ಅಬ್ಬಲಗೆರೆ ಸಹಕಾರ ಸಂಘಕ್ಕೆ ಅನುದಾನ ಕೊಡಿಸಲು ಬದ್ಧ-ಶಾರದಾ ಪೂರ್ಯನಾಯ್ಕ್


ಸುದ್ದಿಲೈವ್/ಶಿವಮೊಗ್ಗ

ಸಹಕಾರ ಕ್ಷೇತ್ರಕ್ಕೆ ರೈತರೇ ಜೀವನಾಡಿ ಇದ್ದಂತೆ,ರೈತರು ಹಾಗೂ ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚು ತೋಡಗಿಸಿಕೂಂಡರೆ ಇತರೆ ಕ್ಷೇತ್ರಗಳಿಗೆ ಬೇಡಿಕೆ ಹಚ್ಚಾಗುತ್ತದೆ ಎಂದು ಶಾಸಕಿ ಶಾರದಪೂರ್ಯಾನಾಯ್ಕ ತಿಳಿಸಿದರು.  

ಅವರು, ಅಬ್ಬಲಗೆರೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ಗೋದಾಮಿನ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಸಂಘವು ಅಭಿವೃದ್ಧಿ ಹಾದಿಯಲ್ಲಿ ದಾಪುಗಾಲು ಹಾಕುತ್ತಿದ್ದು, ಸಂಘಕ್ಕೆ ಸರ್ಕಾರದ ಸೌಲಭ್ಯಗಳು ಅತೀ ಹೆಚ್ಚು ಲಭ್ಯವಾಗಬೇಕಿದೆ. ಮುಂದಿನ ದಿನದಲ್ಲಿ ಅನುದಾನ ಕೊಡಿಸಲು ಬದ್ದನಿದ್ದನೆ ಎಂದರು.                       

ಗೋದಾಮನ್ನ ಉದ್ಘಾಟಿಸಿ ಮಾತನಾಡಿದ ಎಂಎಲ್ ಸಿ ಬಲ್ಕಿಶ್ ಭಾನು, ಸಹಕಾರ ಕ್ಷೇತ್ರದಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಪ್ರಾತಿನಿಧ್ಯ ಬಹಳ ಅವಶ್ಯಕತೆ ಇದೆ. ಆ ಮೂಲಕವೇ ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಅಗಲಿದೆ ಎಂದರು.

ಅಬ್ಬಲಗೆ ಸಂಘ ರೈತರ ಬಾಳು ಹಸನು ಮಾಡಲು ಉತ್ತಮವಾದ ಹೆಜ್ಜೆ ಇಡುತ್ತಿದ್ದು, ಅವರ ಕೆಲಸಕ್ಕೆ ಎಲ್ಲರೂ ಒತ್ತು ನೀಡಬೇಕು. ಸಂಘದ ಆಡಳಿತ ಮಂಡಳಿ ಕಚೇರಿಯನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡರು ಉದ್ಘಾಟಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದೀಶ್ವರ್ ಕೆ.ಎಲ್. ವಹಿಸಿದ್ದರು, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಮರಿಯಪ್ಪ, ನಿರ್ದೇಶಕ ದುಗ್ಗಪ್ಪಗೌಡರು ಹಾಗೂ ಸಂಘ ಎಲ್ಲಾ ಪಾಧಿಕಾರಿಗಳು ನಿರ್ದಶಕರು ಹಾಗೂ ಸಹಕಾರಿ ಬಂದುಗಳು ಹಾಜರಿದ್ದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket