ಎಂ.ಶ್ರೀಕಾಂತ್ ಶಾಸಕರಾಗಲಿ-ವಕೀಲ ಶ್ರೀಪಾಲ್



ಸುದ್ದಿಲೈವ್/ಶಿವಮೊಗ್ಗ


ವಕೀಲ ಕೆ.ಪಿ. ಶ್ರೀಪಾಲ್ ಅವರು ಚಳವಳಿಗಳ ಸಂತ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೊಡುಗೈ ದಾನಿ ಎನಿಸಿಕೊಂಡಿರುವ ಎಂ. ಶ್ರೀಕಾಂತ್ ಹೇಳಿದರು.


ಅವರು ಗುರುವಾರ ಸಂಜೆ ಸಹ್ಯಾದ್ರಿ ನಗರ ಪಕ್ಕದ ಕನಕ ಬಡಾವಣೆಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿರುವ ಕೆ.ಪಿ. ಶ್ರೀಪಾಲ್ ಅವರನ್ನು ಅಭಿನಂದಿಸಿ ಮಾತನಾಡಿದರು.


ವಕೀಲರಾಗಿರುವ ಶ್ರೀಪಾಲ್ ಅವರು ಕಳೆದ ಎರಡೂವರೆ ದಶಕಗಳಿಂದ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಚಳವಳಿಗೂ ಒಂದು ಸಾತ್ವಿಕ ನೆಲೆಗಟ್ಟನ್ನು ಕಟ್ಟಿಕೊಟ್ಟವರು. ಅವರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಅವರದು ಮಾನವೀಯತೆಯ ಪಕ್ಷವಾಗಿದೆ. ಅವರ ಹೋರಾಟಗಳೆಲ್ಲ ಸಮಾಜಮುಖಿಯಾಗಿ ಪರಿಸರ ಪ್ರೇಮಿಯಾಗಿ, ಸಾಮಾಜಿಕ ಸಾಮರಸ್ಯಕ್ಕಾಗಿ ಇರುತ್ತವೆ ಎಂದರು.


ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಮಾತನಾಡಿ, ಶ್ರೀಪಾಲ್ ಅವರನ್ನು ಕುವೆಂಪು ವಿವಿ ಸದಸ್ಯರನ್ನಾಗಿ ಮಾಡಿರುವುದು ಅರ್ಥಗರ್ಭಿತವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ್ದಾರೆ. ಸಿಂಡಿಕೇಟ್ ಸದಸ್ಯರಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಮತ್ತಷ್ಟು ಕೆಲಸವನ್ನು ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.


