ಯಕ್ತಿ 2016 ಇಸವಿಯಲ್ಲಿ ಮನೆಬಿಟ್ಟು ಹೋಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ವ್ಯಕ್ತಿ 5.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿಬಣ್ಣ, ತಲೆಯಲ್ಲಿ ಕಪ್ಪು ಬಿಳಿ ಕೂದಲಿರುತ್ತದೆ. ಕನ್ನಡ, ತೆಲುಗು ಮಾತನಾಡುತ್ತಾರೆ. 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾ. ಎಡೇಹಳ್ಳಿ ವಾಸಿ ರಾಜಪ್ಪ ಎಂಬುವವರ ಮಗಳು ಹಾಲಮ್ಮ  ಎಂಬ 16 ವರ್ಷದ  ಬಾಲಕಿ ಮಾರ್ಚ್ 2022 ರಂದು ಮೆಗ್ಗಾನ್ ಆಸ್ಪತ್ರೆಯಿಂದ ಹೋಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ಬಾಲಕಿ 4.4 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಕಪ್ಪು ಕೂದಲಿರುತ್ತದೆ. ಕನ್ನಡ, ಮಾತನಾಡುತ್ತಾರೆ ಕಾಣೆಯಾದ ವೇಳೆ ಶಾಲಾ ಸಮವಸ್ತç ಧರಿಸಿರುತ್ತಾಳೆ. 

ಶಿವಮೊಗ್ಗ ಜಿಲ್ಲೆ ಮಿಳಘಟ್ಟ ಗ್ರಾಮದ ಲಕ್ಷ್ಮೀ ಕ್ಯಾಂಟೀನ್ ಹತ್ತಿರ ವಾಸಿ ಹೀನಾ ಕೌಸರ್ ಎಂಬುವವರ ಪತಿ ಸೈಯ್ಯದ್ ಮಸೀವುಲ್ಲಾ ಬಿನ್ ಅಬ್ದುಲ್ ಖಾದರ್ ಎಂಬ 45 ವರ್ಷದ ವ್ಯಕ್ತಿ ನವೆಂಬರ್ 2022 ರಂದು ಮನೆಬಿಟ್ಟು ಹೋಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ವ್ಯಕ್ತಿ 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಬಿಳಿ ಬಣ್ಣ ತಲೆಯಲ್ಲಿ ಕಪ್ಪು ಕೂದಲಿರುತ್ತಾರೆ. ಕನ್ನಡ,ಉರ್ದು ಮಾತನಾಡುತ್ತಾರೆ. 

ಈ ಕಾಣೆಯಾದ ವ್ಯಕ್ತಿಗಳ ಬಗ್ಗೆ ಸುಳಿವು ಕಂಡಲ್ಲಿ ಶಿವಮೊಗ್ಗ ಎಸ್.ಪಿ ಕಚೇರಿ 08182-261400, ಹಾಗೂ ದೊಡ್ಡಪೇಟೆ ಪೋಲಿಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ದೊಡ್ಡಪೇಟೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close