ಮಾಜಿ ಡಿಸಿಎಂ ಈಶ್ವರಪ್ಪ ಜೈಲ್‌ಭರೋಗೆ ಕರೆ ನೀಡಿದ್ದೇಕೆ?



ಸುದ್ದಿಲೈವ್/ಶಿವಮೊಗ್ಗ


ವಾಲ್ಮೀಕಿ ಅಭವೃದ್ಧಿ ನಿಗಮದ ಅಧಿಕಾರಿ ಸತ್ತು ಮೂರು ತಿಂಗಳು ಕಳೆದರೂ ರಾಜ್ಯ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಸೆ.20 ರ ಒಳಗೆ ಪರಿಹಾರ ನೀಡದಿದ್ದರೆ ಜೈಲ್ ಭರೋ ಚಳುವಳಿ ನಡೆಸುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಕ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಠಾಚಾರ ಬಯಲಿಗೆ ಎಳೆದು ದಲಿತರಿಗೆ ಸಿಗಬೇಕಿದ್ದ ಹಣವನ್ನ ದೊರೆಯುವಂತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವರು ಮತ್ತು ಅಧಿಕಾರಿಗಳು ಜೈಲಿನಲ್ಲಿದ್ದಾರೆ ಎಂದರು. 


ಕುಟುಂಬ ಸರಿಯಿಲ್ಲದಿದ್ದರು ರಾಜ್ಯದ ಹಿತದೃಷ್ಠಿಯಿಂದ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದು ಸರ್ಕಾರ ಸದನದಲ್ಲಿಯೇ 25 ಲಕ್ಷರೂ ಪರಿಹಾರ ನೀಡುವುದಾಗಿ ಘೋಷಿಸಿದ್ದರೂ ಹಣ ತಲುಪಿರಲಿಲ್ಲ. ನಾನು ಸಚಿವ ಹೆಚ್ ಸಿ ಮಹದೇವಪ್ಪನವರಿಗೆ ಪರಿಹಾರ ನೀಡುವ ಬಗ್ಗೆ ತಿಳಿಸಿದ್ದೆ. ಸಚಿವರು 10 ದಿನಗಳವರೆಗೆ ಕಾಯ ಕೇಳಿದ್ದರು. 


ಸರ್ಕಾರದ ಹಣ ಸೆ.10 ರಂದು ಬಾರದಿದ್ದರೆ ರಾಷ್ಟ್ರಭಕ್ತರ ಬಳಗ ಹಣ ಸಂಗ್ರಹಿಸಿ ಚಂದ್ರಶೇಖರ್ ಕುಟುಂಬಕ್ಕೆ  ನೀಡುವುದಾಗಿ ಹೇಳಿದ್ವಿ, ಇಂದು ಸೆ.9 ಆಗಿದೆ. ಹೆಚ್ ಸಿ ಮಹಾದೇವಪ್ಪ ಪ್ರವಾಸದಲ್ಲಿದ್ದು 13 ರಂದು ಬೆಂಗಳೂರಿಗೆ ಬರಲಿದ್ದಾರೆ. ಸೆ.13 ರಂದು ಹಣ ಬಾರದಿದ್ದರೆ ನಾವು ಸೆ.14 ರಂದು  11-30 ಕ್ಕೆ 5 ಲಕ್ಷ ರೂ. ಹಣ ನೀಡಲಿದ್ದೇವೆ. ಸೆ.20 ರಂದು ಸರ್ಕಾರ ಹಣ ನೀಡದಿದ್ದರೆ ಜೈಲ್ ಭರೋ ಚಳುವಳಿ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. 


ಸರ್ಕಾರ ಬದುಕಿದ್ದರೆ ನೊಂದಕುಟುಂಬಕ್ಕೆ ಹಣ ಕೊಡಲಿ, ಇಲ್ಲವಾದಲ್ಲಿ ನಮ್ಮ ಹೋರಾಟ ಖಚಿತವಾಗಲಿದೆ. ಎಲ್ಲರ ಕಣ್ಣು ಸಿಎಂ ಸ್ಥಾನದಲ್ಲಿದೆ. ಯಾರ ಕಣ್ಣು ಎಲ್ಲಿಬೇಕಾದರೂ ಬೀಳಲಿ ಆದರೆ ಪ್ರಮಾಣಿಕ ಕುಟುಂಬದವರ ಹಣ ಒದಗಿಸಲಿ ಎಂದು ಆಗ್ರಹಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು