ನಾಳೆ ಮಿಲಾದ್ ಮೆರವಣಿಗೆಗೆ ಸಕಲ ಸಿದ್ದತೆ


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದಲ್ಲಿ ನಾಳೆ ಮುಸ್ಲೀಂ ಸಮುದಾಯದವರ ಈದ್ ಮೆರವಣಿಗೆ ನಡೆಯಲಿದೆ. ಈದ್ ಮೆರವಣಿಗೆಗಾಗಿ ನಗರದ ಪ್ರಮುಖ ವೃತ್ತದಲ್ಲಿ ಅಲಂಕಾರಗಳನ್ನ ಮಾಡಲಾಗುತ್ತಿದೆ. ಅಮೀರ್ ಅಹಮದ್ ವೃತ್ತದಲ್ಲಿ, ಮೆಕ್ಕಮದೀನ ಕಲಾಕೃತಿ ನಿರ್ಮಿಸಲಾಗುತ್ತಿದೆ.  ಮಹಾವೀರ ವೃತ್ತದಲ್ಲಿ, ಬೈಪಾಸ್, ಸೂಳೆಬೈಲು ಮತ್ತು ಮೆರವಣಿಗೆ ಹೋಗು ಮಾರ್ಗಗಳಲ್ಲಿ ಹಸಿರು ಬಾವುಟ ಬಂಟಿಂಗ್ಸ್ ಕಟ್ಟಲಾಗಿದೆ. 

ನಾಳೆ ನಗರದಲ್ಲಿ ನಡೆಯುವ ಮೆರವಣಿಗೆಗೆ ಜಿಲ್ಲಾಡಳಿತ ಸಕಲ ಬಂದೋಬಸ್ತ್‌ನ್ನ ಮಾಡಿಕೊಂಡಿದ್ದಾರೆ.  ಶಿವಮೊಗ್ಗ ನಗರದಲ್ಲಿ ನಡೆಯುವ ಈದ್ ಮಿಲಾದ್ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು,  25 ಪೊಲೀಸ್  ಉಪಾಧೀಕ್ಷಕರು, 60 ಪೋಲಿಸ್ ನಿರೀಕ್ಷಕರು, 110 ಪೊಲೀಸ್ ಉಪನಿರೀಕ್ಷಕರು, 



200 ಸಹಾಯಕ ಪೊಲೀಸ್ ನಿರೀಕ್ಷಕರು, 3500 ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, 01-RAF  ತುಕಡಿ 08 ಡಿಎಆರ್ ತುಕಡಿ, 01 QRT ತುಕಡಿ,  01 DSWAT ತುಕಡಿ, 10 ಕೆಎಸ್ಆರ್.ಪಿ ತುಕಡಿಗಳು, 05 ದ್ರೋಣ್ ಕ್ಯಾಮರಾಗಳು, 100 ವಿಡಿಯೋಗ್ರಾಫರ್ ಗಳನ್ನು ನಿಯೋಜಿಸಲಾಗಿರುತ್ತದೆ.


ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಈ ದಿನ ಮಧ್ಯಾಹ್ನ ಶಿವಮೊಗ್ಗ ನಗರದ ಡಿಎಆರ್ ಕವಾಯಿತು ಮೈದಾನದಲ್ಲಿ ಎಸ್ಪಿ ಮಿಥುನ್ ಕುಮಾರ್ ಐಪಿಎಸ್, ನೇತೃತ್ವದಲ್ಲಿ ಪೊಲೀಸ್ ಕವಾಯಿತು ಮೈದಾನದಲ್ಲಿ ಬ್ರೀಫಿಂಗ್ ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket