ಶುಕ್ರವಾರ, ಸೆಪ್ಟೆಂಬರ್ 6, 2024

ಮಂಡ್ಲಿಯಲ್ಲಿ ಮಂಟಪವನ್ನೇರಲಿರುವ ವೀರಾಂಜನೇಯ, ಬಜಾರ್ ನ ಮಹಾದ್ವಾರದ ಅಲಂಕಾರ ಈ ಬಾರಿ ಏನಾಗಲಿದೆ ಎಂಬುದೇ ಕುತೂಹಲ?


ಸುದ್ದಿಲೈವ್/ಶಿವಮೊಗ್ಗ


ಗಣಪತಿ ಹಬ್ಬ ಸಮೀಪಿಸುತ್ತಿದ್ದಂತೆ ಶಿವಮೊಗ್ಗದಲ್ಲಿ ಹೆಚ್ಚು ಚರ್ಚೆ ಮತ್ತು  ಕುತೂಹಲ ಮೂಡಿಸುವುದೇ ಗಾಂಧಿಬಜಾರ್ ನ ಮಹಾದ್ವಾರ, ಸಾಮಾಜಿಕ ಜಾಲತಾಣ ಮತ್ತು ಯುವ ಸಮೂಹದಲ್ಲಿ ಕಲಾಕೃತಿಯ ಬಗ್ಗೆ ಹೆಚ್ಚಿನ ಚರ್ಚೆ ಆಗಲಿದೆ. 


ಗಣೇಶ ಹಬ್ಬ ಬಂದರೆ ಈ‌ ಮಹಾದ್ವಾರದಲ್ಲಿ ಕಲಾವಿದ ಜೀವನ್ ಅವರಿಂದ ಏನೂ ಕಲಾಕೃತಿಗಳು ಮೂಡಿಬರಲಿದೆ ಎಂಬುದೇ ಚರ್ಚೆಗೆ ಗ್ರಾಸವಾಗಲಿದೆ.  ಮೂವತ್ತು ವರ್ಷದಿಂದ ಕಲಾವಿದನಾಗಿ  ತನ್ನ ಹದಿನೈದು ವರ್ಷಗಳ ಕಲಾಕೃತಿ ನಿರ್ಮಾಣ ಕಾಯಕದಲ್ಲಿ ಜೀವನ್ ತೊಡಗಿಸಿಕೊಂಡು ಬರುತ್ತಿದ್ದಾರೆ. 


ಪ್ರತೀ ವರ್ಷವೂ ಶಿವಮೊಗ್ಗ ನಗರದ ಗಾಂಧಿ ಬಜಾರ್-ಶಿವಪ್ಪ ನಾಯಕ ಮಹಾದ್ವಾರದಲ್ಲಿ ನಿರ್ಮಾಣವಾಗುವ ಬೃಹದಾಕಾರದ ಕಲಾಕೃತಿ ಜನಕನೇ ಈ ಜೀವನ್‌ ಆಗಿದ್ದಾರೆ.‌ 2018 ರಲ್ಲಿ ರಾಮಮಂದಿರ ಕಲಾಕೃತಿ ಮೂಡಿಬಂದರೆ, 2019 ರಲ್ಲಿ ಶಿವಾಜಿ ಮಹಾರಾಜ ಈ ಮಹಾದ್ವರದ ಮೇಲೆ ರಾರಾಜಿಸಿದ್ದ. ನಂತರ ಎರಡು ವರ್ಷದ ಕೊರೋನ ಹಿನ್ನಲೆಯಲ್ಲಿ ಕಲಾಕೃತಿ ಸ್ಥಗಿತವಾಗಿತ್ತು.‌


2022 ರಿಂದ ಮತ್ತೆ ಜೀವನ್ ಅವರ ಕಲಾಕೃತಿ ಚರ್ಚೆಗೆ ಗ್ರಾಸವಾಗಿತ್ತು. 2022 ರಲ್ಲಿ ಗೀತೋಪದೇಶ, 2023 ರಲ್ಲಿ ಉಗ್ರ ನರಸಿಂಹನ ಕಲಾಕೃತಿ ಮೂಡಿ ಬಂದಿದೆ. ಈ ಬಾರಿ ಜೀವನ್ ಅವರ ಕಲಾಕೃತಿಗೆ ಐದನೇ ವರ್ಷದ ಸಂಭ್ರಮ ಈ ಸಂಭ್ರಮದ ವೇಳೆ ಯಾವಕಲಾಕೃತಿ ಮೂಡಿ ಬರಲಿದೆ ಕಾದು ನೋಡಬೇಕಿದೆ. 


ಈತ ಸೃಷ್ಟಿಸುವ ಕಲಾಕೃತಿಗಳು ರಾಜ್ಯದಲ್ಲಷ್ಟೇ ಅಲ್ಲ ದೇಶದೆಲ್ಲೆಡೆ ಸದ್ದು ಮಾಡುತ್ತವೆ. ನಗರದ ನಾನಾ ಕಡೆ ಸರ್ಕಲ್ ಗಳಲ್ಲಿ ಜೀವನ್ ಸೃಷ್ಟಿಸುವ ಪ್ರತಿಕೃತಿಗಳೇ ರಾರಾಜಿಸುತ್ತಿವೆ. 


ಈ ವರ್ಷ ಮಹಾದ್ವಾರದ ಕಲಾಕೃತಿ ಏನು ಎಂಬುದರ ಬಗ್ಗೆ ಹದಿನೈದು ದಿನಗಳಿಂದ ಚರ್ಚೆ ಆರಂಭವಾಗಿದೆ. ಸೆ.13 ರಂದು ಸಂಜೆಯ 6-30 ರ ನಂತರ ಕಲಾಕೃತಿ ಏನಾಗಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.  ಸೋಷಿಯಲ್ ಮೀಡಿಯಾದಲ್ಲಿ ಅರೆಬರೆ ವಿಡಿಯೋಗಳು ಬರುತ್ತಿವೆ. ಪ್ರತೀವರ್ಷ ಶಿವಮೊಗ್ಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವ ಜೀವನ್ ಈ ವರ್ಷವೂ ರಾಷ್ಟ್ರವ್ಯಾಪಿ ಹರಡುವ ಕಲಾಕೃತಿ ಮಾಡಿಸಲಿದ್ದಾರಾ? ಎಂಬುದೇ ಚರ್ಚೆಯಾಗಿದೆ.  ಆದರೆ ಎಲ್ಲಿಯೂ ಸುಳಿವು ಬಿಟ್ಟುಕೊಡುತ್ತಿಲ್ಲ. ಇದೇ ಅವರ ಕಲಾಕೃತಿಯ ವಿಶೇಷವೂ ಹೌದು!


ಶಿವಮೊಗ್ಗ ಹೊರವಲಯದಲ್ಲಿರುವ ಜೀವನ್ ಕಲಾಮಂದಿರ ಬಿಡಾರ ಯುವಕರಿಗೂ ನೆಚ್ಚಿನ ಶೆಡ್ ಆಗಿ ಹೊರಹೊಮ್ಮಿದೆ. ಪ್ರತೀ ದಿನ ಕಲಾಕೃತಿ ನೋಡಲು ಅನೇಕ ಯುವಕರು ಬರುತ್ತಾರೆ. ಅವರನ್ನ ಕಾಯೋದೇ ದುಸ್ತರವಾಗಿದೆ.ಈ ವರ್ಷದ ಇನ್ನೊಂದು ಆಕರ್ಷಣೆ ಬಗ್ಗೆ ಜೀವನ್ ಮಾತನಾಡಿದ್ದಾರೆ. ನ್ಯೂಮಂಡ್ಲಿಯ ಗಣಪತಿ ಉತ್ಸವಕ್ಕೆ ನಾಳೆ 29 ಅಡಿಯ ಕಲಕೃತಿ ಮಂಟವೇರಲಿದೆ. 


ಇಪ್ಪತೈದು ಅಡಿ ಎತ್ತರದ ಆಂಜನೇಯ ಹಾಗೂ ಆತನ ಹೆಗಲ ಮೇಲೆ ರಾಮ-ಲಕ್ಷ್ಮಣರ ಪ್ರತಿಕೃತಿ, ನ್ಯೂ ಮಂಡ್ಲಿಯಲ್ಲಿ ಶನಿವಾರ ಮುಂಜಾನೆ ತಲೆ‌ ಎತ್ತಲಿದೆ. ಒಟ್ಟಿನಲ್ಲಿ ಶಿವಮೊಗ್ಗ ಗಣೇಶೋತ್ಸವಕ್ಕೆ ಎಲ್ಲ ರೀತಿಯ ಪೂರ್ವ ತಯಾರಿ ಸಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