ಮುಂದುವರೆದ ಆನೆಗಳದಾಳಿ, ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ

ಸಾಂಧರ್ಭಿಕ ಚಿತ್ರ


ಸುದ್ದಿಲೈವ್/ಶಿವಮೊಗ್ಗ 

ತಾಲ್ಲೂಕಿನ ಆಯನೂರು ಹೋಬಳಿ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಚಿಲುಮೆಜೆಡ್ಡು ಗ್ರಾಮದ ವರದಳ್ಳಿ ಚೌಡಪ್ಪನವರ ಗದ್ದೆಗೆ ಬುಧವಾರ ಬೆಳಗಿನಜಾವ ನುಗ್ಗಿದ ಕಾಡಾನೆಗಳು ಭತ್ತದ ಗದ್ದೆ ತುಳಿದು ನಾಶ ಮಾಡಿವೆ.

ಮೂರು ಆನೆಗಳು ಕೂಡಿ, ಯರೆಬೀಸು, ಕೆಸುವಿನ ಹೊಂಡ, ಅಡ್ಡೇರಿ ಭಾಗದಲ್ಲಿ ಸಂಚರಿಸುತ್ತಿದ್ದು, ಗದ್ದೆ, ತೋಟಗಳಿಗೆ ನುಗ್ಗಿ ನಿರಂತರವಾಗಿ ಫಸಲು ಹಾಳು ಮಾಡುತ್ತಿವೆ. ಈ ಭಾಗದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು,ಸಾಗುವಳಿ ಮಾಡಿದ ಅರ್ಧ, ಒಂದು ಎಕರೆ ಭತ್ತದ ಗದ್ದೆಯನ್ನು ನಾಶಪಡಿಸುತ್ತಿವೆ. ಇದು ರೈತರ ಹೊಟ್ಟೆ ಮೇಲೆ ತಣ್ಣೀರು ಹಾಕುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close