ಸುದ್ದಿಲೈವ್/ಶಿವಮೊಗ್ಗ
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪದೇ ಪದೇ ಹಿಂದು ಸಂಘಟನೆ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಾದ್ಯಂತ ಗಣೇಶ ವಿಸರ್ಜನೆ ಬಹಳ ಅರ್ಥ ಪೂರ್ಣವಾಗಿ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ನಾಗಮಂಗಲದಲ್ಲಿ ಅಹಿತಕರ ಘಟನೆ ನಡೆದಿದೆ, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ದಾವಣಗೆರೆಯಲ್ಲಿಯೂ ಕಲ್ಲತೂರಾಟ, ವಾಹನಗಳ ಜಖಂಗೊಳಿಸುವ ಘಟನೆ ನಡೆದಿದೆ.
ಹಿಂದು ಸಂಘಟನೆ ಮೇಲೆ ಹಬ್ಬದ ದಿನ ದಾಳಿ ನಡೆಯುತ್ತದೆ. ತುಮಕೂರಿನಲ್ಲಿ ಪೊಲೀಸರು ಕುಲಸಚಿವರಿಗೆ ಪತ್ರ ಬರೆಯುತ್ತಾರೆ. ವಿದ್ಯಾರ್ಥಿಗಳನ್ನ ಗಣಪತಿ ಮೆರವಣಿಗೆಗೆ ಕಳುಹಿಸಬಾರದು ಅಂತಾ ಪತ್ರ ಬರೆಯುತ್ತಾರೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಡಿ ಅಂತಾ ತಾಖೀತು ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಅವರ ಕುಮ್ಮಕ್ಕಿನಿಂದ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಿಂದೂ ಭಾವನೆಗಳ ಮೇಲೆ ಧಕ್ಕೆ ತರುವಂತಹ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಸರಕಾರ ಇಷ್ಟೊಂದು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ತುಮಕೂರಿನಲ್ಲಿ ದುರಹಂಕಾರದಿಂದ ಪೊಲೀಸರು ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ದುರಂಹಕಾರ ಇಲ್ಲದಿದ್ದರೆ ಪತ್ರ ಬರೆಯುತ್ತಿರಲಿಲ್ಲ ಎಂದು ಆರೋಪಿಸಿದರು.
ಹಿಂದು ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸರಕಾರ ನಡೆದುಕೊಳ್ಳುತ್ತಿದೆ. ಕುಲಸಚಿವರು ಈ ಸುತ್ತೊಲೆ ಹಿಂಪಡೆಯಬೇಕು. ರಾಜ್ಯ ಸರಕಾರದ ನಡವಳಿಕೆ ದೇಶದ್ರೋಹಿಗಳಿಗೆ ದೊಡ್ಡ ಶಕ್ತಿ ತಂದುಕೊಡ್ತಿದೆ. ಸರಕಾರದ ನಡವಳಿಕೆ ರಾಜ್ಯಕ್ಕೆ ಮಾರಕವಾಗ್ತದೆ. ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ ಎಂದು ದೂರಿದರು.
ಪ್ಯಾಲೆಸ್ಟೈನ್ ರಾಷ್ಟ್ರದ ಧ್ವಜ ಹಾರಿಸುತ್ತಾರೆ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಸರಕಾರದ ಧೋರಣೆಯಿಂದ ಇಂತಹ ಘಟನೆ ನಡೆಯುತ್ತವೆ. ಮೊದಲೇ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದರು.
ಮುನಿರತ್ನ ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು.ತಪ್ಪು ಮಾಡಿದ್ದರೆ ಸೂಕ್ತ ತನಿಖೆಯಾಗಲಿ ನಾವು ಬೇಡ ಅನ್ನುವುದಿಲ್ಲ. ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಬೇಕು. ಸರಕಾರ ವಿಪಕ್ಷಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡ್ತಿದ್ದಾರೆ. ಓಪನ್ ಆಗಿ ಕೇಸ್ ಹಾಕ್ತೇವೆ ಅಂತಾ ಬೆದರಿಸುತ್ತಾರೆ. ಇವೆಲ್ಲಾ ಸರಿಯಲ್ಲ ಎಂದರು.