ಕೆ.ಪಿ. ಶ್ರೀಪಾಲ್ ಒಡನಾಡಿ ಸಂಗಾತಿಗಳಾದ ನಾಗರಾಜ್ ಕಂಕಾರಿ, ಹೆಚ್. ಪಾಲಾಕ್ಷಿ, ಕೆ. ರಂಗನಾಥ್, ಮಂಡಗದ್ದೆ ಅನಿಲ್, ಸಿದ್ದಪ್ಪ ಮುಂತಾದವರು ಶ್ರೀಪಾಲ್ ಜೊತೆಗಿನ ಹೋರಾಟದ ಹೆಜ್ಜೆಗಳನ್ನು ನೆನಪು ಮಾಡಿಕೊಂಡರು. ಸಿ.ಎಲ್.ಎಫ್. ಸಂಘಟನೆಯಿAದ ಹೋರಾಟಗಳು ಚಳವಳಿಯ ರೂಪ ತಾಳಿದ್ದವು. ತುಂಗಾ ಮೂಲ ಉಳಿಸಿ ಸೇರಿದಂತೆ ಹಲವು ಚಳವಳಿಗಳನ್ನು ಅವರ ನೇತೃತ್ವದಲ್ಲಿ ನಾವು ಹಮ್ಮಿಕೊಳ್ಳುತ್ತಿದ್ದೆವು. ದಿ. ಈಸೂರು ಲೋಕೇಶ್ ಮತ್ತು ಕೆ.ಪಿ. ಶ್ರೀಪಾಲ್ ನಮಗೆ ಮಾರ್ಗದರ್ಶಕರಾಗಿದ್ದರು ಎಂದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಪಿ. ಶ್ರೀಪಾಲ್, ಸಿಂಡಿಕೇಟ್ ಸದಸ್ಯನಾಗಿರುವುದಕ್ಕೆ ಅಭಿನಂದನೆ ಸಿಗುತ್ತದೆ ಎಂದು ಆಶ್ಚರ್ಯವಾಗಿದೆ. ಈ ಸನ್ಮಾನಗಳಿಂದ ನಾನು ದೂರವಾಗಿದ್ದೆ. ಆದರೂ ಇವರ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಚಳವಳಿಗಳು ಜನರ ಸಹಕಾರದಿಂದಲೇ ಹುಟ್ಟಿಕೊಳ್ಳುತ್ತವೆ. ಹೋರಾಟದ ಅವಧಿಯಲ್ಲಿ ನಕ್ಸಲ್ ಪಟ್ಟ ಸಹ ನನಗೆ ಸಿಕ್ಕಿತ್ತು. ಚಳವಳಿ ಮಾಡುವುದೇ ಒಂದು ದೇಶದ್ರೋಹದ ಕೆಲಸ ಎಂಬAತಹ ಸ್ಥಿತಿಯೂ ನಿರ್ಮಾಣವಾಗಿತ್ತು ಎಂದರು.


ಚಳವಳಿಗಳು ಇಂದು ದಿಕ್ಕು ತಪ್ಪುತ್ತಿವೆ. ವಂಚನೆಗಳ ವಾಸನೆಗಳಿಗೆ ತುತ್ತಾಗುತ್ತಿವೆ. ಇವುಗಳಿಂದ ಹೊರ ಬರಬೇಕಾಗಿದೆ. ವಿಕೃತಗೊಳ್ಳುತ್ತಿರುವ ತಲ್ಲಣಗೊಂಡಿರುವ ಇಂದಿನ ಪರಿಸ್ಥಿತಿಯಲ್ಲಿ ಶಾಂತಿಯೇ ನಮಗೆ ಮುಖ್ಯ ಎಂದ ಅವರು, ಸಿಂಡಿಕೇಟ್ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು.


ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಮು, ರಾಜು, ಜ್ಯೋತಿ ಅರಳಪ್ಪ, ಬೊಮ್ಮನಕಟ್ಟೆ ಮಂಜುನಾಥ್ ಮೊದಲಾದವರಿದ್ದರು.


ಎಂ. ಶ್ರೀಕಾಂತ್ ಶಾಸಕರಾಗಲಿ-ಕೆ.ಪಿ. ಶ್ರೀಪಾಲ್


ಎಂ. ಶ್ರೀಕಾಂತ್ ಅವರು ಕೊಡುಗೈ ದಾನಿಯಾಗಿದ್ದಾರೆ. ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಯಾರನ್ನೂ ಬರಿಗೈಯಲ್ಲಿ ಕಳಿಸಿದ್ದೇ ಇಲ್ಲ. ಹೋರಾಟಗಾರರಿಗೆ ಸ್ಪೂರ್ತಿ ತುಂಬಿದ್ದಾರೆ. ಎಲ್ಲಾ ವಿಷಯಕ್ಕೂ ಶ್ರೀಕಾಂತ್ ಬೇಕು. ಆದರೆ, ಚುನಾವಣೆ ಬಂದಾಗ ಮಾತ್ರ ಏಕೆ ಬೇಡವಾಗುತ್ತಾರೋ ಗೊತ್ತಿಲ್ಲ. ಮುಂದಿನ ಬಾರಿಯಾದರೂ ಎಂ. ಶ್ರೀಕಾಂತ್ ಶಾಸಕರಾಗಬೇಕು  ಎಂದು ವಕೀಲರಾದ ಶ್ರೀಪಾಲ್ ಆಶಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close