ಶರತ್ ಕಲ್ಯಾಣಿ ನಂತರ ಮತ್ತೋರ್ವ ಬಿಜೆಪಿ ಸದಸ್ಯನ ವಿರುದ್ಧ ಮಹಿಳೆಯಿಂದ ದೂರು ದಾಖಲು


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದಲ್ಲಿ ಬಿಜೆಪಿಯ ಮತ್ತೊಬ್ಬ ಸದಸ್ಯರ ಮೇಲೆ ಮಹಿಳೆ ಒಬ್ಬರು  ಕೆಲಸ ಕೊಡಿಸುವುದಾಗಿ, ಮದುವೆಯಾಗುವುದಾಗಿ ನಂಬಿಸಿ, ಲಕ್ಷಾಂತರ ರೂ ಹಣವನ್ನ ಪಡೆದು ವಂಚಿಸಿರುವ ಪ್ರಕರಣ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಶರತ್ ಕಲ್ಯಾಣಿಯ ನಂತರ ಮತ್ತೋರ್ವ ಬಿಜೆಪಿಯ ಸದಸ್ಯನ ವಿರುದ್ಧ ಮಹಿಳೆಯೊಬ್ಬರನ್ನ‌ ವಂಚಿಸಿದ ಪ್ರಕರಣ ದೂರು ದಾಖಲಾಗಿದೆ. ಅಬ್ಬಲಗೆರೆ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರು, ಬಸ್ ನ ಮಾಲೀಕರು ಗ್ರಾಮಪಂಚಾಯಿತಿ ಒಕ್ಕೂಟದ ತಾಲೂಕು ಅಧ್ಯಕ್ಷರು, ಮಾಜಿ ಸೂಡ ನಿರ್ದೇಶಕ,  ಬಿಜೆಪಿ ಎಸ್ ಸಿ‌ ಮೋರ್ಚಾದ ಉಸ್ತುವಾರಿ ಆಗಿರುವ ಮಂಜುನಾಥ್ ಮತ್ತು ಅವರ ಪತ್ನಿಯ ವಿರುದ್ಧ ಮಹಿಳೆಯೊಬ್ಬರು ವಂಚನೆಯ ದೂರನ್ನ ದಾಖಲಿಸಿದ್ದಾರೆ‌. 



ಮಂಜುನಾಥ್ ಎಂಬುವರಿಗೆ ಶರಾವತಿ ನಗರದ ಮಹಿಳೆಯೊಬ್ಬರು ಪರಿಚಯವಾಗ್ತಾರೆ. ಅವರ ಪತಿ ಅನಾರೋಗ್ಯದ ಹಿನ್ನಲೆಯಲ್ಲಿ 8 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು.  ಸಾವನ್ನಪ್ಪಿದ ಬೆನ್ನಲ್ಲೇ ಅಂಗನವಾಡಿ ಕೆಲಸ ಕೊಡಿಸುವುದಾಗಿ ಮಂಜುನಾಥ್ ಪರಿಚಯವಾಗ್ತಾರೆ. 


ಪರಿಚಯ ಬೆನ್ನಲ್ಲೇ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಸಲುಗೆಯ ಕಾರಣ ಮಹಿಳೆಯನ್ನ ಮಂಜುನಾಥ್  ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಲೈಂಗಿಕವಾಗಿ ಮಹಿಳೆಯನ್ನ ಬಳಿಸಿಕೊಂಡ ಮಂಜುನಾಥ್ ಮದುವೆಯಾಗುವುದಾಗಿ ನಂಬಿಸಿದ್ದಾರೆ. ಇವರ ಮದುವೆಗೆ ಮಂಜುನಾಥರ ಪತ್ನಿಯೂ ಒಪ್ಪಿರುವುದಾಗಿ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ‌.


2019 ರಿಂದ ಇಲ್ಲಿಯ ವರೆಗೆ ಹಂತ ಹಂತವಾಗಿ 6 ಲಕ್ಷ ಹಣವನ್ನ ಮಂಜುನಾಥ್  ಪಡೆದಿದ್ದು, ನಂತರದ ದಿನಗಳಲ್ಲಿ ಮಹಿಳೆಯ ಮನೆಯ ಕಡೆ ಹೋಗುವುದನ್ನ, ಆಕೆಯ ಕರೆಯನ್ನ ಸ್ವೀಕರಿಸುವುದನ್ನ  ನಿಲ್ಲಿಸಿದ್ದ ಕಾರಣ  ಮಹಿಳೆ ಸೆ.1 ರಂದು ಮಂಜುನಾಥ್ ಮನೆಗೆ ಹೋಗಿ ಹಣಕೊಡಿ ಎಂದು ಕೇಳಿದ್ದಾರೆ. 


ಮಹಿಳೆಯ ಮಗನ ಕೈಯಲ್ಲಿದ್ದ ಎರಡು ಮೊಬೈಲ್ ಕಿತ್ತುಕೊಂಡಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ವೇಳೆ ಮಹಿಳೆಯ ಕುತ್ತಿಗೆಯಲ್ಲಿದ್ದ 20 ಗ್ರಾಂ ಚಿನ್ನದ ಸರ ಮತ್ತು ಕಿವಿ ಓಲೆ ಕಿತ್ತುಕೊಂಡಿರುವುದಾಗಿ‌ ದೂರಿನಲ್ಲಿ ಆರೋಪಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close