ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೇನಿ ಬೆಂಬಲಿಸಿ ಹಾಕಲಾದ ಫ್ಲೆಕ್ಸ್-ಮಾಳೂರು ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ದೂರು ದಾಖಲು

 


ಸುದ್ದಿಲೈವ್/ತೀರ್ಥಹಳ್ಳಿ


ಹಣಹೆರೆಕಟ್ಟೆಯ ದರ್ಗಾದ ಎದುರುಗಡೆ ರಾರಾಜಿಸಿದ we stand with Palestine ಎಂಬ ಫ್ಲೆಕ್ಸ್ ಬೋರ್ಡ್ ಹಾಕಿರುವ ಕಿಡಿಗೇಡಿಗಳ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣವೊಂದು ದಾಖಲಾಗಿದೆ.


ಈ ಘಟನೆಯು ಈದ್ ಮಿಲಾದ್ ಹಬ್ಬದಂದೇ ನಡೆದಿದ್ದು, ಈದ್ ಹಬ್ಬದ ಪ್ರಯುಕ್ತ ಹಣಗೆರೆ ಗ್ರಾಮದಲ್ಲಿರುವ ನೂರ್ ಜಾಮಿಯಾ ಮಸೀದಿಯ ಮತ್ತು ಗ್ರಾಮದಲ್ಲಿ ಮುಸ್ಲಿಂ ಧರ್ಮದವರು ನಡೆಸುವ ಮೆರವಣಿಗೆಗೆ ಪೊಲೀಸ್ ಇಲಾಖೆಯ ಬಂದೋಬಸ್ತ್ ನಿಯೋಜಿಸಲಾಗಿತ್ತು. 


ಅಂದು ಮಧ್ಯಾಹ್ನ ಮದ್ಯಾಹ್ನ 02.00 ಗಂಟೆಗೆ ಪ್ರಾರ್ಥನೆ ನಡೆಯಲಿದ್ದು,  ನಂತರ ಗ್ರಾಮದ ಆಯನೂರು - ಬೆಜ್ಜವಳ್ಳಿ, ನಡುವಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲು ಸಿದ್ಧತೆ ನಡೆದಿತ್ತು. ಮೆರವಣಿಗೆಗೂ ಮೊದಲು ಮೆರವಣಿಗೆ ಮಾರ್ಗ ತಪಾಸಣೆ ನಡೆಸಿದ ಪೊಲೀಸರಿಗೆ ದರ್ಗಾದ ಎದುರೆ ಈ ಫ್ಲೆಕ್ಸ್ ಗೋಚರವಾಗಿದೆ.


ಮೆರವಣಿಗೆಯ ಉದ್ದಕ್ಕೂ  ಹಸಿರು ಮತ್ತು ಬಿಳಿಯ ಬಣ್ಣದ ಬಂಟಿಂಗ್ಸ್ ಗಳನ್ನು ಕಟ್ಟಿದ್ದು, ಅಲ್ಲಿಲ್ಲಿ ಬ್ಯಾನರ್ ಗಳನ್ನು ಸಹ ಹಾಕಲಾಗಿತ್ತು.  ಹಣಗೆರೆ ಗ್ರಾಮದ ದರ್ಗಾದ ಹತ್ತಿರದ ಮುಖ್ಯ ರಸ್ತೆಯ ಪಕ್ಕದಲ್ಲಿ ಉದ್ದೇಶ ಪೂರ್ವಕವಾಗಿ ಪ್ಯಾಲೆಸ್ತಾನವನ್ನ ಬೆಂಬಲಿಸುವ ಫ್ಲೆಕ್ಸ್ ಹಾಕಲಾಗಿದೆ. 


ಗಲಭೆಗೆ ಪ್ರಚೋದನೆಯಾಗುವಂತೆ ಒಂದು ದೊಡ್ಡ ಬ್ಯಾನ‌ರ್ ನಲ್ಲಿ ಯುದ್ಧಭೂಮಿಯಿದ್ದು ಅದರ ಕೆಳಗೆ ಮಸೀದಿಯಂತಹ ಚಿತ್ರ ಇದ್ದು ಬ್ಯಾನರ್ ನ ಮದ್ಯದಲ್ಲಿ WE STAND WITH PALESTIN ಎಂಬುದಾಗಿ ಇಂಗ್ಲಿಷ್ ನಲ್ಲಿ ಬರೆಯಲಾಗಿದೆ.  ಸಾರ್ವಜನಿಕರ ಸ್ಥಳದಲ್ಲಿ ಪ್ರಚೋದನೆಗೆ ಕಾರಣವಾದ ಫ್ಲೆಕ್ಸ್ ಹಾಕಿದ ಕಿಡಿಗೇಡಿಗಳ ವಿರದ್ದ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು